ಬೆಂಗಳೂರು: ರೆಬೆಲ್ ಸ್ಟಾರ್ ಅಂಬರೀಶ್ ಪ್ರಧಾನ ಪಾತ್ರಧಾರಿಯಾಗಿರುವ 'ಅಂಬಿ ನಿಂಗ್ ವಯಸ್ಸಾಯ್ತೋ' ಚಿತ್ರದ ಎರಡನೇ ಹಂತದ ಚಿತ್ರೀಕರಣ ಈ ವಾರ ಪ್ರಾರಂಭಗೊಳ್ಳಲಿದೆ. ಕಿಚ್ಚ ಸುದೀಪ್ ನಿರ್ಮಾಣ ಸಂಸ್ಥೆ ಕಿಚ್ಚ ಚ್ರಿಯೇಷನ್ಸ್ ಅಡಿಯಲ್ಲಿ ಮೂಡಿಬರುತ್ತಿರುವ ಈ ಚಿತ್ರಕ್ಕೆ ಜಾಕ್ ಮಂಜು ಸಹ ಬಂಡವಾಳ ತೊಡಗಿಸಿದ್ದಾರೆ.
ಫೆ೩ಬ್ರವರಿ ಎರಡನೇ ವಾರದಲ್ಲಿ ಚಿತ್ರೀಕರಣದ ಸೆಟ್ ಗೆ ಸುದೀಪ್ ಹಾಗೂ ನಟಿ ಶ್ರುತಿ ಹರಿಹರನ್ ಸಹ ಆಗಮಿಸಲಿದ್ದಾರೆ. ಮತ್ತು ಮುಂದಿನ ಹದಿನೈದು ದಿನಗಳ ಕಾಲ ನಟಿ ಶ್ರುತಿ ಹರಿಹರನ್ ಸುದೀಪ್ ಅವರೊಡನೆ ಚಿಉತ್ರೀಕರಣದಲ್ಲಿ ಭಾಗವಹಿಸುವುದು ಖಾತ್ರಿಯಾಗಿದೆ
ಇಷ್ಟಕ್ಕೂ 'ಅಂಬಿ ನಿಂಗ್ ವಯಸ್ಸಾಯ್ತೋ' ಚಿತ್ರವು ತಮಿಳಿನ 'ಪವರ್ ಪಾಂಡಿ' ಚಿಇತ್ರ್ದ ಸ್ಪೂರ್ತಿಯಿಂದ ತಯಾರಾದ ಕಥೆ ಆಗಿದ್ದು ಸುದೀಪ್ ಹಾಗೂ ಶ್ರುತಿ ಹರಿಹರನ್ ಇದೇ ಮೊದಲ ಬಾರಿಗೆ ಬೆಳ್ಳಿತೆರೆಯ ಮೇಲೆ ಒಟ್ಟಾಗಿ ಕಾಣಿಸಿಕೊಳ್ಳಲಿದ್ದಾರೆ.ಚಿತ್ರದಲ್ಲಿ ಸುದೀಪ್ ತರುಣ ಅಂಬರೀಶ್ ಆಗಿ ಕಾಣಿಸಿಕೊಳ್ಳುತ್ತಿರುವುದು ಚಿತ್ರರಸಿಕರಲ್ಲಿ ಚಿತ್ರದ ಕುರಿತ ಅಪಾರ ನಿರೀಕ್ಷೆಗೆ ಕಾರಣವಾಗಿದ್ದು ಇದೇ ವೇಳೆ ಶ್ರುತಿ ಹರಿಹರನ್ ತಾನು ಸುಹಾಸಿನಿ ಪಾತ್ರಧಾರಿಯಾಗಿದ್ದಾರೆ. ಹಾಗೇ ಅಂಬರೀಶ್ ಗೆ ಎದುರಾಗಿ bಶಿರಿಯ ನಟಿ ಸುಹಾಸಿನಿ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ.
ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತವಿದ್ದು ಜೆಬಿನ್ ಜಾಕೋಬ್ ಛಾಯಾಗ್ರಹಣ ಮಾಡಿದ್ದಾರೆ. ಚಿತ್ರದ ಎರಡನೇ ಹಂತದ ಚಿತ್ರೀಕರಣ ಮುಗಿದ ಬಳಿಕ ಅಂಬರಿಶ್ ಅವರ ಫಸ್ಟ್ ಲುಕ್ ಟೀಸರ್ ಬಿಡುಗಡೆ ಮಾಡಲು ನಿರ್ದೇಶಕ ಗುರುದಾತ ನಿರ್ಧರಿಸಿದ್ದಾರೆ.
"ಈ ಚಿತ್ರವು ಅಂಬರೀಶ್ ಅವರನ್ನು ಬೆಳ್ಳಿ ಪರದೆಯ ಮೇಲೆ ಪುನರ್ ಸ್ಥಾಪಿಸಲಿದೆ, ಏಕೆಂದರೆ ಹಿರಿಯ ನಟ ಬಹು ದೀರ್ಘ ಕಾಲದ ಬಳಿಕ ಈ ಚಿತ್ರದ ಮುಖೇನ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳೈದ್ದಾರೆ." ಎಂದು ಮೂಲಗಳು ಹೇಳಿದೆ.