ಸಿನಿಮಾ ಸುದ್ದಿ

ಮಾಯಾಬಜಾರ್ ಗೆ ಬಂದ ನಾಯಕಿ ಚೈತ್ರಾ ರಾವ್

Sumana Upadhyaya
ಕಿರುತೆರೆಯಲ್ಲಿ ಒಳ್ಳೆಯ ಹೆಸರು ಗಳಿಸಿರುವ ಚೈತ್ರಾ ರಾವ್ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದ್ದಾರೆ. ಜೋಡಿಹಕ್ಕಿ ಖ್ಯಾತಿಯ ಚೈತ್ರಾ ರಾವ್ ಪುನೀತ್ ರಾಜ್ ಕುಮಾರ್ ಅವರ ಪಿಆರ್ ಕೆ ಪ್ರೊಡಕ್ಷನ್ ನಡಿ ತಯಾರಾಗುತ್ತಿರುವ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.
ಪ್ರೊಡಕ್ಷನ್ ಹೌಸ್ ನ ಮಾಯಾಬಜಾರ್ ಚಿತ್ರದಲ್ಲಿ ನಾಯಕಿಯಾಗಿ ಪಾದಾರ್ಪಣೆ ಮಾಡಲಿರುವ ಚೈತ್ರಾರಾವ್ ಅವರ ಜೊತೆ ರಾಜ್ ಬಿ ಶೆಟ್ಟಿ, ಪ್ರಕಾಶ್ ರಾಜ್, ವಶಿಷ್ಟ ಸಿಂಹ ಮತ್ತು ಸುಧಾರಾಣಿ ಅಭಿನಯಿಸುತ್ತಿದ್ದಾರೆ. ಚೊಚ್ಚಲ ನಿರ್ದೇಶಕ ರಾಧಾಕೃಷ್ಣ ರೆಡ್ಡಿ ಆಕ್ಷನ್, ಕಟ್ ಹೇಳಲಿದ್ದಾರೆ.
ನಿನ್ನೆ ಚಿತ್ರದ ಮುಹೂರ್ತದಲ್ಲಿ ಭಾಗವಹಿಸಿದ್ದ ನಟಿ ಚೈತ್ರಾ ಮಾತನಾಡಿ, ಇಷ್ಟು ದೊಡ್ಡ ಬ್ಯಾನರ್ ನಡಿ ನಾಯಕಿಯಾಗಿ ಪರಿಚಯವಾಗುತ್ತಿರುವುದಕ್ಕೆ ಸಂತೋಷವಿದೆ. ಇದೊಂದು ನನಗೆ ವರವೆಂದೇ ಹೇಳಬಹುದು ಎಂದು ಬಹಳ ಪುಳಕಿತಗೊಂಡಿದ್ದಾರೆ.
ಟಿವಿ ಧಾರವಾಹಿಯಲ್ಲಿ ನೋಡಿ ಚೈತ್ರ ಅವರನ್ನು ನಿರ್ದೇಶಕರು ಸಂಪರ್ಕಿಸಿದರಂತೆ. 
ಚೈತ್ರಾ ಬಾಲನಟಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟಿದ್ದು ಈ ಹಿಂದೆ ಸುಧಾರಾಣಿಯವರ ಮಗಳಾಗಿ ಮನಸೇ ಒ ಮನಸೇ ಧಾರವಾಹಿಯಲ್ಲಿ ನಟಿಸಿದ್ದರಂತೆ.ನಂತರ ಚಕ್ರವ್ಯೂಹ, ರಾಗ ಅನುರಾಗ ಧಾರವಾಹಿಗಳಲ್ಲಿ ಕೂಡ ನಟಿಸಿದ್ದಾರೆ. ಮಯಾಬಜಾರ್ ಚೈತ್ರಾ ಅವರ ಮೊದಲ ಸಿನಿಮಾವಾದರೂ ಕೂಡ ಈ ಹಿಂದೆ ಅವರು ಕಲಾ ಚಿತ್ರ ಧ್ವನಿಯಲ್ಲಿ ನಟಿಸಿದ್ದರಂತೆ.
ಇದೇ 29ರಿಂದ ಮಯಾಬಜಾರ್ ಚಿತ್ರದ ಶೂಟಿಂಗ್ ಆರಂಭವಾಗಲಿದ್ದು, ಚಿತ್ರಕ್ಕೆ ಮಧು ಮುಕುಂದನ್ ಅವರ ಸಂಗೀತ ಮತ್ತು ಅಭಿಶೇಕ್ ಕಾಸರಗೋಡು ಅವರ ಛಾಯಾಗ್ರಹಣವಿರುತ್ತದೆ.
SCROLL FOR NEXT