ರಂಜನಿ ರಾಘವನ್ 
ಸಿನಿಮಾ ಸುದ್ದಿ

ಪುಟ್ಟಗೌರಿ ಈಗ 'ಟಕ್ಕರ್' ನಾಯಕಿ, ರಘು ಶಾಸ್ತ್ರಿ ಚಿತ್ರದಲ್ಲಿ ರಂಜನಿ ಅಭಿನಯ

ಕಿರುತೆರೆಯ ಜನಪ್ರಿಯ ಧಾರಾವಾಹಿ 'ಪುಟ್ಟಗೌರಿ ಮದುವೆ' ಯ ನಾಯಕಿ ಪುಟ್ಟಗೌರಿ ಪಾತ್ರಧಾರಿ ರಂಜನಿ ರಾಘವನ್ ಬೆಳ್ಳಿತೆರೆಯಲ್ಲಿಯೂ ಮಿಂಚಲು ಹೊರಟಿದ್ದಾರೆ.

ಬೆಂಗಳೂರು: ಕಿರುತೆರೆಯ ಜನಪ್ರಿಯ ಧಾರಾವಾಹಿ 'ಪುಟ್ಟಗೌರಿ ಮದುವೆ' ಯ ನಾಯಕಿ ಪುಟ್ಟಗೌರಿ ಪಾತ್ರಧಾರಿ ರಂಜನಿ ರಾಘವನ್ ಬೆಳ್ಳಿತೆರೆಯಲ್ಲಿಯೂ ಮಿಂಚಲು ಹೊರಟಿದ್ದಾರೆ. ಇದಾಗಲೇ 'ರಾಜಹಂಸ' ಹಾಗೂ 'ಸುಬ್ಬ ಮತ್ತು ಸುಬ್ಬಿ' ಚಿತ್ರಗಳಲ್ಲಿ ಅಭಿನಯಿಸಿರುವ ರಂಜನಿ ಇದೀಗ ಮೂರನೇ ಚಿತ್ರಕ್ಕೆ ತಯಾರಾಗಿದ್ದು ಇದು ಅತ್ಯಂತ ನಿರೀಕ್ಷೆ ಹುಟ್ಟಿಸಿದೆ.
ಕಾರಣವೆಂದರೆ ಇದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಹೋದರ ಮನೋಜ್ ಅಭಿನಯದ ಚಿತ್ರ. ಮನೋಜ್ ನಾಯಕ ನಟನಾಗಿರುವ 'ಟಕ್ಕರ್' ಚಿತ್ರೆಅಕ್ಕೆ ರಂಜನಿ ಅಲಿಯಾಸ್ ಪುಟ್ಟಗೌರಿ ನಾಯಕಿಯಾಗಿದ್ದಾರೆ. ವಿನಯ್ ರಾಜ್ ಕುಮಾರ್ ಅಭಿನಯದ 'ರನ್ ಆಂಟೋನಿ' ಚಿತ್ರದ ನಿರ್ದೇಶಕ ರಘು ಶಾಸ್ತ್ರಿ ಈ ಚಿತ್ರದ ನಿರ್ದೇಶನ ಮಾಡುತ್ತಿರುವುದು ಇನ್ನೊಂದು ವಿಶೇಷ. ಚಿತ್ರ ಬಿಡುಗಡೆಗಾಗಿ ಚಿತ್ರತಂಡ ಇದಾಗಲೇ ಭರದ ಸಿದ್ದತೆಯಲ್ಲಿದ್ದು ಮಾರ್ಚ್ ಅಂತ್ಯ ಅಥವಾ ಏಪ್ರಿಲ್ ಮೊದಲ ವಾರದಲ್ಲಿ ಚಿತ್ರ ತೆರೆಕಾಣುವ ನಿರೀಕ್ಷೆ ಇದೆ.
ನಾಗೇಶ್ ಕೋಗಿಲು 'ಟಕ್ಕರ್' ಚಿತ್ರದ ನಿರ್ಮಾಪಕರಾಗಿದ್ದು ಎಸ್ ಎಲ್ ಎನ್ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಈ ಚಿತ್ರ ಮೂಡಿ ಬರಲಿದೆ. ಮಣಿಕಾಂತ ಕದ್ರಿ ಅವರ ಸಂಗೀತ ನಿರ್ದೇಶನ ಮತ್ತು ಕೆ.ಎಂ.ಪ್ರಕಾಶ್ ಎಡಿಟಿಂಗ್ ಈ ಚಿತ್ರಕ್ಕಿದ್ದು ಛಾಯಾಗ್ರಾಹಕರ ಆಯ್ಕೆ ಇನ್ನಷ್ಟೇ ಆಗಬೇಕಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'24 ಗಂಟೆಯೊಳಗೆ ಬಂಧಿತರ ಬಿಡುಗಡೆ ಮಾಡದಿದ್ದರೆ ನಾನೂ ಪ್ರತಿಭಟನೆ ಮಾಡುತ್ತೇನೆ': ಸೋನಮ್ ವಾಂಗ್‌ಚುಕ್ ಎಚ್ಚರಿಕೆ

ವೀರಶೈವ-ಲಿಂಗಾಯತ ಬೇರೆ ಮಾಡಲು ಹೋದಾಗ ಮಠಾಧೀಶರ ಕ್ಷಮೆ ಕೇಳಿದ್ದೆ: ನಾವು ಸೂಜಿಯಂತೆ ಹೊಲಿಯುವವರೇ ಹೊರತು ಕತ್ತರಿಯಲ್ಲ ಎಂದ ಸಿಎಂ ಡಿಕೆಶಿ

ಡಿಕೆಶಿನೇ ಹೇಳಿದ್ದಾರೆ ನಿನ್ನ ಕ್ಷೇತ್ರಕ್ಕೆ ನಾನೇ ಬಾಸ್ ಅಂತ: ನನ್ನ ಕ್ಷೇತ್ರಕ್ಕೆ ಕೈ ಹಾಕಿದ್ರೆ ಬಿಡಲ್ಲ; MC Sudhakarಗೆ ಪ್ರದೀಪ್ ಪರೋಕ್ಷ ಟಾಂಗ್‌

'SIR ನಿಲ್ಲಲ್ಲ, ಜ್ಞಾನೇಶ್ ಕುಮಾರ್ ಕೂಡ ಹೋಗಲ್ಲ’; ಪ್ರಶ್ನೆ ಏನು ಅಂದ್ರೆ ಪ್ರತಿಭಟನೆಗಳ ಗತಿ ಏನು?: ಪತ್ರಕರ್ತ ಭೂಪೇಂದ್ರ ಚೌಬೆ

Super Emergency: ತಾರಕಕ್ಕೇರಿದ ದೆಹಲಿ ಪ್ರತಿಭಟನೆ, ಬರೊಬ್ಬರಿ 3 ಸಾವಿರ ಮಂದಿ ವಶಕ್ಕೆ, ವಿಪಕ್ಷಗಳ ಆಕ್ರೋಶ!