ಬೆಂಗಳೂರು: ಪ್ರಶಾಂತ್ ನೀಲ್ ನಿರ್ದೇಶನದಲ್ಲಿ 2014ರಲ್ಲಿ ತೆರೆಕಂಡ "ಉಗ್ರಂ" ಶ್ರೀಮುರಳಿಯ ಅದೃಷ್ಟವನ್ನೇ ಬದಲಿಸಿದ ಚಿತ್ರ. ಈ ಚಿತ್ರದ ನಂತರ ನಟ ಎಂದಿಗೂ ಹಿಂದಿರುಗಿ ನೋಡಿದ್ದಿಲ್ಲ. ಒಂದರ ನಂತರ ಒಂದು ಹಿಟ್ ಚಿತ್ರಗಳು ದಕ್ಕುತ್ತಾ ಹೋಗಿದ್ದವು. ಈಗಲೂ ಸಹ ಶ್ರೀಮುರಳಿ ಎರಡು ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚೇತನ್ ಕುಮಾರ್ ನಿರ್ದೇಶನದ "ಭರಾಟೆ" ಇದರಲ್ಲಿ ಒಂದಾಗಿದ್ದರೆ ಮಹೇಶ್ ಕುಮಾರ್ ಆಕ್ಷನ್ ಕಟ್ ಹೇಳಲಿರಿವ "ಮದಗಜ" ಈ ನಟನ ಮುಂದಿನ ಚಿತ್ರವಾಗಿರಲಿದೆ.
"ಭರಾಟೆ" ಚಿತ್ರದ ಟೀಸರ್ ಹಾಗೂ "ಮದಗಜ" ಚಿತ್ರದ ಟೈಟಲ್ ಪೋಸ್ಟರ್ ಅನ್ನು ಚಾಲೆಮ್ಜಿಂಗ್ ಸ್ಟಾರ್ ದರ್ಶನ್ ಇಂದು ಬಿಡುಗಡೆಗೊಳಿಸಲಿದ್ದಾರೆ.ವಿಶೇಷವೆಂದರೆ ಇಂದು ಶ್ರೀಮುರಳಿ ಜನ್ಮದಿನ ಸಹ ಆಗಿದೆ."ಹುಟ್ಟುಹಬ್ಬವನ್ನು ಎಂದಿಗೂ ಪ್ರೀತಿಪಾತ್ರರೊಡನೆ ಬೆರೆತು ಆಚರಿಸಬೇಕು ಎನ್ನುವುದು ನನ್ನ ಉದ್ದೇಶ, ಇದರಲ್ಲಿ ನಾನು ಬಹಳ ಅದೃಷ್ಟವಂತ, ನಾನು ನನ್ನ ಅಭಿಮಾನಿಗಳೊಂದಿಗೆ ದಿನವನ್ನು ಕಳೆಯಲು ಸಾಧ್ಯವಾಗಿದೆ" ನಟ ಹೇಳಿದ್ದಾರೆ.
ಇನ್ನು ಶ್ರೀಮುರಳಿ ಕೈನಲ್ಲಿ ಇನ್ನೂ ಮೂರು ಚಿತ್ರಗಳಿದೆ. "ಕೆಜಿಎಫ್" ನಿರ್ದೇಶಕರ "ಉಗ್ರಂ ವೀರಂ" ಸಹ ಅದರಲ್ಲಿ ಒಂದು. "ಈ ವರ್ಷಗಲಲ್ಲಿ ನನಗೆ ಹಲವಾರು ಆಫರ್ ಗಳು ಬರುತ್ತಿದೆ, ನಾನು ಎಂದಿಗೂ ಕಥೆಯನ್ನು ನೋಡುತ್ತೇನೆ, ಒಂದು ವೇಳೆ ಕಥೆ ಚೆನ್ನಾಗಿದ್ದದ್ದಾದರೆ ಮಾತ್ರ ಒಪ್ಪಿಕೊಳ್ಳುತ್ತೇನೆ. ಹೀಗಾಗಿಯೇ ನಾನಿಂದು ಚಿತ್ರಗಳ ಸಂಖ್ಯೆಯನ್ನು ಲೆಕ್ಕವಿಡದೆ ಯೋಜನೆಗಳನ್ನು ಒಪ್ಪಿ ಸಹಿ ಹಾಕುತ್ತಿದ್ದೇನೆ. ಇದು ನನ್ನ ವೃತ್ತಿ ಜೀವನದ ಭವಿಷ್ಯ ಹೇಗಿರುತ್ತದೆ ಎನ್ನುವುದನ್ನು ನನಗೆ ನಾನೇ ವಿಶ್ಲೇಷಿಸಿಕೊಳ್ಳುವುದಕ್ಕೆ ಸಹಕಾರಿಯಾಗಲಿದೆ"
"ಎಲ್ಲಾ ಸ್ಟಾರ್ ಗಿರಿಯನ್ನು ಬದಿಗೊತ್ತಿದರೂ ನಂಬಿಕೆ ಮುಖ್ಯವಾಗಿರುತ್ತದೆ" ಎನ್ನುವ ಶ್ರೀಮುರಳಿ ಚಿತ್ರೋದ್ಯಮದಲ್ಲಿ ಇಂದು ನಂಬಿಕೆಯೇ ಮುಖ್ಯ ವಿಚಾರವಾಗಿದೆ ಎನ್ನುತಾರೆ.ಹಾಗೆಯೇ ತಮ್ಮ ಚಿತ್ರ ಜೀವನದ ಆರಂಭಿಕ ದಿನಗಳಲ್ಲಿ ಭದ್ರ ಬುನಾದಿ ಒದಗಿಸಿದ "ಕಾಂತಿ" ಹಾಗೂ "ಚಂದ್ರ ಚಕೋರಿ" ಚಿತ್ರಗಳ ಬಗ್ಗೆ ಅವರಿಗೆ ಕೃತಜ್ಞತೆ ಇದೆ.
