ಪೆಟ್ಟಾ ಟ್ರೈಲರ್ ಒಂದು ತುಣುಕು
ಚೆನ್ನೈ: ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಬಹುನಿರೀಕ್ಷಿತ 'ಪೆಟ್ಟಾ' ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ.
ಸನ್ ಪಿಕ್ಚರ್ ಸಂಸ್ಥೆ ಈ ಟ್ರೈಲರ್ ಬಿಡುಗಡೆ ಮಾಡಿದ್ದು, ರಜನಿಕಾಂತ್ 'ಕಾಲಿ'ಎಂದು ಕರೆಯಲಾಗುವ ಹಾಸ್ಟೇಲ್ ವಾರ್ಡನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 2 ನಿಮಿಷ 29 ಸೆಕೆಂಡ್ ಅವಧಿಯ ಟ್ರೈಲರ್ ವಿಜಯ್ ಸೇತುಪತಿ ಅವರ ಧ್ವನಿಯೊಂದಿಗೆ ಆರಂಭವಾಗುತ್ತದೆ.
ರಜನಿಕಾಂತ್ ಜೊತೆಗೆ ಇದೇ ಮೊದಲ ಬಾರಿಗೆ ಕಾರ್ತಿಕ್ ಸುಬ್ಬರಾಜ್ ಪೆಟ್ಟಾ ಚಿತ್ರವನ್ನು ನಿರ್ದೇಶಿಸುತ್ತಿದ್ದು, ಅನಿರುದ್ಧ್ ರವಿಚಂದ್ರನ್ ಸಂಗೀತ ಸಂಯೋಜನೆ ಮಾಡಿದ್ದಾರೆ. ರಾಷ್ಟ್ರ ಪ್ರಶಸ್ತಿ ವಿಜೇತ ಛಾಯಾಗ್ರಾಹಕ ತಿರು ಪೆಟ್ಟಾ ಚಿತ್ರಕ್ಕೆ ಛಾಯಾಗ್ರಾಹಣ ಮಾಡಿದ್ದಾರೆ.
ಪಡೆಯಪ್ಪ ಸಿನಿಮಾದಂತೆ ಇಲ್ಲೂ ಕೂಡಾ ಪ್ರಸಿದ್ಧ ಡೈಲಾಗ್ ಗಳ ಮೂಲಕ ರಜನಿಕಾಂತ್ ಗಮನ ಸೆಳೆಯುತ್ತಾರೆ.ಪೆಟ್ಟಾ ಟ್ರೈಲರ್ ಬಗ್ಗೆ ರಾಮ್ ಗೋಪಾಲ್ ವರ್ಮಾ ಸೇರಿದಂತೆ ಹಲವು ನಟ ನಟಿಯರು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics