ಅದಿತಿ ಪ್ರಭುದೇವ 
ಸಿನಿಮಾ ಸುದ್ದಿ

ಸುನಿಯವರ 'ಬಜಾರ್'ಗೆ ಅದಿತಿ ಪ್ರಭುದೇವ ಎಂಟ್ರಿ!

ಇದು ನನಗೆ 2018ರ ಹೊಸ ವರ್ಷದಲ್ಲಿ ದೇವರು ಕೊಟ್ಟ ಉಡುಗೊರೆ ಎನ್ನುತ್ತಾರೆ ನಟಿ ಅದಿತಿ ಪ್ರಭುದೇವ್...

ಇದು ನನಗೆ 2018ರ ಹೊಸ ವರ್ಷದಲ್ಲಿ ದೇವರು ಕೊಟ್ಟ ಉಡುಗೊರೆ ಎನ್ನುತ್ತಾರೆ ನಟಿ ಅದಿತಿ ಪ್ರಭುದೇವ್. ಸುನಿ ನಿರ್ದೇಶನದ ಬಜಾರ್ ಚಿತ್ರದಲ್ಲಿ ತಮಗೆ ಸಿಕ್ಕಿರುವ ಪಾತ್ರಕ್ಕೆ ನಟಿ ಅದಿತಿ ತೀವ್ರ ಖುಷಿಯಲ್ಲಿದ್ದಾರೆ. 
ಈಗಾಗಲೇ ಗಣೇಶ್-ರಶ್ಮಿಕಾ ಅಭಿನಯದ ಚಮಕ್ ಚಿತ್ರದ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ನಿರ್ದೇಶಕ ಸುನಿಯವರ ಮುಂದಿನ ಚಿತ್ರ ಬಜಾರ್ ಆಗಿದ್ದು ಅದರಲ್ಲಿ ಹೊಸ ನಟ ಧನ್ವೀರ್ ಗೌಡ ಅಭಿನಯಿಸುತ್ತಿದ್ದಾರೆ. ಇಲ್ಲಿ ನಾಯಕ ಪಾರಿವಾಳ ರೇಸಿಂಗ್ ಮತ್ತು ಜೂಜು ಆಡುವ ಚಟ ಹೊಂದಿದ್ದು ಆತನಿಗೆ ನಾಯಕಿಯಾಗಿ ಅದಿತಿ ಅಭಿನಯಿಸುತ್ತಿದ್ದಾರೆ.
ಅದಿತಿ ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನಾಗಕನ್ನಿಕೆ ಧಾರವಾಹಿಯಿಂದ ಜನಪ್ರಿಯರಾಗಿದ್ದಾರೆ. ಅಲ್ಲಿಂದ ಬೆಳ್ಳಿತೆರೆಗೆ ಬಂದ ಅದಿತಿ ಕೃಷ್ಣ ಅಜಯ್ ರಾವ್ ಅಭಿನಯದ ಶಿವ ತೇಜಸ್ ಧೈರ್ಯಂನಲ್ಲಿ ಅಭಿನಯಿಸಿದರು.
ನನ್ನನ್ನು ಹಲವು ಚಿತ್ರ ನಿರ್ಮಾಪಕರು ಸಂಪರ್ಕಿಸಿದರು. ಆದರೆ ತಿಂಗಳ 27 ದಿನಗಳು ಧಾರವಾಹಿ ಶೂಟಿಂಗ್ ನಲ್ಲಿ ಇದ್ದ ಕಾರಣ ಸಿನಿಮಾಗಳಲ್ಲಿ ನಟಿಸಲು ಸಾಧ್ಯವಾಗಲಿಲ್ಲ. ಇದೀಗ ಧಾರವಾಹಿಯಲ್ಲಿ ನನ್ನ ಭಾಗದ ಚಿತ್ರೀಕರಣ ಮುಗಿಯುವ ಹಂತ ಬಂದಿದೆ. ಇಂತಹ ಸಂದರ್ಭದಲ್ಲಿ ನನ್ನ ಗಮನವನ್ನು ಸಿನಿಮಾಗಳಿಗೆ ಬದಲಾಯಿಸುವುದು ಒಳ್ಳೆಯದು ಎಂದು ನಾನು ಭಾವಿಸುತ್ತೇನೆ ಎನ್ನುವ ಅದಿತಿ ಬಜಾರ್ ಚಿತ್ರ ಒಪ್ಪಿಕೊಳ್ಳುವ ಮೊದಲು 22 ಚಿತ್ರಗಳ ಸ್ಕ್ರಿಪ್ಟ್ ಕೇಳಿದ್ದರಂತೆ. ಇಷ್ಟು ದಿನ ಉತ್ತಮ ಚಿತ್ರಕ್ಕಾಗಿ ಕಾಯುತ್ತಿದ್ದೆ. ಸುನಿಯವರು ಕೇಳಿಕೊಂಡಾಗ ಖುಷಿಯಿಂದ ಒಪ್ಪಿಕೊಂಡೆ ಎನ್ನುತ್ತಾರೆ.
ದಾವಣಗೆರೆ ಮೂಲದ ಅದಿತಿ ಕನ್ನಡ ಭಾಷೆ ಮೇಲೆ ಹಿಡಿತ ಹೊಂದಿದ್ದಾರೆ. ಬಜಾರ್ ಚಿತ್ರದಲ್ಲಿ ಪಕ್ಕದ ಮನೆಯ ಹುಡುಗಿಯ ಪಾತ್ರ ಸಿಕ್ಕಿದೆ. ಕನ್ನಡ ಭಾಷೆ ಗೊತ್ತಿರುವುದು ನನಗೆ ವರದಾನವಾಗಿದೆ. ಸಂಕ್ರಾಂತಿ ಹೊತ್ತಿಗೆ ಚಿತ್ರದ ಶೂಟಿಂಗ್ ಆರಂಭವಾಗಲಿದೆ. ರವಿ ಬಸ್ರೂರು ಅವರ ಸಂಗೀತ, ಸಂತೋಷ್ ರೈ ಪಾತಾಜೆ ಅವರ ಛಾಯಾಗ್ರಹಣ ಚಿತ್ರಕ್ಕಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

ಶಿಬು ಸೊರೇನ್ 'ರಾಜ್ಯದ ಪಿತಾಮಹ' ಎಂದು ಘೋಷಿಸುವಂತೆ ಜೆಎಂಎಂ ಆಗ್ರಹ

SCROLL FOR NEXT