ನಟ ಶಿವರಾಜ್ ಕುಮಾರ್ 
ಸಿನಿಮಾ ಸುದ್ದಿ

'ದ ವಿಲನ್' ನಲ್ಲಿ ಶಿವಣ್ಣ ಜೊತೆ ಆರು ಸ್ಯಾಂಡಲ್ ವುಡ್ ನಟಿಯರ ಡ್ಯಾನ್ಸ್!

ದ ವಿಲನ್ ಚಿತ್ರದ ಶೂಟಿಂಗ್ ನಲ್ಲಿ ತೊಡಗಿಕೊಂಡಿರುವ ನಿರ್ದೇಶಕ ಪ್ರೇಮ್ ನಟ ಶಿವರಾಜ್ ಕುಮಾರ್ ಅವರ ಭಾಗದ ನಟನೆಯ ಚಿತ್ರೀಕರಣ ...

ದ ವಿಲನ್ ಚಿತ್ರದ ಶೂಟಿಂಗ್ ನಲ್ಲಿ ತೊಡಗಿಕೊಂಡಿರುವ ನಿರ್ದೇಶಕ ಪ್ರೇಮ್ ನಟ ಶಿವರಾಜ್ ಕುಮಾರ್ ಅವರ ಭಾಗದ ನಟನೆಯ ಚಿತ್ರೀಕರಣ ಮಾಡುತ್ತಿದ್ದಾರೆ, ಆ ನಂತರ ಸುದೀಪ್ ಅವರೊಂದಿಗೆ ಚಿತ್ರದ ಭಾರೀ ದೊಡ್ಡ ಕ್ಲೈಮಾಕ್ಸ್ ನ ಚಿತ್ರೀಕರಣ ನಡೆಯಲಿದೆ. ಇಂದಿನಿಂದ ಮುಂದಿನ 10 ದಿನಗಳವರೆಗೆ ಅದು ಸಾಗಲಿದೆ. 
ಈ ಮಧ್ಯೆ ಶಿವರಾಜ್ ಕುಮಾರ್ ಮತ್ತು ಸುದೀಪ್ ಅವರ ಪರಿಚಯದ ಹಾಡನ್ನು ವಿಭಿನ್ನವಾಗಿ ತೋರಿಸಲು ನಿರ್ದೇಶಕ ಪ್ರೇಮ್ ಯೋಚಿಸುತ್ತಿದ್ದು, ಸುದೀಪ್ ಅವರ ಪರಿಚಯದ ಹಾಡು ಬಹಳ ಅದ್ದೂರಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿದ್ದು, ಚಿತ್ರದಲ್ಲಿ ಶಿವರಾಜ್ ಕುಮಾರ್ ಪ್ರವೇಶದ ಹಾಡನ್ನು ಕೂಡ ವಿಭಿನ್ನವಾಗಿ ತೋರಿಸಲು ಮುಂದಾಗಿದ್ದಾರೆ.
ಬಾಲಿವುಡ್ ಬಾದ್ ಶಾ ಶಾರೂಕ್ ಖಾನ್ ರೀತಿಯಲ್ಲಿ ಕನ್ನಡದಲ್ಲಿ ಶಿವಣ್ಣ ಕೂಡ ಸ್ವಲ್ಪ ಭಿನ್ನವಾಗಿ ಇಲ್ಲಿ ಸಿನಿಮಾದಲ್ಲಿ ಎಂಟ್ರಿ ಕೊಡಲಿದ್ದಾರೆ. ಇಂಟ್ರೊಡಕ್ಷನ್ ಹಾಡಿನಲ್ಲಿ ಅವರು ಇಲ್ಲಿ ಸ್ಯಾಂಡಲ್ ವುಡ್ ನ ಆರು ಮಂದಿ ನಾಯಕಿಯರೊಂದಿಗೆ ಹೆಜ್ಜೆ ಹಾಕಲಿದ್ದಾರೆ.
ಅದಕ್ಕಾಗಿ ನಿರ್ದೇಶಕ ಪ್ರೇಮ್ ಹಲವು ನಟಿಯರನ್ನು ಸಂಪರ್ಕಿಸುತ್ತಿದ್ದು, ಸದ್ಯದಲ್ಲಿಯೇ ತೀರ್ಮಾನ ಮಾಡಲಿದ್ದಾರೆ. 
ಇನ್ನೊಂದೆಡೆ ಇದೇ ಸಂಕ್ರಾಂತಿಗೆ ಚಿತ್ರದ ಟೀಸರ್ ನ್ನು ಬಿಡುಗಡೆ ಮಾಡುವ ಆಲೋಚನೆಯಲ್ಲಿ ಶಿವಣ್ಣ ಇದ್ದಾರೆ. ಸಿ.ಆರ್.ಮನೋಹರ್ ನಿರ್ಮಾಣದ ಭಾರೀ ಬಜೆಟ್ ನಲ್ಲಿ ನಿರ್ಮಾಣವಾಗುತ್ತಿರುವ ವಿಲನ್ ಚಿತ್ರದಲ್ಲಿ ಅದ್ದೂರಿ ತಾರಾಗಣವಿದೆ. ಬಾಲಿವುಡ್ ನ ಮಿಥುನ್ ಚಕ್ರವರ್ತಿ, ತೆಲುಗು ನಟ ಶ್ರೀಕಾಂತ್, ಶ್ರುತಿ ಹರಿಹರನ್ ಮತ್ತು ತಿಲಕ್ ಕೂಡ ನಟಿಸುತ್ತಿದ್ದಾರೆ. ಅರ್ಜುನ್ ಜನ್ಯ ಅವರ ಸಂಗೀತ ಮತ್ತು ಗಿರ್ ಅವರ ಛಾಯಾಗ್ರಹಣ ಚಿತ್ರಕ್ಕಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!