ಸಿನಿಮಾ ಸುದ್ದಿ

ಶಾಪಿಂಗ್ ಹೊರಟ ಅಂಬರೀಷ್-ಸುಹಾಸಿನಿ

Sumana Upadhyaya

ರೆಬೆಲ್ ಸ್ಟಾರ್ ಅಂಬರೀಷ್ ಮತ್ತು ಸುಹಾಸಿನಿ ಮಣಿರತ್ನಂ ಶಾಪಿಂಗ್ ಹೊರಟಿದ್ದಾರೆ. ಬೆಂಗಳೂರಿನ ಮಾಲ್ ಗಳಲ್ಲಿ ಜೊತೆಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಅಷ್ಟಕ್ಕೂ ಇವರಿಬ್ಬರು ಶಾಪಿಂಗ್ ಹೊರಟಿರುವುದು ಏಕೆ, ಏನು ಪರ್ಚೇಸ್ ಮಾಡಲು ಎಂದುಕೊಂಡಿರಾ?

ಅದು ಸಿನಿಮಾದಲ್ಲಿ. ಅಂಬಿ ನಿಂಗೆ ವಯಸ್ಸಾಯ್ತೊ ಸಿನಿಮಾದ ಕೊನೆಯ ಹಂತದ ಚಿತ್ರೀಕರಣ ಸಾಗುತ್ತಿದ್ದು ಚಿತ್ರದಲ್ಲಿನ ಸನ್ನಿವೇಶಕ್ಕಾಗಿ ಅವರು ಬೆಂಗಳೂರಿನ ಮಾಲ್ ಗಳಲ್ಲಿ ಶಾಪಿಂಗ್ ಮಾಡುತ್ತಿದ್ದಾರೆ. ಚಿತ್ರದ ಕಥೆಯಲ್ಲಿ ಮಧ್ಯ ವಯಸ್ಸಿನ ದಂಪತಿ ಯುವವಯಸ್ಸಿನಲ್ಲಿ ಪ್ರೀತಿಸುತ್ತಿದ್ದು ಮಧ್ಯೆ ದೂರವಾಗಿ ಹಲವು ವರ್ಷಗಳ ನಂತರ ಮತ್ತೆ ಸಂಧಿಸುತ್ತಾರೆ.

ಅವರು ಮತ್ತೆ ಭೇಟಿಯಾದ ನಂತರ ಹಾಡೊಂದು ಬರಲಿದ್ದು ಅದರಲ್ಲಿ ಶಾಪಿಂಗ್ ಮಾಡುವುದು, ಒಟ್ಟೊಟ್ಟಿಗೆ ರೆಸ್ಟೋರೆಂಟ್, ಐಸ್ ಕ್ರೀಂ ಪಾರ್ಲರ್ ಗೆ ಹೋಗುವ ಸನ್ನಿವೇಶವಿದೆ ಎನ್ನುತ್ತಾರೆ ನಿರ್ದೇಶಕ ಗುರುದತ್ತ ಗಾಣಿಗ.

ಈ ಸನ್ನಿವೇಶದ ಚಿತ್ರ ಮಾಧ್ಯಮಗಳಿಗೆ ಸಿಕ್ಕಿದೆ.

SCROLL FOR NEXT