ಕನ್ನಡ ಮತ್ತು ತೆಲುಗು ದ್ವಿಭಾಷೆಗಳಲ್ಲಿ ತಯಾರಾಗುತ್ತಿರುವ ಅನೂಪ್ ಭಂಡಾರಿ ನಿರ್ದೇಶನದ ರಾಜರಥ ಮತ್ತು ರಾಜರಥಮ್ ಚಿತ್ರದ ಟ್ರೇಲರ್ ಬಿಡುಗಡೆಯಾದ ಕೆಲವೇ ದಿನಗಳಲ್ಲಿ 20 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ನಿರ್ಮಾಪಕರಾದ ಅಜಯ್ ರೆಡ್ಡಿ, ಅಂಜು ವಲ್ಲಭನೇನಿ, ವಿಷ್ಣು ದಕಪ್ಪಗರಿ ಮತ್ತು ಸತೀಶ್ ಶಾಸ್ತ್ರಿ ಅವರು ದಾಖಲೆ ನಿರ್ಮಿಸಲು ಹೊರಟಿದ್ದು ಬಾಕ್ಸ್ ಆಫೀಸ್ ನಲ್ಲಿ ಕೂಡ ಚಿತ್ರ ಗೆಲ್ಲುವ ವಿಶ್ವಾಸ ಹೊಂದಿದ್ದಾರೆ.
ರಂಗಿತರಂಗ, ಧ್ರುವ(ತೆಲುಗು), ಕಿರಿಕ್ ಪಾರ್ಟಿ, ರಾಜಕುಮಾರ ಮತ್ತು ಇನ್ನೂ ಹಲವು ಸಿನಿಮಾಗಳನ್ನು ಸಾಗರೋತ್ತರಗಳಲ್ಲಿ ವಿತರಣೆ ಮಾಡಿದವರು ಜಾನಿ ಹಿಟ್ಸ್ ಮೂಲಕ ಈ ಚಿತ್ರಕ್ಕೆ ನಿರ್ಮಾಪಕರಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ.
ರಾಜರಥ ಚಿತ್ರಕ್ಕೆ ಅನೂಪ್ ಭಂಡಾರಿಯೇ ಸಾಹಿತ್ಯ ಮತ್ತು ಸಂಗೀತ ಒದಗಿಸಿದ್ದಾರೆ. ದ್ವಿಭಾಷೆಗಳಲ್ಲಿ ತಯಾರಾಗುತ್ತಿರುವ ಚಿತ್ರಕ್ಕೆ ನಿರ್ಮಾಪಕರು ಸುಮಾರು 25 ಕೋಟಿ ರೂಪಾಯಿ ಬಂಡವಾಳ ಹೂಡುತ್ತಿದ್ದಾರೆ. ಚಿತ್ರದ ಕಥಾವಸ್ತು ಪ್ರೇಕ್ಷಕರಿಗೆ ಇಷ್ಟವಾಗಬಹುದು ಎನ್ನುತ್ತಾರೆ ನಿರ್ದೇಶಕ ಅನೂಪ್ ಭಂಡಾರಿ.
ಕನ್ನಡದಲ್ಲಿ ನಾಯಕನಾಗಿ ನಿರೂಪ್, ತೆಲುಗಿನಲ್ಲಿ ಆರ್ಯ ನಟಿಸುವುದಲ್ಲದೆ ಪುನೀತ್ ರಾಜ್ ಕುಮಾರ್ ಮತ್ತು ರಾಣಾ ದಗ್ಗುಬಾಟಿ ಶೀರ್ಷಿಕ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ. ದ್ವಿಭಾಷೆಯಲ್ಲಿ ಆವಂತಿಕಾ ಶೆಟ್ಟಿ, ರವಿಶಂಕರ್ ಕೂಡ ನಟಿಸುತ್ತಿದ್ದಾರೆ. ಹಿನ್ನೆಲೆ ಸಂಗೀತ ಅಜನೀಶ್ ಲೋಕನಾಥ್ ಅವರದ್ದಿದೆ. ಛಾಯಾಗ್ರಹಣವನ್ನು ವಿಲಿಯಂ ಡೇವಿಡ್ ಒದಗಿಸಲಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos