ನಟಿ ಶೃತಿ ಹರಿಹರನ್ 
ಸಿನಿಮಾ ಸುದ್ದಿ

ಒಳ್ಳೆಯ ಗುಣಮಟ್ಟದ ಚಿತ್ರಗಳಲ್ಲಿ ಮಾತ್ರ ನಟಿಸುವೆ: ಶೃತಿ ಹರಿಹರನ್

ಚಿತ್ರರಂಗದಲ್ಲಿರುವ ಪ್ರತೀಯೊಂದರ ಅನುಭವ ಹಾಗೂ ಎಲ್ಲಾ ರೀತಿಯ ಪಾತ್ರಗಳನ್ನು ಅಭಿನಯಿಸಲು ನಾನು ಇಚ್ಛಿಸುತ್ತೇನೆ. ವರ್ಷಕ್ಕೆ ಒಂದೇ ಚಿತ್ರವಾದರೂ ಉತ್ತಮ ಚಿತ್ರದಲ್ಲಿ ನಟಿಸಲು ಇಚ್ಛಿಸುತ್ತೇನೆಂದು ಸ್ಯಾಂಡಲ್ ವುಡ್ ನ ಬಹುಬೇಡಿಕೆಯ ನಟಿ ಶೃತಿ ಹರಿಹರನ್ ಅವರು ಹೇಳಿದ್ದಾರೆ...

ಚಿತ್ರರಂಗದಲ್ಲಿರುವ ಪ್ರತೀಯೊಂದರ ಅನುಭವ ಹಾಗೂ ಎಲ್ಲಾ ರೀತಿಯ ಪಾತ್ರಗಳನ್ನು ಅಭಿನಯಿಸಲು ನಾನು ಇಚ್ಛಿಸುತ್ತೇನೆ. ವರ್ಷಕ್ಕೆ ಒಂದೇ ಚಿತ್ರವಾದರೂ ಉತ್ತಮ ಚಿತ್ರದಲ್ಲಿ ನಟಿಸಲು ಇಚ್ಛಿಸುತ್ತೇನೆಂದು ಸ್ಯಾಂಡಲ್ ವುಡ್ ನ ಬಹುಬೇಡಿಕೆಯ ನಟಿ ಶೃತಿ ಹರಿಹರನ್ ಅವರು ಹೇಳಿದ್ದಾರೆ. 
ಚಿತ್ರವನ್ನು ಆಯ್ಕೆ ಮಾಡುವಾಗ ವಿಭಿನ್ನ ರೀತಿಯ ಪಾತ್ರಗಳಿರುವ ಚಿತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದೇನೆ. ವರ್ಷಕ್ಕೆ ಒಂದೇ ಚಿತ್ರವಾದರೂ ಉತ್ತಮ ಚಿತ್ರಗಳಲ್ಲಿ ಪಾತ್ರ ಮಾಡಲು ಇಚ್ಛಿಸುತ್ತೇನೆ. ಉತ್ತಮ ಚಿತ್ರಗಳಲ್ಲಿ ಅಭಿನಯಿಸಬೇಕು ಇಲ್ಲದಿದ್ದರೆ ಸಿನಿಮಾಗಳಲ್ಲಿ ನಟಿಸುವುದೇ ಬೇಡ ಎಂಬುದೇ ನನ್ನ ಈ ಹೊಸ ವರ್ಷದ ಸಂಕಲ್ಪವಾಗಿದೆ ಎಂದು ಹೇಳಿದ್ದಾರೆ. 
ಹಂಬಲ್ ಪೊಲಿಟಿಷಿಯನ್ ನೊಗ್ರಾಜ್ ಮೂಲಕ ಹೊಸ ವರ್ಷವನ್ನು ಆರಂಭಿಸಿದ್ದೇನೆ. ಚಿತ್ರದಲ್ಲಿ ರೋಜರ್ ನಾರಾಯಣ್ ಹಾಗೂ ನಾನು ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದೇವೆ. ಚಿತ್ರದಲ್ಲಿ ನೊಗ್ರಾಜ್ ಅವರು ರಾಜಕೀಯ ಗಣ್ಯ ವ್ಯಕ್ತಿಯಾಗಿದ್ದಾರೆ. ಅವರ ಪತ್ನಿ ಪಾತ್ರದಲ್ಲಿ ಸುಮುಖಿ ಸುರೇಶ್ (ಪಾತ್ರ: ಲಾವಣ್ಯ) ಅಭಿನಯಿಸಿದ್ದಾರೆ. ಸಮುಖಿಯವರು ವ್ಯಂಗ್ಯ ಚಿತ್ರಕಾರರಾಗಿರುತ್ತಾರೆ. ಸಾಮಾನ್ಯ ನಾಗರೀಕರ ಪಾತ್ರದಲ್ಲಿ ನಾನು ಮತ್ತು ರೋಜರ್ ನಟಿಸಿದ್ದೇವೆ. ಪ್ರತಿನಿದ್ಯ ಜನರು ಎದುರಿಸುವ ವಿದ್ಯುತ್, ಟ್ರಾಫಿಕ್, ನೀರು ಹಾಗೂ ರಸ್ತೆಗಳು ಸೇರಿದಂತೆ ಇನ್ನಿತರೆ ಸಮಸ್ಯೆಗಳನ್ನು ನಾವು ಎದುರಿಸುತ್ತಿರುತ್ತೇವೆ. 
ರಸ್ತೆ ಬದಿಗಳಲ್ಲಿ ಮೂತ್ರ ವಿಸರ್ಜನೆ ಮಾಡುವುದನ್ನು ನಾವು ನೋಡುತ್ತೇವೆ. ಕೆಲವೊಮ್ಮೆ ಮಾತಿನ ಚಕಮಕಿಗಳು ಕೂಡ ನಡೆಯುತ್ತವೆ. ನಾನೊಬ್ಬ ನಾಗರೀಕಳಾಗಿ ಸಮಸ್ಯೆ ಕುರಿತು ದನಿ ಎತ್ತುತ್ತೇನೆ. ಸಮಾನತೆಯಿಂದ ನೋಡಬೇಕೆಂದು ಎಲ್ಲರೂ ಬಯಸುತ್ತೇವೆ. ಇದಕ್ಕಾಗಿ ನಾವು ಹೋರಾಡುತ್ತೇನೆ. ಚಿತ್ರದಲ್ಲಿ ನಾನು ಉತ್ತಮ ಪಾತ್ರದಲ್ಲಿ ಅಭಿನಯಿಸುತ್ತಿದ್ದೇನೆಂದು ಎನಿಸುತ್ತಿದೆ. ಅತ್ಯಂತ ಹಾಸ್ಯ ಹಾಗೂ ನಾಟಕೀಯ ಪಾತ್ರ ಎನಿಸುವುದಿಲ್ಲ. ನೈಜತೆಯುಳ್ಳ ಪಾತ್ರದಲ್ಲಿ ನಾನು ಅಭಿನಯಿಸುತ್ತಿದ್ದೇನೆ. 
ಕನ್ನಡ ಚಿತ್ರರಂಗದಲ್ಲಿ ರಾಜಕೀಯ ಸಿನಿಮಾಗಳಲ್ಲಿ ನಾನು ಅಭಿನಯಿಸಿರಲಿಲ್ಲ. ಆ್ಯಕ್ಸಿಡೆಂಟ್ ಚಿತ್ರ ಉತ್ತಮ ಸಿನಿವಾಗಿದ್ದು, ಚಿತ್ರದಲ್ಲಿ ಭಾಗಿಯಾಗಿರುವುದಕ್ಕೆ ನನಗೆ ಸಂತಸವಿದೆ. ಚಿತ್ರದಲ್ಲಿ ಹಾಸ್ಯವಿದ್ದು, ಸಮಾಜದಲ್ಲಾಗುತ್ತಿರುವ ಆಗುಹೋಗುಗಳ ಪ್ರತಿಬಿಂಬಗಳನ್ನು ಎತ್ತಿತೋರಿಸುತ್ತದೆ ಎಂದಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಭಾರತ–ನ್ಯೂಜಿಲ್ಯಾಂಡ್ ಸಂಬಂಧ ಕಾರ್ಯತಂತ್ರ ಪಾಲುದಾರಿಕೆಗೆ ಉನ್ನತಿ; 5 ವರ್ಷಗಳಲ್ಲಿ 35,000 ಕೋಟಿ ರೂ. ವ್ಯಾಪಾರದ ಗುರಿ

