ರಕ್ಷಿತ್-ರಶ್ಮಿಕಾ ನಿಶ್ಚಿತಾರ್ಥಕ್ಕೆ ವರ್ಷ 
ಸಿನಿಮಾ ಸುದ್ದಿ

ರಕ್ಷಿತ್-ರಶ್ಮಿಕಾ ನಿಶ್ಚಿತಾರ್ಥಕ್ಕೆ ವರ್ಷ: ಸಾಮಾಜಿಕ ತಾಣದ ಮೂಲಕ ಭಾವಿ ಪತ್ನಿಗೆ ರಕ್ಷಿತ್ ಪ್ರೇಮ ಪತ್ರ

ಸ್ಯಾಂಡಲ್‍ವುಡ್ ನಟ ರಕ್ಷಿತ್ ಶೆಟ್ಟಿ ಹಾಗೂ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ನಿಶ್ಚಿತಾರ್ಥ ನಡೆದು ಇಂದಿಗೆ (ಜುಲೈ 3) ಒಂದು ವರ್ಷ.

ಬೆಂಗಳೂರು: ಸ್ಯಾಂಡಲ್‍ವುಡ್  ನಟ ರಕ್ಷಿತ್ ಶೆಟ್ಟಿ ಹಾಗೂ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ನಿಶ್ಚಿತಾರ್ಥ ನಡೆದು ಇಂದಿಗೆ (ಜುಲೈ 3) ಒಂದು ವರ್ಷ. ಈ ಸಂಭ್ರಮವನ್ನು ಹೆಚ್ಚಿಸಲು ನಟ್ ಅರಕ್ಷಿತ್ ತಮ್ಮ ಫೇಸ್ ಬುಕ್ ತಾಣದಲ್ಲಿ ರೊಮ್ಯಾಂಟಿಕ್ ಪತ್ರವೊಂದನ್ನು ಬರೆದಿದ್ದಾರೆ.
ಸಾಮಾಜಿಕ ತಾಣ ಫೇಸ್ ಬುಕ್ ನಲ್ಲಿ ವೀಡಿಯೋ ಒಂದನ್ನು ಅಪ್ ಮಾಡಿರುವ ನಟ ರಕ್ಷಿತ್ ಶೆಟ್ಟಿ "ನಮ್ಮ ನಿಶ್ಚಿತಾರ್ಥವಾಗಿ ಒಂದು ವರ್ಷವಾಯಿತೆ? ನನಗೇನೋ ನಿನ್ನೆಯಷ್ಟೇ ನಮ್ಮ ನಿಶ್ಚಿತಾರ್ಥವಾದಂತಿದೆ.ಏಕೆಂದರೆ ನಿನ್ನ ಸುಂದರವಾದ ಔಟ್ ಫಿಟ್ ಗೆ ಮ್ಯಾಚ್ ಮಾಡಲು ನಾನಿನ್ನೂ ಸರಿಯಾದ ಟೈ ಹುಡುಕುತ್ತಿದ್ದೇನೆ. ಸಧ್ಯ ನಾನು ನಮ್ಮ ನಿಶ್ಚಿತಾರ್ತದ ಫೋಟೋ ಹಾಗೂ ವೀಡಿಯೋಗಳನ್ನು ನೋಡುತ್ತಿದ್ದೇನೆ" ಎಂದು ಹೇಳಿದ್ದಾರೆ.
ಈ ಒಂದು ವರ್ಷದಲ್ಲಿ ನಾನು ನಿನ್ನೊಂದಿಗೆ ಇದ್ದು ಏನೋ ಸಂಪಾದನೆ ಮಾಡಿದ್ದೇನೆ. ನಿನ್ನಿಂದ ನಾನು ಸಾಕಷ್ಟು ವಿಷಯ ಕಲಿತಿದ್ದೇನೆ. ಅಲ್ಲದೆ ನಿನ್ನಿಂದ ದೂರವಿರುವ ಕಾರಣ ನಾನು ಇನ್ನಷ್ಟು ವಿಷಯ ತಿಳಿದುಕೊಳ್ಳುವುದರಲ್ಲಿ ಹಿಂದೆ ಬಿದ್ದಿದ್ದೇನೆ. ನೀನು ನನ್ನ ಜೀವನದಲ್ಲಿ ಪರಿಚಯವಾದ ಅತ್ಯುತ್ತಮ ವ್ಯಕ್ತಿ, ನಾನು ಪ್ರತಿ ದಿನವೂ ನಿನ್ನನ್ನು ಇನ್ನೂ ಹೆಚ್ಚು ಪ್ರೀತಿಸುತ್ತೇನೆ. ನಮ್ಮ ನಿಶ್ಚಿತಾರ್ಥದ ವಾರ್ಷಿಕೋತ್ಸವಕ್ಕೆ ಶುಭಾಶಯ ಎಂದು ರಕ್ಶಿತ್ ಶೆಟ್ಟಿ ತಮ್ಮ ಪೋಸ್ಟ್ ನಲ್ಲಿ ಬರೆದಿದ್ದಾರೆ.
ಸಧ್ಯ ಇಬ್ಬರೂ ನಟರು ತಮ್ಮ ತಮ್ಮ ಪಾಲಿನ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಕಳೆದ ಜುಲೈ 3ರಂದು ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ಗುರು ಹಿರಿಯರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ರಷ್ಮಿಕಾ ಮನೆಯಲ್ಲಿಯೇ ಈ ಕಾರ್ಯಕ್ರಮ ನಡೆದಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