ರಿಶಬ್ ಶೆಟ್ಟಿ(ಒಳ ಚಿತ್ರದಲ್ಲಿ ನಿರ್ದೇಶಕ ಜಯತೀರ್ಥ)
ಹೊಸಬರನ್ನು ಇಟ್ಟುಕೊಂಡು ತಯಾರಿಸುತ್ತಿರುವ ವೆನಿಲ್ಲಾ ಚಿತ್ರದ ಚಿತ್ರೀಕರಣವನ್ನು ಮುಗಿಸಿರುವ ನಿರ್ದೇಶಕ ಜಯತೀರ್ಥ ಇದೀಗ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದಾರೆ.
ಈ ಮಧ್ಯೆ ಸಮಯವನ್ನು ಹಾಳು ಮಾಡದೆ ತಮ್ಮ ಮುಂದಿನ ಪ್ರಾಜೆಕ್ಟ್ ಗೆ ಸಹ ಕೈ ಹಾಕುತ್ತಿದ್ದಾರೆ. ಅದರ ಬಗ್ಗೆ ನಿರ್ಮಾಪಕ ಸಂತೋಷ್ ಕುಮಾರ್ ಜೊತೆ ಸಾಮಾಜಿಕ ಮಾಧ್ಯಮದಲ್ಲಿ ಚಿತ್ರದ ಪೋಸ್ಟರ್ ಹಾಕಿ ಶೀರ್ಷಿಕೆಯನ್ನು ಊಹೆ ಮಾಡಬಹುದೇ ಎಂದು ಕೇಳಿದ್ದಾರೆ. ಈ ಮೂಲಕ ಚಿತ್ರದ ಬಗ್ಗೆ ಕುತೂಹಲ ಮೂಡಿಸಿದ್ದಾರೆ.
ಚಿತ್ರದಲ್ಲಿ ನಿರ್ದೇಶಕ ರಿಶಬ್ ಶೆಟ್ಟಿಯವರನ್ನು ನಾಯಕರಾಗಿ ಪರಿಚಯಿಸಲಾಗುತ್ತಿದ್ದು, ಅಜನೀಶ್ ಲೋಕನಾಥ್ ಅವರ ಸಂಗೀತವಿದೆ.
ಇಲ್ಲಿ ವೀಕ್ಷಕರಿಗೆ ಸಿನಿಮಾ ಶೀರ್ಷಿಕೆಯೇನೆಂದು ಊಹೆ ಮಾಡಲು ಹೇಳಲಾಗಿದ್ದರೂ ಕೂಡ ಚಿತ್ರಕ್ಕೆ ಬೆಲ್ ಬಾಟಮ್ ಎಂದು ನಿರ್ದೇಶಕರು ಹೆಸರಿಟ್ಟಿದ್ದಾರೆ ಎಂದು ನಮಗೆ ಮೂಲಗಳಿಂದ ಮಾಹಿತಿ ಸಿಕ್ಕಿದೆ.
ನಿರ್ದೇಶಕ ಜಯತೀರ್ಥ ಅವರು ಚಿತ್ರೀಕರಣ ಸ್ಥಳಗಳ ಹುಡುಕಾಟದಲ್ಲಿ ತೊಡಗಿದ್ದಾರೆ. ರಿಶಬ್ ಶೆಟ್ಟಿಯವರ ಜೊತೆಗೆ ಕರಾವಳಿ ತೀರ ಪ್ರದೇಶಗಳಿಗೆ ಹೋಗಿರುವ ಜಯತೀರ್ಥ ಬೆಂಗಳೂರಿಗೆ ಮರಳಿದ ಬಳಿಕ ಹೆಚ್ಚಿನ ವಿವರ ನೀಡಬಹುದು.
ಇಲ್ಲಿ ರಿಶಬ್ ಶೆಟ್ಟಿ ಪೂರ್ಣ ಪ್ರಮಾಣದ ನಾಯಕನಾಗಿ ಅಭಿನಯಿಸಲಿದ್ದಾರೆ. ರಿಶಬ್ ಶೆಟ್ಟಿಯವರು ಆರಂಭದಲ್ಲಿ ನಟನಾಗಬೇಕೆಂದು ಸ್ಯಾಂಡಲ್ ವುಡ್ ಗೆ ಪ್ರವೇಶಿಸಿದರೂ ಕೂಡ ನಟನೆಗಿಂತ ಮೊದಲು ನಿರ್ದೇಶನದಲ್ಲಿ ಅನುಭವ ಗಳಿಸಿದರೆ ಉತ್ತಮ ಎಂದು ಅವರಿಗೆ ಅನ್ನಿಸಿ ನಿರ್ದೇಶನ ಕೈಗೆತ್ತಿಕೊಂಡರು. ಇದರಿಂದ ರಿಕ್ಕಿ, ಕಿರಿಕ್ ಪಾರ್ಟಿ ಚಿತ್ರಗಳನ್ನು ನಿರ್ದೇಶಿಸಿ ಗೆಲುವು ಕಂಡರಲ್ಲದೆ ಇದೀಗ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಕೊಡುಗೆ ರಾಮಣ್ಣ ರೈ ಮತ್ತು ಕಥಾ ಸಂಗಮದಂತಹ ಚಿತ್ರಗಳನ್ನು ನಿರ್ದೇಶಿಸಿದ್ದು ಅವಿನ್ನೂ ಬಿಡುಗಡೆಯಾಗಬೇಕಿದೆ.
ಉಳಿದವರು ಕಂಡಂತೆ ಚಿತ್ರದಲ್ಲಿ ಎರಡನೇ ನಾಯಕನಾಗಿ ರಿಶಬ್ ಶೆಟ್ಟಿ ಅಭಿನಯಿಸಿದ್ದರು. ಇದೀಗ ಜಯತೀರ್ಥ ಅವರ ಬೆಲ್ ಬಾಟಮ್ ನಲ್ಲಿ ನಾಯಕನಾಗಿ ನಟಿಸಲು ಅವರಿಗೆ ಸಂತೋಷವಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos