ಕಮಲ್ ಹಾಸನ್ 
ಸಿನಿಮಾ ಸುದ್ದಿ

ಇನ್ನು ಮುಂದೆ ಸಿನಿಮಾ ಇಲ್ಲ, ರಾಜಕೀಯ ಮಾತ್ರ: ಕಮಲ್ ಹಾಸನ್

ತಮಿಳುನಾಡು ಜನತೆಗಾಗಿ ತಾವು ರಾಜಕೀಯ ಪ್ರವೇಶಿಸುವುದು ಅಂತಿಮ ಮತ್ತು ......

ನವದೆಹಲಿ: ತಮಿಳುನಾಡು ಜನತೆಗಾಗಿ ತಾವು ರಾಜಕೀಯ ಪ್ರವೇಶಿಸುವುದು ಅಂತಿಮ ಮತ್ತು ಬದಲಾಯಿಸದ ತೀರ್ಮಾನವಾಗಿರುವುದರಿಂದ  ಇನ್ನು ಮುಂದೆ ಸಿನಿಮಾಗಳಲ್ಲಿ ನಟಿಸುವುದಿಲ್ಲ ಎಂದು ಖ್ಯಾತ ಚಿತ್ರನಟ ಕಮಲ್ ಹಾಸನ್ ಹೇಳಿದ್ದಾರೆ.

ಇದೇ ತಿಂಗಳು ತಮ್ಮ ಪಕ್ಷ ಮತ್ತು ಅದರ ತತ್ವಗಳನ್ನು ಪ್ರಕಟಿಸಲಿರುವ ವಟ ಕಮಲ್ ಹಾಸನ್, ಹಿಂದೂ ಭಯೋತ್ಪಾದನೆ ಒಂದು ಬೆದರಿಕೆಯಾಗಿದ್ದು ಆ ಬಗ್ಗೆ ಆರೋಪಿಸಿಕೊಂಡು ಕುಳಿತುಕೊಳ್ಳುವುದರಲ್ಲಿ ಅರ್ಥವಿಲ್ಲ ಎಂಬುದು ಅವರ ಅಭಿಪ್ರಾಯ.

ತಯಾರಿ ಹಂತದಲ್ಲಿರುವ ಎರಡು ಚಿತ್ರಗಳನ್ನು ಹೊರತುಪಡಿಸಿ ಮುಂದಿನ ದಿನಗಳಲ್ಲಿ ಯಾವುದೇ ಚಿತ್ರಗಳಲ್ಲಿ ನಟಿಸುವುದಿಲ್ಲ ಎಂದು ಬೊಸ್ಟನ್ ನ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಇಂಡಿಯಾ ಟುಡೇ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಕಮಲ್ ಹಾಸನ್ ಹೇಳಿದ್ದಾರೆ.

ಒಂದು ವೇಳೆ ಚುನಾವಣೆಯಲ್ಲಿ ಸೋತರೂ ಕೂಡ ರಾಜಕೀಯದಲ್ಲಿ ಮುಂದುವರಿಯುತ್ತೀರಾ ಎಂದು ಕೇಳಿದಾಗ ಪ್ರಾಮಾಣಿಕವಾಗಿ ಬದುಕಲು ನಾನು ಏನಾದರೊಂದು ಮಾಡಬೇಕು. ಆದರೆ ಚುನಾವಣೆಯಲ್ಲಿ ಸೋಲುತ್ತೇನೆ ಎಂದು ನನಗೆ ಅನಿಸುವುದಿಲ್ಲ.ನನಗೆ ರಾಜಕೀಯ ಜೀವನದ ಹಿನ್ನೆಲೆ ಇಲ್ಲದಿರಬಹುದು. ಆದರೆ ಕಳೆದ 37 ವರ್ಷಗಳಿಂದ ಸಮಾಜ ಸೇವೆಯಲ್ಲಿದ್ದೇನೆ. ಇಷ್ಟು ವರ್ಷಗಳಲ್ಲಿ ಸುಮಾರು 10 ಲಕ್ಷ ನಿಷ್ಠಾವಂತ ಕಾರ್ಯಕರ್ತರನ್ನು ಸಂಪಾದಿಸಿದ್ದೇನೆ ಎಂದರು.

ನಾನು ಮನಃಪೂರ್ವಕವಾಗಿ ಕೆಲಸ ಮಾಡುತ್ತೇನೆ. ನನ್ನ ಬ್ಯಾಂಕ್ ಖಾತೆಯಲ್ಲಿ ಹಣ ಹೆಚ್ಚು ಮಾಡಬೇಕು ಎಂಬ ಉದ್ದೇಶ ನನಗಿಲ್ಲ. ಕೇವಲ ನಟನಾಗಿ ಸಾಯಬಾರದೆಂದು ನನ್ನ ಉದ್ದೇಶವಾದುದರಿಂದ ನಾನು  ರಾಜಕೀಯಕ್ಕೆ ಬಂದೆ. ಜನಸೇವೆ ಮಾಡಬೇಕೆಂಬ ಬಯಕೆಯಿದೆ ಹೀಗಾಗಿ ರಾಜಕೀಯಕ್ಕೆ ಪ್ರವೇಶಿಸುತ್ತಿದ್ದೇನೆ ಎನ್ನುತ್ತಾರೆ.

ತಮ್ಮ ರಾಜಕೀಯದ ಬಣ್ಣ ಕಪ್ಪು ಆಗಿದ್ದರೂ ಕೇಸರಿ ಬಣ್ಣದ ಬಗ್ಗೆ ಕಾಳಜಿಯಿದೆ. ದ್ರಾವಿಡರ ಧ್ವನಿ ಮತ್ತು ಕಪ್ಪು ಬಣ್ಣ ತಮ್ಮ ರಾಜಕೀಯ ಬಣ್ಣವನ್ನು ಪ್ರತಿನಿಧಿಸುತ್ತದೆ, ತಮಿಳರಿಗೆ ಕಪ್ಪು ಬಣ್ಣ  ಕೆಟ್ಟದೇನಲ್ಲ ಎನ್ನುತ್ತಾರೆ. ಬಿಜೆಪಿ ಜೊತೆ ಸೇರುವ ಯಾವುದೇ ಯೋದನೆಯಿಲ್ಲ ಎಂದು ಕೂಡ ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ಹೈಡ್ರಾಮಾ: EC ಕಚೇರಿ ಮುತ್ತಿಗೆಗೆ ಯತ್ನಿಸಿದ ರಾಹುಲ್, ಪ್ರಿಯಾಂಕಾ ಗಾಂಧಿ ಸೇರಿ INDIA ಒಕ್ಕೂಟದ ಹಲವು ಸಂಸದರು ಪೊಲೀಸ್ ವಶಕ್ಕೆ..!

ಹೆಲಿಕಾಪ್ಟರ್‌ನಿಂದ ಉಳಿಯುವಾಗ 2 ತಿಂಗಳ ಮಗುವಿನೊಂದಿಗೆ ಎಡವಿದ ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಪತ್ನಿ ಉಷಾ, Video

SIR ವಿವಾದ: 'ಶಾಸಕ ಯತ್ನಾಳ್ ಬಣ್ಣ ಬಯಲು'; ವಿಜಯಪುರದಲ್ಲಿ ಬದುಕಿರುವ 8 ಮುಸ್ಲಿಂ ಮತದಾರರು 'ಸತ್ತಿದ್ದಾರೆ' ಎಂದು ಅರ್ಜಿ!

ಹೀಗೂ ಉಂಟೆ?: BJP ಶಾಸಕನ ಬಂಗಲೆ ತೊಳೆಯಲು ಹೋದ ಅಗ್ನಿಶಾಮಕ ವಾಹನ; ವಿಡಿಯೋ ವೈರಲ್‌ ಬೆನ್ನಲ್ಲೇ ₹2,700 ದಂಡ!

DIG ಸೋಮಶೇಖರ್ ಕಾಮಕಾಂಡ ಬಟಾಬಯಲು: ಅಪರಾಧಿ ಪತ್ನಿಗೆ ವಿಡಿಯೋ ಕಾಲ್; ಬೆತ್ತಲಾಗುವಂತೆ ಒತ್ತಡ!