ನಟ ಸಂಜಯ್ ದತ್ 
ಸಿನಿಮಾ ಸುದ್ದಿ

'ಸಾಹೇಬ್ ಬೀವಿ ಗ್ಯಾಂಗ್'ಸ್ಟರ್ 3' ಪೋಸ್ಟರ್ ಹಂಚಿಕೊಂಡ ನಟ ಸಂಜಯ್ ದತ್

ಟ್ರೇಲರ್ ನಿಂದ ಈಗಾಗಲೇ ವೀಕ್ಷಕರ ಮನಗೆದ್ದಿರುವ 'ಸಾಹೇಬ್ ಬೀವಿ ಗ್ಯಾಂಗ್'ಸ್ಟರ್ 3' ಚಿತ್ರದ ಪೋಸ್ಟರ್ ವೊಂದರನ್ನು ನಟ ಸಂಜಯ್ ದತ್ ಅವರು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ...

ನವದೆಹಲಿ; ಟ್ರೇಲರ್ ನಿಂದ ಈಗಾಗಲೇ ವೀಕ್ಷಕರ ಮನಗೆದ್ದಿರುವ 'ಸಾಹೇಬ್ ಬೀವಿ  ಗ್ಯಾಂಗ್'ಸ್ಟರ್ 3' ಚಿತ್ರದ ಪೋಸ್ಟರ್ ವೊಂದರನ್ನು ನಟ ಸಂಜಯ್ ದತ್ ಅವರು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ. 
ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಪೋಸ್ಟರ್ ಅನ್ನು ಹಂಚಿಕೊಂಡಿರುವ ಸಂಜಯ್ ದತ್ ಅವರು 'ಇಸ್ ಬಾರ್ ಮೇ ಹೇ ಔರ್ ಝ್ಯಾದಾ ಖತ್ರಾ ಔರ್ ಧೂಮ್'! ಪೇಶ್ ಹೇ ಏಕ್ ಔರ್ #SBG3Poster?. ಎಂದು ಹೇಳಿದ್ದಾರೆ. ಅಲ್ಲದೆ, ಜು.27 ರಂದು ಎಲ್ಲಾ ಚಿತ್ರಮಂದಿರಗಳಲ್ಲೂ ಪ್ರದರ್ಶನಗೊಳ್ಳಲಿದೆ ಎಂದು ಹೇಳಿದ್ದಾರೆ.
2011ರಲ್ಲಿ ಸಾಹೇಬ್ ಬೀವಿ ಗ್ಯಾಂಗ್ ಸ್ಟರ್ ಚಿತ್ರ ಬಿಡುಗಡೆಯಾಗಿತ್ತು. ಈ ಚಿತ್ರದಲ್ಲಿ ರಣ್ದೀಪ್ ಹೂಡ ಮುಖ್ಯ ಪಾತ್ರವನ್ನು ನಿರ್ವಹಿಸಿದ್ದರು. 2013ರಲ್ಲಿ ಸಾಹೇಬ್ ಬೀವಿ ಗ್ಯಾಂಗ್ ಸ್ಟರ್ ರಿಟರ್ನ್ಸ್ ಸಿನಿಮಾ ಬಿಡುಗಡೆಯಾಗಿತ್ತು. ಈ ಚಿತ್ರದಲ್ಲಿ ಇರ್ಫಾನ್ ಖಾನ್ ನಾಯಕರಾಗಿದ್ದರು. ಇದೀಗ ಮೂರನೇ ಭಾಗ ಸಿದ್ಧವಾಗಿದ್ದು, ಚಿತ್ರದಲ್ಲಿ ಸಂಜಯ್ ದತ್ ಕಾಣಿಸಿಕೊಂಡಿದ್ದಾರೆ. 
ಸಾಹೇಬ್ ಬೀವಿ ಗ್ಯಾಂಗಸ್ಟರ್ 3 ಚಿತ್ರದಲ್ಲಿ ಸಂಜಯ್ ದತ್ ಅವರು ಗ್ಯಾಂಗ್'ಸ್ಟರ್ ಪಾತ್ರವನ್ನು ನಿರ್ವಹಿಸುತ್ತಿದ್ದು, ಚಿತ್ರವನ್ನು ತಿಗ್ಮಾನ್ಷು ದುಲಿಯಾ ಅವರು ನಿರ್ದೇಶನ ಮಾಡುತ್ತಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Super Emergency: ತಾರಕಕ್ಕೇರಿದ ದೆಹಲಿ ಪ್ರತಿಭಟನೆ, ಬರೊಬ್ಬರಿ 3 ಸಾವಿರ ಮಂದಿ ವಶಕ್ಕೆ, ವಿಪಕ್ಷಗಳ ಆಕ್ರೋಶ!

'vote chori' ಹೇಗಿರತ್ತೆ ನಮ್ಗೆ ಗೊತ್ತು, ಸಿನಿಮಾದಲ್ಲಿ ತೋರಿಸಿದ್ದ ರಿಗ್ಗಿಂಗ್ ವಾತಾವರಣ ನಿಜವಾಗಿಯೂ ನೋಡಿದ್ದೇವೆ: SIR ಗೆ 124 ಮಾಜಿ ಅಧಿಕಾರಿಗಳು, ರಾಜತಾಂತ್ರಿಕರಿಂದ ಬೆಂಬಲ

ಹೃದಯವಿದ್ರಾವಕ: 'ಚಿಕಿತ್ಸೆಗೆ ಹಣವಿಲ್ಲ'.. 6 ವರ್ಷದ ಮಗಳನ್ನೇ ಕೆರೆಗೆ ಎಸೆದ ತಾಯಿ; ಆಟೋ ಚಾಲಕನಿಂದ ರಕ್ಷಣೆ

'ನಿಮಗೆ ನಾಚಿಕೆಯಾಗಬೇಕು': CJP ನಾಯಕರ ವಿರುದ್ಧ ವಿಮಾನದಲ್ಲಿ ಪ್ರಯಾಣಿಕರ ಆಕ್ರೋಶ, Video!

ಅಭಿಜೀತ್ ದೀಪ್ಕೆ ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ; ಅಜ್ಜಿ ಸಾವಿನ ಸುದ್ದಿ ತಿಳಿಸುವುದು ಹೇಗೆ? ಪೊಲೀಸ್ ಕ್ರಮಕ್ಕೆ ಪೋಷಕರ ಆಕ್ರೋಶ