ಮುಂಬಯಿ: ಬಾಲಿವುಡ್ನ ಹಿರಿಯ ನಟಿ ಶ್ರೀದೇವಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. 54 ವರ್ಷದ ಬಹುಭಾಷಾ ನಟಿ ಶ್ರೀದೇವಿ ದುಬೈನಲ್ಲಿ ಕೊನೆಯುಸಿರೆಳೆದಿದ್ದಾರೆ.
ತಮ್ಮ ಸಂಬಂಧಿಕರೊಬ್ಬರ ವಿವಾಹ ಸಮಾರಂಭದಲ್ಲಿ ಪಾಲ್ಗೋಳ್ಳಲು ಶ್ರೀದೇವಿ ತಮ್ಮ ಪತಿ ಬೋನಿ ಕಪೂರ್ ಮತ್ತು ಕಿರಿಯ ಮಗಳು ಖುಷಿ ಜೊತೆ ದುಬೈಗೆ ತೆರಳಿದ್ದರು.
ಶ್ರೀದೇವಿ ಬಾವ ಸಂಜಯ್ ಕಪೂರ್ ನಟಿ ನಿಧನದ ಸುದ್ದಿಯನ್ನು ಖಚಿತ ಪಡಿಸಿದ್ದಾರೆ. ಶ್ರೀದೇವಿ ಹೃದಯಾಘಾತದಿಂದ ಸಾವನ್ನಪ್ಪಿದ್ದು, ತಾವೂ ಕೂಡ ದುಬೈಗೆ ತೆರಳುತ್ತಿರುವುದಾಗಿ ತಿಳಿಸಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆ ಬಾಲಿವುಡ್ನ ಖ್ಯಾತ ನಟ-ನಟಿಯರು ಸಂತಾಪ ಸೂಚಿಸಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ನೂರಾರು ಅಭಿಮಾನಿಗಳು ಮುಂಬೈನ ಅಂಧೇರಿಯಲ್ಲಿರುವ ಶ್ರೀದೇವಿ ಅವರ ನಿವಾಸದೆದರು ನೆರೆಯುತ್ತಿದ್ದಾರೆ.