ಬೆಂಗಳೂರು: ಕನ್ನಡ ಸಿನಿಮಾ ಉದ್ಯಮದಲ್ಲಿ ಕಳೆದ ಕೆಲವು ವರ್ಷಗಳಿಂದ ಸಂಚಿತ್ ಸಂಜೀವ್ ಹೆಸರು ಕೇಳಿ ಬರುತ್ತಿದೆ, ಈ ಯುವ ಪ್ರತಿಭೆ ಹೆಸರು ಗಾಂಧಿನಗರದಲ್ಲಿ ಸುತ್ತುತ್ತಿದೆ.
7 ವರ್ಷಗಳ ಅನುಭವ, ವಾಣಿಜ್ಯ ಜಾಹೀರಾತು, ಕಿಚ್ಚ ಪ್ರೊಡಕ್ಷನ್ ನ ಹಲವು ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ, ಇತ್ತೀಚೆಗೆ ಬಿಡುಗಡೆಯಾದ ಅಂಬಿ ನಿಂಗ್ ವಯಸ್ಸಾಯ್ತೋ ಸಿನಿಮಾದಲ್ಲಿ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದ ಸಂಚಿತ್ ಕ್ಯಾಮೆರಾ ಎದುರಿಸಲು ಸಿದ್ಧರಾಗಿದ್ದಾರೆ.
ನ್ಯೂಯಾರ್ಕ್ ನಲ್ಲಿ 2 ವರ್ಷಗಳ ಸಿನಿಮಾ ಕೋರ್ಸ್ ಮುಗಿಸಿರುವ, ಸಂಚಿತ್ ನಟನೆ,ಸಿನಿಮಾಟೋಗ್ರಫಿ ಬಗ್ಗೆ ತರಬೇತಿ ಪಡೆದಿದ್ದಾರೆ. ಇದು ತಮಗೆ ತುಂಬಾ ಸಹಾಯ ಮಾಡಿದೆ ಎಂದು ತಿಳಿಸಿದ್ದಾರೆ,
ಮಾರ್ಚ್ 19 ರಂದು ನಮ್ಮ ಪ್ರಾಜೆಕ್ಟ್ ಸೆಟ್ಟೇರಲಿದೆ, ಜೂನ್ ತಿಂಗಳ ಅಂತ್ಯದಲ್ಲಿ ನನ್ನ ಸಿನಿಮಾ ತೆರೆಗೆ ಅಪ್ಪಳಿಸಲಿದೆ.ಕ್ಯಾಮೆರಾ ಮುಂದೆ ಹೊಸದೊಂದು ಪ್ರಯತ್ನ ಮಾಡಲು ತಯಾರಿ ನಡೆಸಿದ್ದಾನೆ,
ಸುದೀಪ್ ಅವರ ಫೈಲ್ವಾನ್ ಸಿನಿಮಾ ಜೊತೆ ನಾನು ತರಬೇತಿ ಪಡೆದುಕೊಂಡಿದ್ದು, ಕಥೆಗಾಗಿ ನಾನು ನನ್ನ ದೇಹದ ತೂಕದಲ್ಲಿ ವ್ಯತ್ಯಾಸವಾಗಿದೆ, ಸಿನಿಮಾದಲ್ಲಿ ನಾನು ಹಲವು ವರ್ಷಗಳಿಂದ ಕೆಲಸ ಮಾಡಿದ್ದೇನೆ, ಆದರೆ ನಟನೆ ನನಗೆ ಹೊಸದು, ನಾನು ಸಿನಿಮಾಗೆ ಏನು ಬೇಕೋ ಅದೆಲ್ಲಾವನ್ನು ಮಾಡಿದ್ದೇನೆ, ಏಕೆಂದರೇ ನಾಳೆ ದಿನ ಪ್ರೇಕ್ಷಕರು ನನ್ನನ್ನು ಪ್ರಶ್ನೆ ಮಾಡಬಾರದು, ಅದಕ್ಕಾಗಿ ನಾನೇ ಎಡಿಟಿಂಗ್, ಮಾಡಿದ್ದೇನೆ, ಈ ಮೂಲಕ ನಾನು ಅನುಭವ ಪಡೆಯುತ್ತಿದ್ದೇನೆ.