ಸಿನಿಮಾ ಸುದ್ದಿ

ಕಪಿಲ್ ಶರ್ಮಾ ವಿರುದ್ಧ ದೂರು ದಾಖಲು: ಸಂಕಷ್ಟದಲ್ಲಿ ಕಾಮಿಡಿ ಕಿಂಗ್

Shilpa D
ನವದೆಹಲಿ: ಹಿರಿಯ ಹಾಸ್ಯನಟ ಕಪಿಲ್ ಶರ್ಮಾಗೆ ಸಂಕಷ್ಟ ಎದುರಾಗಿದೆ. ಇಂಡಿಪೆಂಡೆಂಟ್ ಸ್ಟೂಡೆಂಟ್  ಫೆಡರೇಷನ್  ಕಾಮಿಡಿಯನ್ ಕಪಿಲ್ ಶರ್ಮಾ ವಿರುದ್ಧ ದೂರು ದಾಖಲಿಸಿದೆ.
ಸಂಚಾರಿ ನಿಯಮ ಉಲ್ಲಂಘನೆ ಮಾಡಿದ ಆರೋಪದ ಮೇಲೆ ಕಪಿಲ್ ಶರ್ಮಾ ವಿರುದ್ಧ ದೂರು ದಾಖಲಿಸಲಾಗಿದೆ. ಕಪಿಲ್ ಶರ್ಮಾ ಅಮೃತಸರಕ್ಕೆ ತಮ್ಮ ಬೈಕ್ ನಲ್ಲಿ ತೆರಳುವ ವೇಳೆ, ಸಂಚಾರಿ ನಿಯಮ ಪಾಲಿಸದೇ ಅತಿ ವೇಗವಾಗಿ ರೈಡ್ ಮಾಡಿದ್ದಾರೆ ಎಂದು ಇಂಡಿಪೆಂಡೆಂಟ್ ಸ್ಟೂಡೆಂಟ್ ಫೆಡರೇಷನ್ ಅಧ್ಯಕ್ಷ ಕೇಶವ ಕೊಹ್ಲಿ ದೂರಿದ್ದಾರೆ.
ಕಪಿಲ್ ಶರ್ಮಾ ಹೆಲ್ಮೆಟ್ ಧರಿಸದೆ, ವೇಗವಾಗಿ ಬೈಕ್ ಓಡಿಸುವ ವಿಡಿಯೋ ವೈರಲ್ ಆಗಿದೆ, ಈ ಸಂಬಂಧ ಅಮೃತಸರ ನಿವಾಸಿಯಾಗಿರುವ ಕೇಶವ ಕೊಹ್ಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವುದಾಗಿ ತಿಳಿಸಿದ್ದಾರೆ.
SCROLL FOR NEXT