ಕದನ ವಿರಾಮ ಅಂತ್ಯ; ಹೊಸ ಮಾತುಕತೆಗೆ ಡೊನಾಲ್ಡ್ ಟ್ರಂಪ್ ಒಪ್ಪಿಗೆ – 'ಶರಣಾಗುವುದಿಲ್ಲ' ಎಂದ ಇರಾನ್

ಬೆಂಗಳೂರು: ತಾಯಿ, ಅಜ್ಜಿ, ಮಾವನನ್ನು ಕೊಂದು ಆರೋಪಿ ಆತ್ಮಹತ್ಯೆ!

ಪ್ರಿಯಾಂಕ್ ಖರ್ಗೆ RSS ಸಚಿವರು- ಪರಮೇಶ್ವರ್ 'ಗೊತ್ತಿಲ್ಲ' ಸಚಿವರು: ಶೋಭಾ ಕರಂದ್ಲಾಜೆ

ಪೋಕ್ಸೋ ಕೇಸ್​ ಆರೋಪಿಯ ಭೀಭತ್ಸ ಕೃತ್ಯ: ಜಾಮೀನಿನ ಮೇಲೆ ಬಿಡುಗಡೆಯಾದ ಕೂಡಲೇ ಸಂತ್ರಸ್ತೆ ಸೇರಿ 6 ಮಂದಿಯ ಭೀಕರ ಹತ್ಯೆ!