ಸಿನಿಮಾ ಸುದ್ದಿ

ಅಮರ್ಥ್ಯಸೇನ್ ಕುರಿತ ಸಾಕ್ಷ್ಯಚಿತ್ರ ಮಾರ್ಚ್ 9ರಂದು ಬಿಡುಗಡೆ

Nagaraja AB

ಕೋಲ್ಕತ್ತಾ:ನೊಬೆಲ್ ಪ್ರಶಸ್ತಿ ಪುರಸ್ಕೃತ ಸಾಹಿತಿ ಅಮರ್ಥ್ಯಸೇನ್ ಅವರ ಕುರಿತ ಸಾಕ್ಷ್ಯಚಿತ್ರ ಮಾರ್ಚ್ 9 ರಂದು ಕೋಲ್ಕತ್ತಾದಲ್ಲಿ ಬಿಡುಗಡೆ ಮಾಡುವಂತೆ  ಸೆನ್ಸಾರ್ ಬೋರ್ಡ್ ಅನುಮತಿ ನೀಡಿದೆ ಎಂದು ನಿರ್ದೇಶಕ ಸುಮಾನ್ ಘೋಷ್ ತಿಳಿಸಿದ್ದಾರೆ.

 ಒಂದು ತಾಸಿನ ಸಾಕ್ಷ್ಯಚಿತ್ರ ವಿವಾದಕ್ಕೊಳಗಾಗಿ ನ್ಯಾಯಾಲಯದಲ್ಲಿತ್ತು, ಗುಜರಾತ್ , ಕೌ, ಹಿಂದು, ಹಿಂದುತ್ವ, ಭಾರತ ಎಂಬ 9 ಶಬ್ದಗಳ
 ಅಥವಾ ಪ್ಯಾರಾ ತೆಗೆಯುವಂತೆ ಕೋಲ್ಕತ್ತಾ ಸಿಬಿಎಫ್ ಸಿ ಸೂಚಿಸಿತ್ತು. ಆದರೆ, ಮುಂಬೈಯಲ್ಲಿನ ಸಿಬಿಎಪ್ ಸಿ ಗುಜರಾತ್  ಎಂಬ ಶಬ್ದವನ್ನು
 ಶಬ್ದವನ್ನು ತೆಗೆದು ಹಾಕಿದ್ದು, ಒಪ್ಪಿಗೆ ನೀಡಿತ್ತು ಎಂದು ಸುಮಾನ್ ಘೋಷ್ ತಿಳಿಸಿದ್ದಾರೆ.

2002-2003ರಲ್ಲಿ ಸ್ನೇಹಿತರ ಒತ್ತಾಸೆಯಿಂದ ಈ ಸಾಕ್ಷ್ಯಚಿತ್ರ ಆರಂಭಿಸಿದ್ದು, ಭಾರತ, ಇಂಗ್ಲೆಂಡ್, ಅಮೆರಿಕಾದಲೆಲ್ಲ ಶೂಟಿಂಗ್ ಮಾಡಲಾಗಿದೆ
15 ವರ್ಷಗಳ ನಂತರ ಸಾಕ್ಷ್ಯಚಿತ್ರ ಬಿಡುಗಡೆ ಆಗುತ್ತಿರುವುದಾಗಿ ತಿಳಿಸಿದ್ದಾರೆ.

ಕಳೆದ ವರ್ಷ ಕೋಲ್ಕತ್ತಾ ಸಿಬಿಎಪ್ ಸಿ ಗುಜರಾತ್ ಸಾಕ್ಷ್ಯಚಿತ್ರದಲ್ಲಿನ ಆರು ಶಬ್ದ ತೆಗೆದುಹಾಕುವಂತೆ ಹೇಳಿತ್ತು, ಆದರೆ, ಹೋರಾಟ ಮಾಡಿ ಗೆದ್ದಿದ್ದು.
ಭಾರತೀಯ ಸೆನ್ಸಾರ್ ಬೋರ್ಡ್ ಅಧ್ಯಕ್ಷ ಪ್ರಸೂನ್ ಜೋಷಿಗೆ ಕೃತಜ್ಞತೆ ಸಲ್ಲಿಸುವುದಾಗಿತಿಳಿಸಿದರು.

ಅಮರ್ಥ್ಯಸೇನ್ ಅವರಿಗೆ ಗೌರವ ಸಲ್ಲಿಸಲು ಈ ಚಿತ್ರ ನಿರ್ಮಿಸಿದ್ದು,
ಪ್ರಸ್ತುತ ದಿನಗಳಲ್ಲಿ ಧ್ವನಿ ಎತ್ತುವುದು ಅತ್ಯವಶಕ್ಯ ಎಂಬುದಕ್ಕೆ ಈ ವಿದ್ಯಮಾನಗಳು ಉತ್ತಮ ಉದಾಹರಣೆಯಂತಿವೆ ಎಂದು ಅವರು ಹೇಳಿದ್ದಾರೆ

SCROLL FOR NEXT