ಅನೂಪ್ ಭಂಡಾರಿ ಮತ್ತು ಸುದೀಪ್ 
ಸಿನಿಮಾ ಸುದ್ದಿ

18 ವರ್ಷಗಳ ನಂತರ ನನಸಾಗುತ್ತಿದೆ ನಿರ್ದೇಶಕ ಅನೂಪ್ ಭಂಡಾರಿ ಕನಸು!

18 ವರ್ಷಗಳ ಹಿಂದೆ ನಟ ಸುದೀಪ್ ಗಾಗಿ ಕಥೆ ಬರೆದಿದ್ದರು, ಆದರೆ ಆ ಪ್ರಾಜೆಕ್ಟ್ ಮುಂದುವರಿದಿರಲಿಲ್ಲ, ಕಿಚ್ಚ ಸುದೀಪ್ ಅವರ ಜೊತೆ ಕೆಲಸ ಮಾಡುವ ಕನಸು...

ಬೆಂಗಳೂರು: 18 ವರ್ಷಗಳ ಹಿಂದೆ ನಟ ಸುದೀಪ್ ಗಾಗಿ ಕಥೆ ಬರೆದಿದ್ದರು, ಆದರೆ ಆ ಪ್ರಾಜೆಕ್ಟ್ ಮುಂದುವರಿದಿರಲಿಲ್ಲ, ಕಿಚ್ಚ ಸುದೀಪ್ ಅವರ ಜೊತೆ ಕೆಲಸ ಮಾಡುವ ಕನಸು ಈ ನನಸಾಗುತ್ತಿದೆ. ಈ ವಿಷಯವನ್ನು ಸ್ವತಃ ಸುದೀಪ್ ಅವರೇ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.
ಕಿಚ್ಚ ಸುದೀಪ್‌  ಪತ್ನಿ ಪ್ರಿಯಾ ಮತ್ತು ಮಗಳ ಹೆಸರಿನ ಬ್ಯಾನರ್ ನಲ್ಲಿ ಹೊಸ ಸಿನಿಮಾ ಮಾಡಲು ಮುಂದಾಗಿದ್ದಾರೆ. ಈ ಚಿತ್ರಕ್ಕೆ ಅನೂಪ್‌ ಭಂಡಾರಿ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದು, ಸುದೀಪ್‌ ಅವರೇ ನಾಯಕ. 
ನಿರ್ದೇಶಕ ಅನೂಪ್‌ ಭಂಡಾರಿ ಮತ್ತೊಂದು ಸಿನಿಮಾ ಮಾಡಲು ತಯಾರಿ ಮಾಡಿಕೊಂಡಿದ್ದು, ಈ ಚಿತ್ರಕ್ಕೆ ಕಿಚ್ಚ ಸುದೀಪ್‌ ನಿರ್ಮಾಪಕರು. ಅಲ್ಲದೇ ಅವರೇ ನಾಯಕ ಕೂಡ. ಸುದೀಪ್‌ಗಾಗಿ ಹದಿನೆಂಟು ವರ್ಷಗಳಿಂದ ಕಿಚ್ಚನನಿಗಾಗಿ ಸಿನಿಮಾ ಮಾಡುವ ಅನೂಪ್‌ ಕನಸು ಈಗ ಆ ಕನಸು ನನಸಾಗುತ್ತಿದೆ. 
ಅನೂಪ್‌ ಒಂದು ಹೊಸ ಬಗೆಯ ಕಥೆ ಹೇಳಿದರು. ಅದು ತುಂಬಾ ಇಷ್ಟವಾಯಿತು. ಹಾಗಾಗಿಯೇ ನನ್ನದೇ ಬ್ಯಾನರ್‌ನಲ್ಲಿ ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದೇನೆ. ಗುರುವಾರ ಈ ಸಿನಿಮಾದ ಟೈಟಲ್‌ ಹೊಂದಿರುವ ಪೋಸ್ಟರ್‌ ಅನ್ನು ಬಿಡುಗಡೆ ಮಾಡಲಿದ್ದೇವೆ' ಎಂದು ಸುದೀಪ್‌ ತಿಳಿಸಿದ್ದಾರೆ. 
ಅಂದ ಹಾಗೆ ಈ ಸಿನಿಮಾ ಕಿಚ್ಚ ಸುದೀಪ್‌ ಪತ್ನಿ ಪ್ರಿಯಾ ಮತ್ತು ಮಗಳ ಹೆಸರಿನ ಸುಪ್ರಿಯಾನ್ವಿ ಬ್ಯಾನರ್‌ ಅಡಿಯಲ್ಲಿ ನಿರ್ಮಾಣವಾಗುತ್ತಿದ್ದು, ಇದೊಂದು ಆ್ಯಕ್ಷನ್‌ ಕಂ ಅಡ್ವಂಚರ್‌ ಸಿನಿಮಾವಂತೆ. 
'ನಾನು ಸುದೀಪ್‌ ಅವರನ್ನು ಮೊದಲ ಬಾರಿಗೆ ಭೇಟಿಯಾಗಿದ್ದು 2010ರಲ್ಲಿ ಶಾರ್ಟ್‌ ಫಿಲ್ಮ್‌ ಮಾಡಿದಾಗ. ಅವರು ಅಂದು ಅತಿಥಿ ಆಗಿ ಬಂದಿದ್ದರು. ಆಗಲೇ ಅವರೊಂದಿಗೆ ಕೆಲಸ ಮಾಡುವ ವಿಚಾರ ಹಚ್ಚಿಕೊಂಡಿದ್ದೆ. ಒಳ್ಳೆಯ ಕಥೆ ಹೊಳೆದಾಗ ಬಂದು ಹೇಳಿ ಅಂದಿದ್ದರು. ಅವರಿಗಾಗಿ ಒಂದೊಳ್ಳೆ ಕಥೆ ಮಾಡುವ ಆಲೋಚನೇ ಇದ್ದೇ ಇತ್ತು. ಈಗ ಅದಕ್ಕೆ ಅವಕಾಶ ಕೂಡ ಬಂದಿದೆ' ಎನ್ನುವುದು ನಿರ್ದೇಶಕರ ಮಾತು. 
ಸುದೀಪ್‌ ಅವರಿಗಾಗಿ ಸಿನಿಮಾ ಮಾಡಬೇಕು ಎನ್ನುವುದು ನನ್ನ 18 ವರ್ಷಗಳ ಕನಸಾಗಿತ್ತು. ಅದಕ್ಕಾಗಿ ನಾನು ಕಥೆ ಕೂಡ ಬರೆದಿದ್ದೆ. ಅದೇ ನನ್ನ ಮೊದಲ ಕಥೆಯಾಗಿತ್ತಪ.ಅದಕ್ಕೆ ಈಗ ಅವಕಾಶ ಕೂಡ ಬಂದಿದೆ. ಒಂದೊಳ್ಳೆ ಸಿನಿಮಾ ಇದಾಗಲಿದೆ ಎಂದು ಅನೂಪ್ ಭಂಡಾರಿ ಹೇಳಿದ್ದಾರೆ.
ಸದ್ಯ ಸಿನಿಮಾ ಸಂಬಂಧ ಕೆಲಸಗಳು ನಡೆಯುತ್ತಿದ್ದು, 2019ರಲ್ಲಿ ಅದು ಆರಂಭವಾಗಲಿದೆ, ಆದಷ್ಟು ಶೀಘ್ರವೇ ಸಿನಿಮಾ ಆರಂಭವಾಗಲಿದೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮುಖ್ಯಮಂತ್ರಿ ಬದಲಾವಣೆ: ದೆಹಲಿಯಲ್ಲಿ ಕಾಂಗ್ರೆಸ್‌ ಮ್ಯಾರಥಾನ್‌ ಮೀಟಿಂಗ್ ಬಳಿಕ ಕೆ.ಸಿ ವೇಣುಗೋಪಾಲ್ ಹೇಳಿದ್ದೇನು? Video

