ಸ್ಯಾಂಡಲ್ವುಡ್ ನ ರಿಯಲ್ ಸ್ಟಾರ್ ಉಪೇಂದ್ರ ಅವರು ಸದ್ಯ ಐ ಲವ್ ಯೂ ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ.
ಲ ಲವ್ ಯೂ ಚಿತ್ರ ಉಪೇಂದ್ರ ಅವರ 49ನೇ ಚಿತ್ರವಾಗಿದ್ದು ಉಪೇಂದ್ರ ಅವರ 50ನೇ ಚಿತ್ರ ಯಾವುದಾಗಲಿದೆ ಎಂಬ ಕುತೂಹಲ ಮೂಡಿತ್ತು. ಇದೀಗ ಆ ಕುತೂಹಲಕ್ಕೆ ತೆರೆಬಿದ್ದಿದ್ದು ಓಂ ಸಾಯಿ ಪ್ರಕಾಶ್ ಅವರ ಹತ್ತಿರ ಸಹಾಯಕ ನಿರ್ದೇಶಕರಾಗಿದ್ದ ಸಂತೋಷ್ ತಮ್ಮ ಮೊದಲ ಚಿತ್ರದಲ್ಲೇ ಉಪೇಂದ್ರಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಚಿತ್ರಕ್ಕೆ ಅಧೀರ ಎಂದು ಶೀರ್ಷಿಕೆ ಇಡಲಾಗಿದೆ.
ಕನಕಪುರ ಶ್ರೀನಿವಾಸ್ ನಿರ್ಮಾಣ ಮಾಡುತ್ತಿರುವ ಅಧೀರ ಚಿತ್ರವನ್ನು ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ರೆಡಿಯಾಗಲಿದೆ. ಅಧೀರ ಐತಿಹಾಸಿಕ ಕಥೆಯಾದರಿಸಿದ ಚಿತ್ರವಾಗಿದ್ದು ಕಮರ್ಷಿಯಲ್ ಮತ್ತು ಸ್ಪಸ್ಪೆನ್ಸ್ ಅಂಶಗಳನ್ನು ಹೊಂದಿದೆ.
ಸದ್ಯ ನಿರ್ದೇಶಕರು ಚಿತ್ರದ ಪ್ರೀ-ಪ್ರೊಡೆಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದ್ದು ಆಗಸ್ಟ್ ಅಥವಾ ಸೆಪ್ಟಂಬರ್ ನಲ್ಲಿ ಚಿತ್ರದ ಚಿತ್ರೀಕರಣ ಪ್ರಾರಂಭವಾಗಲಿದೆ.
ಸಂತೋಷ್ ಅವರು ಮೊದಲಿಗೆ ಅಧೀರ ಹೆಸರಿನಲ್ಲಿ ಪ್ರೀ ಟ್ರೈಲರ್ ಬಿಡುಗಡೆ ಮಾಡಿದ್ದರು. ಈ ಟ್ರೈಲರ್ ಅನ್ನು ನೋಡಿದ ನಿರ್ಮಾಪಕ ಕನಕಪುರ ಶ್ರೀನಿವಾಸ್ ಹಾಗೂ ಉಪೇಂದ್ರ ಇಬ್ಬರು ಚಿತ್ರಕ್ಕೆ ಓಕೆ ಅಂದಿದ್ದಾರೆ.