ಬೆಂಗಳೂರು: ರಾಕಿಂಗ್ ಸ್ತಾರ್ ಯಶ್ ಅಭಿನಯದ "ಕೆಜಿಎಫ್" ಇಂದು ತೆರೆಕಂಡಿದ್ದು ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈನಡುವೆ ಚಿತ್ರ ಬಿಡುಗಡೆಗೆ ತಡೆ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ ನಿರ್ಮಾಪಕ ವೆಂಕಟೇಶ್ ತಮ್ಮ ಅರ್ಜಿ ಹಿಂಪಡೆದಿದ್ದಾರೆ.
"ಕೆಜಿಎಫ್" ಚಿತ್ರ ರೌಡಿ ತಂಗಂ ಜೀವನವನ್ನಾಧರಿಸಿದೆ.ಹೀಗಾಗಿ ಚಿತ್ರ ಬಿಡುಗಡೆಗೆ ತಡೆ ಕೋರಿ ರಾಜೇಶ್ವರಿ ಕಂಬೈನ್ಸ್ ಮಾಲೀಕರಾದ ವೆಂಕಟೇಶ್ ಜಿ ಎನ್ನುವವರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.ಬೆಂಗಳೂರು ನಗರ 10ನೇ ಸಿಟಿ ಸಿವಿಲ್ ಕೋರ್ಟ್ ಅರ್ಜಿಯನ್ನು ಮಾನ್ಯ ಮಾಡಿದ್ದಲ್ಲದೆ 2019ರ ಜನವರಿ 7ರವರೆಗೆ ಚಿತ್ರ ಬಿಡುಗಡೆಗೆ ತಡೆ ನೀಡಿ ಆದೇಶಿಸಿತ್ತು.
ಆದರೆ ಇಂದು (ಶುಕ್ರವಾರ) ಚಿತ್ರ ಎಲ್ಲೆಡೆ ನಿಗದಿಯಂತೆ ತೆರೆಕಂಡು ಭರ್ಜರಿಯಾಗಿ ಪ್ರದರ್ಶನಗೊಳ್ಳುತ್ತಿದೆ.ಚಿತ್ರದ ಕುರಿತಂತೆ ಎಲ್ಲೆಡೆ ಒಳ್ಳೆ ಮಾತುಗಳು ಕೇಳಿಬರುತ್ತಿದ್ದಂತೆಯೇ ನಿರ್ಮಾಪಕ ವೆಂಕಟೇಶ್ ತಾವು ಹೂಡಿದ್ದ ದಾವೆಯನ್ನು ಹಿಂಪಡೆದಿದ್ದಾರೆ.
ಇದರಿಂದ "ಕೆಜಿಎಫ್" ಚಿತ್ರಕ್ಕೆ ಇದ್ದ ದೊಡ್ಡ ಅಡ್ಡಿಯೊಂದು ನಿವಾರಣೆಯಾಗಿದೆ. ಚಿತ್ರ ನಿರ್ಮಾಪಕರು ಸೇರಿ ತಂಡದ ಎಲ್ಲರಿಗೆ ಇದರಿಂದ ಹರ್ಷವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics