ಬೆಂಗಳೂರು: ಕನ್ನಡದಲ್ಲಿ ದೊಡ್ಡ ಸ್ಟಾರ್ ನಟರೊಡನೆ ತೆರೆ ಮೇಲೆ ಕಾಣಿಸಿಕೊಂಡ ಬುಲ್ ಬುಲ್ ಬೆಡಗಿ ರಚಿತಾ ರಾಮ್ ಇದೀಗ ಒಂದರ ಹಿಂದೊಂದರಂತೆ ಚಿತ್ರಗಳಲ್ಲಿ ನಟಿಸುವ ಮೂಲಕ ಸದಾ ಬಿಡುವಿಲ್ಲದವರಾಗಿದ್ದಾರೆ. ಈ ನಟಿ ಇತ್ತೀಚೆಗೆ ಪ್ರೀತಮ್ ಗುಬ್ಬಿ ನಿರ್ದೇಶನ, ದುನಿಯಾ ವಿಜಯ್ ನಟನೆಯ 'ಜಾನಿ ಜಾನಿ ಯಸ್ ಪಪ್ಪಾ' ಚಿತ್ರದ ಚಿತ್ರೀಕರಣ ಮುಗಿಸಿದ್ದಾರೆ. ಈ ಚಿತ್ರಕ್ಕಾಗಿ ಅವರು ಮೊದಲ ಬಾರಿಗೆ ಡಬ್ಬಿಂಗ್ ಮಾಡಿದ್ದರೆನ್ನುವುದು ಗಮನಾರ್ಹ.ಇನ್ನು ಮಹೇಶ್ ನಿರ್ದೇಶನದ ಸತೀಶ್ ನೀನಾಸಂ ಅಭಿನಯದ ಚಿತ್ರ 'ಅಯೋಗ್ಯ' ದಲ್ಲಿ ಸಹ ರಚಿತಾ ಕೆಲಸ ಮಾಡುತ್ತಿದ್ದು ಇದರ ಚಿತ್ರೀಕರಣ ಭರದಿಂದ ಸಾಗಿದೆ. ಇನ್ನು ಈಕೆಯ ಮುಂದಿನ ಚಿತ್ರ ನಿಖಿಲ್ ಕುಮಾರ್ ನಟನೆ, ಹರ್ಷ ನಿರ್ದೇಶನದ 'ಸೀತಾರಾಮ ಕಲ್ಯಾಣ' ಇದೇ ಜ.19ರಿಂದ ಪ್ರಾರಂಭವಾಗಲಿದೆ.
ಅಯೋಗ್ಯ ಹಾಗೂ ಸೀತಾರಾಮ ಕಲ್ಯಾಣ ಚಿತ್ರದಲ್ಲಿನ ಪಾತ್ರಗಳ ಬಗೆಗೆ ನಟಿ ಸಾಕಷ್ಟು ಕುತೂಹಲ ಹೊಂದಿದ್ದಾರೆ. ಇದೆರಡೂ ಚಿತ್ರಗಳಲ್ಲಿ ರಚಿತಾ ಟಿಪಿಕಲ್ ಲೋಕಲ್ ಹುಡುಗಿಯ ಪಾತ್ರವಾಗಿದ್ದು "ನಾನು ಅಯೋಗ್ಯದಲ್ಲಿ ಮಂಡ್ಯ ಹುಡುಗಿ ಪಾತ್ರದಲ್ಲಿ ಮತ್ತು ಸೀತರಾಮ ಕಲ್ಯಾಣದಲ್ಲಿ ನೆರೆ ಮನೆಯ ಹುಡುಗಿಯಾಗಿ ಕಾಣಿಸಿಕೊಳ್ಳುತ್ತಿದ್ದೇನೆ.ಈ ಎರಡು ಪಾತ್ರಗಲಲ್ಲಿ ನಾನು ಪಾಶ್ಚಿಮಾತ್ಯ ಉಡುಗೆ ತೊಡುವುದಿಲ್ಲ, ಚೆನ್ನೈ ಎಕ್ಸ್ ಪ್ರೆಸ್ ನಲ್ಲಿ ದೀಪಿಕಾ ತೊಟ್ಟಿದ್ದಂತೆ ಶುದ್ದ ಸ್ಥಳೀಯ ಉಡುಪು ಧರಿಸಿದ್ದೇನೆ. ಮುಗ್ದತೆ, ನಾಚಿಕೆಘುಡುಗಿಯಾಗಿ ನಟಿಸುವುದು ನಿಜಕ್ಕೂ ಒಂದು ಸವಾಲಾಗಿದೆ."
"ನಿಜ ಜೀವನದಲ್ಲಿ, ನಾನು ಧೈರ್ಯವಂತೆ, ನೇರವಾಗಿ ಮುನ್ನುಗ್ಗುವ ಮನೋಭಾವ ಹೊಂದಿದ್ದೇನೆ. ಆದರೆ, ಈ ಚಿತ್ರಗಳಲ್ಲಿ ನನ್ನ ಪಾತ್ರ ಬಹಳ ಸೂಕ್ಷ್ಮವಾಗಿದೆ. ನಾನಿದನ್ನು ಹೇಗೆ ನಿಭಾಯಿಸುತ್ತೇನೆ ಎನ್ನುವುದರ ಕುರಿತು ನನಗೆ ಕುತೂಹಲವಿದೆ. ನಾವು ಬುಲ್ ಬುಲ್, ರನ್ನ ಮತ್ತು ಈಗ ಸೀತಾರಾಮ ಕಲ್ಯಾಣದಲ್ಲಿ ತೀರಾ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಹಿರಿಯ ನಟ ನಟಿಯರ ಎದುರಿಗೆ ಉತ್ತಮ ನಟನೆ ತೋರುವುದು ಸವಾಲಿನ ಕೆಲಸವಾಗಿದೆ." ರಚಿತಾ ಹೇಳಿದರು.
ನಿರ್ದೇಶಕ ಹರ್ಷ ತನ್ನ ಚಿತ್ರದಲ್ಲಿ ರಚಿತಾಗೆ ಸಾಕಷ್ಟು ಅವಕಾಶ ನೀಡಿದ್ದಾರೆಂದು ನಟಿ ಸಂತಸದಿಂದ ಹೇಳಿದ್ದಾರೆ "ಹರ್ಷ ನಿರ್ದೇಶನದ ಭಜರಂಗಿ ಮತ್ತು ಇತರ ಚಿತ್ರಗಳಲ್ಲಿ ನನಗೆ ಅವಕಾಶ ದೊರಕಲಿಲ್ಲ. . ಆದರೆ ಅಂತಿಮವಾಗಿ ಸೀತಾರಾಮ ಕಲ್ಯಾಣ ಚಿತ್ರಕ್ಕೆ ನಾನು ಆಯ್ಕೆಯಾಗಿದ್ದೇನೆ. ಅವರಂತೆ ನಾನು ಸಹ ಆಂಜನೇಯನ ಭಕ್ತೆ. ನಿಖಿಲ್ ಕುಮಾರ್ ಗೆ ನಾಯಕಿಯಾಗಿ ಅಭಿನಯಿಸಲು ನನಗೆ ಸಂತಸವಾಗುತ್ತದೆ"
"ನಾನು ವೃತ್ತಿಪರ ಮತ್ತು ಪ್ರಾಯೋಗಿಕ-ಮನಸ್ಸು ಹೊಂದಿದ್ದೇನೆ. ಹಿಂದಿನಂತೆ ಎಲ್ಲಾ ಚಿತ್ರಗಳನ್ನು ಒಪ್ಪಿಕೊಳ್ಳುವುದಿಲ್ಲ. ಸರಿಯಾದ ಕಥೆಯಿದ್ದಲ್ಲಿ ಮಾತ್ರ ನಾನು ಪಾತ್ರಕ್ಕೆ ಒಪ್ಪುತ್ತೇನೆ. " ರಚಿತಾ ಹೇಳಿದ್ದಾರೆ..