IPL 2026 Qualifier 1: GT ವಿರುದ್ದ ಸ್ಫೋಟಕ ಬ್ಯಾಟಿಂಗ್, ಇತಿಹಾಸ ಬರೆದ RCB

ಬಕ್ರೀದ್ ಮೇಕೆ ವಿಷಯವಾಗಿ ಮುಂಬೈ ಸೊಸೈಟಿಯಲ್ಲಿ ಭಾರಿ ವಿವಾದ; VHP ಕಾರ್ಯಕರ್ತರ ಮೇಲೆ ಬ್ಲೇಡ್ ನಿಂದ ಹಲ್ಲೆ!

IPL 2026 Qualifier 1: ರಜತ್ ಪಟಿದಾರ್ ಸ್ಫೋಟಕ ಬ್ಯಾಟಿಂಗ್, GTಗೆ ಗೆಲ್ಲಲು 255 ರನ್ ಬೃಹತ್ ಗುರಿ ನೀಡಿದ RCB

ಬೆಂಗಳೂರು: ದೃಷ್ಟಿಹೀನ ಸ್ನೇಹಿತೆ ಬಳಿ ಇದ್ದ 49.5 ಲಕ್ಷ ರೂ. ನಗದು, ಚಿನ್ನ ಕದ್ದ ಖದೀಮ ದಂಪತಿ ಬಂಧನ!

SCROLL FOR NEXT