ಆದರೆ ಎಲ್ಲೋ ನಾನು ದೊಡ್ಡ ಮತ್ಟದ ಹಿಟ್ ಚಿತ್ರಗಳಿಂದ ಬಹುಕಾಲ ದೂರ ಉಳಿದಿದ್ದೆ, "ಉಗ್ರಂ" ಬಳಿಕವೇ ನನಗೆ ದೊಡ್ಡ ಯಶಸ್ಸು ಲಭಿಸಿದ್ದು. ಹಾಗೂ ಸ್ಟಾರ್ ಗಿರಿಯನ್ನು ಕಂಡುಕೊಂಡದ್ದು ಎನ್ನುವ ಶ್ರೀಮುರಳಿ ತಾವು ಈಗ ಒಂದು ಚಿತ್ರ ಒಪ್ಪಿಕೊಳ್ಳುವ ಮುನ್ನ ಎಲ್ಲಾ ಅಂಶಗಳತ್ತ ಗಮನ ಹರಿಸುತ್ತೇನೆ ಎನ್ನುತ್ತಾರೆ.
ತನ್ನ ಹದಿನೈದು ವರ್ಷಗಳ ಕಾಲದ ವೃತ್ತಿಜೀವವನ್ನೊಮ್ಮೆ ಹಿಂದುರುಗಿ ನೋಡುವ ನಟ "ನಾನು ಎಂದಿಗೂ ನಂಬಿರುವಮ್ತೆ ನನ್ನ ಕೆಲಸದ ಗುಣಮಟ್ಟವು ನನ್ನ ಇದುವರೆಗಿನ ಆಯ್ಕೆಯ ಮೇಲೀ ಅವಲಂಬಿತವಾಗಿರುತ್ತದೆ.ಸರಿಯಾದ ಜನರೊಂದಿಗೆ ಸರಿಯಾಕೆಲಸಗಳಲ್ಲಿ ತೊಡಗಿದ್ದಾರೆನಿಮ್ಮ ವೃತ್ತಿಜೀವನದ ಗ್ರಾಫ್ ಏರುತ್ತಾ ಸಾಗುತ್ತದೆ.ಹಾಗೆಯೇ ಪ್ರೇಕ್ಷಕರ ಇಷ್ಟಾನಿಷ್ಟಗಳ ಬಗ್ಗೆ ಗಮನವನ್ನು ಹರಿಸಬೇಕು.ಅದೇ ನಮಗೆ ಮುಂದೆ ಬೆಳೆಯಲು, ಉಳಿಯಲು ಅವಕಾಶ ಒದಗಿಸುತ್ತದೆ" ಎಂದಿದ್ದಾರೆ.
ಶ್ರೀಮುರಳಿ ಸನ್ನಿವೇಶಗಳೊಡನೆ ವ್ಯವಹರಿಸುವ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ."ಒಂದು ನಿರ್ದಿಷ್ಟ ಯೋಜನೆಯಲ್ಲಿ ಬಹಳ ಹೈಪ್ ಬಂದಾಗ ನಾನು ತುಸು ಬ್ರೇಕ್ ತೆಗೆದುಕೊಳ್ಳಲು ಬಯಸುತ್ತೇನೆ. ಇದು ನನಗೆ ಪರಿಸ್ಥಿತಿಯನ್ನು ವಿಶ್ಲೇಷಿಸಲು ಅವಕಾಶ ಒದಗಿಸುತ್ತದೆ. ಅಲ್ಲದೆ ಹೊಸ ದೃಷ್ಟಿಕೋನದಿಂದ ಕೆಲಸ ಮಾಡಲು ಇದರಿಂದ ಸಾಧ್ಯವಾಗುತ್ತದೆ." ಅವರು ಹೇಳಿದ್ದಾರೆ.