ಬೆಂಗಳೂರು: ಎಲ್ಲವೂ ಅಂದುಕೊಂಡಂತೆ ಆಗಿದ್ದರೇ ಇಷ್ಟೊತ್ತಿಗೆ ವಿಕ್ರಮ್ ರವಿಚಂದ್ರನ್ ಅಭಿನಯದ ನವೆಂಬರ್ ನಲ್ಲಿ ನಾನು ಅವಳು ಸಿನಿಮಾ ರಿಲೀಸ್ ಆಗಬೇಕಿತ್ತು, ಆದರೆ ನಿರ್ಮಾಪಕ ಮತ್ತು ನಿರ್ದೇಶಕರ ನಡುವಿನ ಮನಸ್ತಾಪದಿಂದಾಗಿ ಸಿನಿಮಾ ಸೆಟ್ಟೇರಲೇ ಇಲ್ಲ.
ಇದರಿಂದ ಪಾಠ ಕಲಿತಿರುವ ವಿಕ್ರಮ್, ಮುಂದಿನ ಸಿನಿಮಾದಲ್ಲಿ ನಟಿಸುವಾಗ ಕೇರ್ ಫುಲ್ ಆಗಿರಲು ನಿರ್ದರಿಸಿದ್ದಾರೆ. ಹಿಂದಿನ ಪ್ರಾಜೆಕ್ಟ್ ನಿಂದ ಸಮಯ ವ್ಯರ್ಥವಾಗಿದೆ, ಹೀಗಾಗಿ ನಾನು ವೃತ್ತಿಯಲ್ಲಿ ಹಿಂದುಳಿದಿದ್ದೇನೆ, ಏಕೆಂದರೇ ನನಗೆ ನನ್ನದೇ ಆದಂತ ದೃಷ್ಟಿಕೋನವಿದೆ, ನಾನು ನಿಧಾನವಾಗಿ ಹೆಜ್ಜೆ ಇಡುತ್ತೇನೆ, 'ನವೆಂಬರ್ ನಲ್ಲಿ' ಈ ಸಿನಿಮಾದಂತೆ ಅಗುವುದು ನನಗೆ ಇಷ್ಟವಿಲ್ಲ, ನಿರ್ದೇಶಕ ಮತ್ತು ನಿರ್ಮಾಪಕರ ಜಗಳ ನನ್ನ ಮೇಲೆ ಪರಿಣಾಮ ಬೀರಿದೆ ಎಂದು ವಿಕ್ರಮ್ ರವಿಚಂದ್ರನ್ ಹೇಳಿದ್ದಾರೆ.
ಸಹನಾಮೂರ್ತಿ ಅವರ ಜೊತೆ ನಿಮ್ಮ ಚೊಚ್ಚಲ ಸಿನಿಮಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ನಾವು ಈ ಸಂಬಂಧ ಮಾತುಕತೆ ನಡೆಯುತ್ತಿದೆ.ನಾನು ಈ ವಿಷಯವನ್ನು ನನ್ನ ತಂದೆಗೆ ಬಿಟ್ಟಿದ್ದೇನೆ, ಅವರೇ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತಾರೆ.
ನಾನು ನನ್ನ ತಂದೆಯ ಅತಿ ದೊಡ್ಡ ಅಭಿಮಾನಿ, ನನಗಿಂತ ನನ್ನ ತಂದೆಗೆ ನನ್ನ ವೃತ್ತಿ ಜೀವನದ ಮೇಲೆ ಹೆಚ್ಚಿನ ಆಸಕ್ತಿಯಿದೆ, ಹೀಗಾಗೀ ಅವರೇ ನನ್ನ ಜೀವನದ ಎಲ್ಲಾ ನಿರ್ಧಾರಗಳನ್ನು ಕೈಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ, ನನ್ನ ಸಹೋದರ ಮನೋರಂಜನ್ ನನಗೆ ಹೆಚ್ಚಿನ ಬೆಂಬಲ ನೀಡುತ್ತಾರೆ, ನನ್ನ ತಂದೆಯ ಹೆಸರನ್ನು ಉಳಿಸಿಕೊಂಡು ಹೋಗಲು ನಾವಿಬ್ಬರು ಪ್ರಯತ್ನ ಪಡುತ್ತೇವೆ ಎಂದು ಹೇಳಿದ್ದಾರೆ.
ನನಗೆ ಸುಳ್ಳು ಹೇಳಲು ಇಷ್ಟವಿಲ್ಲ, ನನಗೆ ಬರುತ್ತಿರುವ ಆಫರ್ ಗಳು ಕಡಿಮೆ ಇವೆ, ಕೆಲವೇ ಕೆಲವು ಮಂದಿಯಿಂದ ನನಗೆ ಆಫರ್ ಬಂದಿದೆ, ಉತ್ತಮ ಕಥೆ ಬಂದರೆ ನಾನು ಒಪ್ಪಿಕೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.