ಕಾಲಚಕ್ರದಲ್ಲಿ ವಶಿಷ್ಟ ಸಿಂಹ 
ಸಿನಿಮಾ ಸುದ್ದಿ

ವಶಿಷ್ಟ ಸಿಂಹ ಇನ್ನೂ 'ಕಾಲಚಕ್ರ'ದ ಗುಂಗಿನಲ್ಲಿ!

ವಿಲನ್ ಪಾತ್ರ ಸೇರಿದಂತೆ ವೈವಿಧ್ಯಮಯ ಪಾತ್ರಗಳನ್ನು ನಿಭಾಯಿಸಿ ಜನರ ಗಮನ ಸೆಳೆದಿರುವ ನಟ...

ವಿಲನ್ ಪಾತ್ರ ಸೇರಿದಂತೆ ಹಲವು ವೈವಿಧ್ಯಮಯ ಪಾತ್ರಗಳನ್ನು ನಿಭಾಯಿಸಿ ಜನರ ಗಮನ ಸೆಳೆದಿರುವ ನಟ ವಶಿಷ್ಟ ಸಿಂಹ ಇದೀಗ ಮತ್ತೊಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಚಿತ್ರದಲ್ಲಿ ಮುಖ್ಯ ಪಾತ್ರವನ್ನು ಅವರು ನಿಭಾಯಿಸಿದ್ದಾರೆ. ತಮ್ಮ ಮುಂಬರುವ ಚಿತ್ರ ಕಾಲಚಕ್ರದಲ್ಲಿ ಪಾತ್ರಕ್ಕಾಗಿ ಅವರು ಮಾಡಿರುವ ತಯಾರಿ ನೋಡಿದರೆ ನಿಜಕ್ಕೂ ಕನ್ನಡ ಪ್ರೇಕ್ಷಕನಿಗೆ ಇಷ್ಟವಾಗದೆ ಇರದು.
ಈ ಚಿತ್ರವನ್ನು ಸುಮಂತ್ ಕ್ರಾಂತಿ ನಿರ್ದೇಶಿಸಿದ್ದಾರೆ. ಇಲ್ಲಿ ವಶಿಷ್ಟ ಸಿಂಹ ಅವರು ಎರಡು ರೀತಿಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಮೊದಲ ಪಾತ್ರದಲ್ಲಿ ಸುಮಾರು 30 ವರ್ಷ ವಯಸ್ಸಿನ ಯುವಕನ ಪಾತ್ರವಾದರೆ ಮತ್ತೊಂದರಲ್ಲಿ 60 ವರ್ಷದ ಇಳಿವಯಸ್ಸಿನ ಪಾತ್ರ. ಚಿತ್ರದ ಶೂಟಿಂಗ್ 30 ದಿನಗಳಲ್ಲಿ ಮುಗಿದಿದೆ. ಚಿತ್ರ ಮೂಡಿಬಂದಿರುವುದಕ್ಕೆ ಚಿತ್ರತಂಡ ಮತ್ತು ವಶಿಷ್ಟ ಸಿಂಹ ಅವರು ಖುಷಿಯಾಗಿದ್ದಾರೆ.
ಈ ಬಗ್ಗೆ ಸಿಟಿ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿರುವ ವಶಿಷ್ಟ ಸಿಂಹ, ನಿರ್ದೇಶಕರು ಬಯಸಿದಂತೆ ಈ ಪಾತ್ರಗಳನ್ನು ಮಾಡಿದೆ. ನಾನು ನಾಲ್ಕೈದು ಚಿತ್ರಗಳಲ್ಲಿ ಅಭಿನಯಿಸಿದ್ದೇನೆ. ಅದರಲ್ಲಿ ಮತ್ತೊಬ್ಬ ನಟನಾಗಿ ಇಲ್ಲವೇ ವಿಲನ್ ಆಗಿ ಕಾಣಿಸಿಕೊಂಡಿದ್ದೆ. ಈ ಚಿತ್ರದಲ್ಲಿ ನನ್ನದೇ ಮುಖ್ಯ ಪಾತ್ರವಾಗಿದ್ದು ಕುಟುಂಬದಲ್ಲಿ ಗಂಡ-ಹೆಂಡತಿ ಮತ್ತು ಮಗಳ ಜೀವನ ಪ್ರಯಾಣದ ಬಗ್ಗೆ ತೋರಿಸಲಾಗಿದೆ ಎಂದರು.
ಚಿತ್ರದಲ್ಲಿ ಪ್ರಮುಖ ಘಟನೆಯೊಂದು ಈ ಮೂರು ಪಾತ್ರಗಳ ಮೇಲೆ ಪ್ರಭಾವ ಬೀರುತ್ತದೆ. ಅದನ್ನು ಅವರು ಹೇಗೆ ಎದುರಿಸಿ ಜೀವನ ಸಾಗಿಸುತ್ತಾರೆ ಎಂಬುದನ್ನು ತೋರಿಸಲಾಗಿದೆ. ವಾಸ್ತವ ಬದುಕಿಗೆ ಸಿನಿಮಾ ತುಂಬಾ ಹತ್ತಿರವಾಗಿದೆ ಎಂದರು.
ವಶಿಷ್ಟ ಅವರ ಕಾಲಚಕ್ರದಲ್ಲಿನ ನೋಟವನ್ನು ಇತ್ತೀಚೆಗೆ ಬಹಿರಂಗಪಡಿಸಲಾಗಿತ್ತು. 60ರ ಇಳಿವಯಸ್ಸಿನಲ್ಲಿ ಕಾಣಲು ಬಳಸಿದ ವಿಗ್ ನನ್ನ ತಲೆಗೂದಲಿಗೆ ಹೊಂದಿಕೆಯಾಗುತ್ತಿತ್ತು. ಅದನ್ನು ಹೊಂದಿಸಿಕೊಳ್ಳಲು ಸಮಯ ಹಿಡಿಯಿತು. ಸಹಜವಾಗಿ ಆ ಪಾತ್ರ ಬರಬೇಕೆಂದು ನಾನು ಬಯಸಿದ್ದೆ ಎನ್ನುತ್ತಾರೆ ವಶಿಷ್ಟ ಸಿಂಹ.
ನನಗೆ ಇನ್ನೂ ಮದುವೆ, ಮಕ್ಕಳಾಗಲಿಲ್ಲ. ಹಾಗಾಗಿ ಚಿತ್ರದಲ್ಲಿ ಪಾತ್ರ ಮಾಡುವುದು ಕಷ್ಟವಾಯಿತು. ಇಲ್ಲಿಯವರೆಗೆ ನಾನು ಕೆಲವು ನಟರು ಯಾವುದೋ ಪಾತ್ರ ನಿಭಾಯಿಸಿದ ನಂತರ ಅದರಿಂದ ಹೊರಬರಲು ಸಾಧ್ಯವಾಗುತ್ತಿಲ್ಲ ಎಂದು ಹೇಳುವುದನ್ನು ಕೇಳಿದ್ದೆ. ಕಾಲಚಕ್ರದಲ್ಲಿ ನನಗೆ ಆ ಅನುಭವವಾಯಿತು ಎನ್ನುತ್ತಾರೆ ವಶಿಷ್ಟ ಸಿಂಹ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ.50 ರಷ್ಟು ಸುಂಕ ನಾಳೆ ಜಾರಿ: ಕರಡು ಸೂಚನೆ ಹೊರಡಿಸಿದ ಅಮೆರಿಕ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

SCROLL FOR NEXT