ಸಿನಿಮಾ ಸುದ್ದಿ

ಕಪ್ಪು ಗುಲಾಬಿ ಚಿತ್ರದ ಲೀಡ್ ರೋಲ್‌ನಲ್ಲಿ ನಿಖಿತಾ ನಾರಾಯಣ್!

Vishwanath S
2010ರಲ್ಲಿ ಗುರುಕುಲ ಚಿತ್ರವನ್ನು ನಿರ್ದೇಶಿಸಿ ರಾಜ್ಯ ಪ್ರಶಸ್ತಿ ಪಡೆದಿದ್ದ ಸುನೀಲ್ ಪುರಾಣಿಕ್ ಇದೀಗ ಎಂಟು ವರ್ಷಗಳ ನಂತರ ಮತ್ತೊಂದು ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. 
ಚಿತ್ರಕ್ಕೆ ಕಪ್ಪು ಗುಲಾಬಿ ಎಂದು ಶೀರ್ಷಿಕೆ ಇಡಲಾಗಿದೆ. ಜನವರಿ 19ರಿಂದ ಚಿತ್ರದ ಚಿತ್ರೀಕರಣ ಶುರುವಾಗಲಿದೆ. ತಮ್ಮ ಚಿತ್ರದ ಬಗ್ಗೆ ಮಾತನಾಡಿರುವ ಸುನೀಲ್ ಪುರಾಣಿಕ್ ಅವರು, ಪ್ರೀತಿಯ ಹಿಂದಿನ ಕಪ್ಪು ನೆರಳು. ಜೀವವಿಲ್ಲದ ಪ್ರೀತಿ ಅಥವಾ ಕುರುಡು ಪ್ರೀತಿ ಎಂದೆಲ್ಲ ಕರೆಯುತ್ತೇವೆ. ಇಂದಿನ ಪೀಳಿಕೆಯಲ್ಲಿ ಇದೊಂದು ಸಾಮಾನ್ಯ ವಿಷಯವಾಗಿದೆ. 
ಕಪ್ಪು ಗುಲಾಬಿ ಚಿತ್ರದಲ್ಲಿ ನಿಖಿತಾ ನಾರಾಯಣ್ ರೀಡ್ ರೋಲ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದ ಮೂಲಕ ಸುನೀಲ್ ಪುರಾಣಿಕ್ ಅವರು ತಮ್ಮ ಮಗ ಸಾಗರ್ ಪುರಾಣಿಕ್ ಅವರನ್ನು ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದಾರೆ. 
ಕನ್ನಡ ಚಿತ್ರರಂಗದಲ್ಲಿ ಸುನೀಲ್ ಪುರಾಣಿಕ್ ಅವರಿಗೆ 32 ವರ್ಷಗಳ ಅನುಭವವಿದೆ. 15ಕ್ಕೂ ಹೆಚ್ಚು ಚಿತ್ರಗಳಿಗೆ ಸಹ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ. ಕನ್ನಡದ ಹೆಸರಾಂತ ನಿರ್ದೇಶಕರಾದ ವಿ ಸೋಮಶೇಖರ್, ಜಿವಿ ಅಯ್ಯರ್ ಮತ್ತು ದತ್ತು ಅವರೊಂದಿಗೆ ಸಹ ನಿರ್ದೇಶಕರಾಗಿ ದುಡಿದ ಅನುಭವವಿದೆ. ಡಾ. ರಾಜಕುಮಾರ್ ಕುಟುಂಬದ ವಜ್ರೇಶ್ವರಿ ಕಂಬೈನ್ಸ್ ಒಂದು ವಿಶ್ವವಿದ್ಯಾನಿಲಯವಿದ್ದಂತೆ. ಅಲ್ಲಿಂದಲೆ ನಾನು ಸಾಕಷ್ಟು ತರಬೇತಿ ಪಡೆದೆ. ಇನ್ನು ಪರಶುರಾಮ ಚಿತ್ರದಲ್ಲಿ ದಿಗ್ಗಜ ನಟ ರಾಜಕುಮಾರ್ ಅವರೊಂದಿಗೆ ನಟಿಸಿದ್ದು ಸಂತೋಷದ ವಿಷಯ ಎಂದು ಹೇಳಿದ್ದಾರೆ. 
ಸುನೀಲ್ ಪುರಾಣಿಕ್ ಅವರು ಕಿರುತೆರೆಯಲ್ಲಿ ಹಲವು ಧಾರಾವಾಹಿಗಳನ್ನು ನಿರ್ದೇಶಿಸಿದ್ದಾರೆ. ಕಿರುತೆರೆಯಲ್ಲಿ ಹೆಚ್ಚು ಸದ್ದು ಮಾಡಿದ್ದ ದಂಡಪಿಂಡಗಳು ಮತ್ತು ಮೂಡಲಮನೆ ಧಾರಾವಾಹಿಯಲ್ಲಿ ಅಭಿನಯಿಸಿದ್ದಾರೆ.
SCROLL FOR NEXT