ಬೆಂಗಳೂರು: ಕಿಚ್ಚ ಸುದೀಪ್ ನಿರೂಪಣೆಯ ಬಿಗ್‍ಬಾಸ್ ಮನೆಯಲ್ಲಿ ಒಂದಲ್ಲ ರಾದ್ದಾಂತ ಇದ್ದೆ ಇರುತ್ತದೆ. ಇನ್ನು ಈ ಬಾರಿ ಬಿಗ್‍ಬಾಸ್ ಮನೆಗೆ ಎಂಟ್ರಿ ಕೊಟ್ಟಿರುವ ಬಾಬಿ ಡಾಲ್ ನಿವೇದಿತಾ ಗೌಡ ಅವರು ಕಣ್ಣೀರು ಹಾಕಿದ್ದಾರೆ.
ಬಿಗ್‍ಬಾಸ್ ಮನೆಯಲ್ಲಿ ಸಹ ಸ್ಪರ್ಧಿಗಳಾದ ಜಯಶ್ರೀ ಮತ್ತು ಜೀವಿಕಾ ಜತೆ ನಿವೇದಿತ ಗೌಡ ಹರಟೆ ಹೊಡೆಯುತ್ತಿದ್ದರು. ಈ ವೇಳೆ ನಿವೇದಿತಾ ಗೌಡ ಬಿಗ್‍ಬಾಸ್ ಮನೆಯ ಸೊಳ್ಳೆಗಳು ತುಂಬಾನೇ ಸೋಮಾರಿ. ಅವುಗಳನ್ನು ಹೊಡೆಯಲು ಮುಂದಾದರೂ ಅವು ಎದ್ದು ಹೋಗುವುದಿಲ್ಲ. ಅಂತೆ ನನ್ನ ಕೈಯಿಂದ ಸೊಳ್ಳೆಯೊಂದು ಪ್ರಾಣ ಬಿಟ್ಟಿತ್ತು ಎಂದು ಹೇಳಿ ನಕ್ಕಿದ್ದರು.
ಬಳಿಕ ಬಿಗ್‍ಬಾಸ್ ಕೊಟ್ಟ ಟಾಸ್ಕ್ ನಲ್ಲಿ ಸಹೋದರ, ತಾಯಿ ಮತ್ತು ಕುಟುಂಬಕ್ಕೆ ಯಾರು ಸೇರಲ್ಲ ಎಂದು ಹೇಳುವಂತೆ ಪ್ರತಿಯೊಬ್ಬರಿಗೆ ತಿಳಿಸಿದರು. ಅದರಂತೆ ಅಕ್ಷತಾ ಅವರು ನಿವೇದಿತಾ ಗೌಡ ಮನೆಗೆ ಬಂದಾಗಿಂದಲೂ ನಮ್ಮೆಲ್ಲರ ಜೊತೆ ಹೊಂದಾಣಿಕೆ ಆಗುತ್ತಿಲ್ಲ. ಅವರಿಗೆ ಹೆಲ್ಪಿಂಗ್ ನೇಚರ್ ಕಡಿಮೆ. ಕಳೆದ ಸೀಸನ್ ನಲ್ಲಿಯೂ ನಿವೇದಿತಾ ನಮ್ಮವಳು ಅಂತ ಅನ್ನಿಸಲಿಲ್ಲ. ನಮ್ಮ ಮನೆ ಹುಡುಗಿ, ನಮ್ಮ ಊರು ಹುಡುಗಿ ಅನ್ನೋ ಭಾವನೆ ನನಗೆ ಬರಲಿಲ್ಲ. ಹಾಗಾಗಿ ಕುಟುಂಬಕ್ಕೆ ಸೇರದ ವ್ಯಕ್ತಿ ನಿವೇದಿತಾ ಎಂಬ ಕಾರಣವನ್ನು ನೀಡಿದ್ದರು.
ಇದರಿಂದ ಬೇಸರಗೊಂಡ ನಿವೇದಿತಾ ಈಗ ಸೀಸನ್ 5ರ ಮಾತು ಇಲ್ಲಿ ಬೇಡ. ನಾನು ಬಂದು ಮೂರು ದಿನ ಆಯ್ತು ಕಳೆದ ಸೀಸನ್ ಬಗ್ಗೆ ಮಾತನಾಡೋದು ಸೂಕ್ತವಲ್ಲ ಎಂದು ನಿವೇದಿತಾ ಭಾವುಕರಾದರು.