ಬೆಂಗಳೂರು: ಸ್ಯಾಂಡಲ್ವುಡ್ ನ ಬ್ಲಾಕ್ ಬಸ್ಟರ್ ನೀರ್‌ದೋಸೆ ಚಿತ್ರದ ನಿರ್ದೇಶಕ ವಿಜಯ್ ಪ್ರಸಾದ್ ಮತ್ತು ನವರಸನಾಯಕ ಜಗ್ಗೇಶ್ ಮತ್ತೆ ಒಂದಾಗಿದ್ದಾರೆ.
ಜಗ್ಗೇಶ್ ಗಾಗಿ ವಿಭಿನ್ನ ಕಥೆಯನ್ನು ನಿರ್ದೇಶಕ ವಿಜಯ್ ಪ್ರಸಾದ್ ರೆಡಿ ಮಾಡಿದ್ದಾರೆ. ನೀರ್‌ದೋಸೆ ಜೋಡಿ ಮತ್ತೆ ಒಂದಾಗುತ್ತಿರುವುದು ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಿಸಿದೆ. ಇನ್ನ ಈ ಚಿತ್ರವನ್ನು ಕೆಎ ಸುರೇಶ್ ನಿರ್ಮಾಣ ಮಾಡಲಿದ್ದಾರೆ.
ವಿಜಯ್ ಪ್ರಸಾದ್ ಅವರು ಸಿದ್ಲಿಂಗು ಮತ್ತು ನೀರ್‌ದೋಸೆ ಚಿತ್ರಗಳಂತ ವಿಭಿನ್ನ ಚಿತ್ರಗಳನ್ನು ಮಾಡಿ ವಿಮರ್ಶಕರ ಮೆಚ್ಚುಗೆಗೆ ಪಾತ್ರರಾಗಿದ್ದರು. ಇನ್ನು ಅವರ ಮೂರನೇ ಲೇಡಿಸ್ ಟೈಲರ್ ಚಿತ್ರದ ನಾಯಕ ಪಾತ್ರದ ಬಗ್ಗೆ ಗೊಂದಲ ಉಂಟಾಗಿ ಚಿತ್ರ ಹಲವು ಬಾರಿ ಸ್ಧಗಿತಗೊಂಡಿತ್ತು. ಇದೀಗ ಆ ಯೋಜನೆಯಿಂದ ಹೊರಬಂದಿರುವ ವಿಜಯ್ ಪ್ರಸಾದ್ ಸದ್ಯ ಹೊಸ ಕಥೆಯನ್ನು ಹೇಳಲು ಹೊರಟಿದ್ದಾರೆ.
ಮುಂದಿನ ದಿನಗಳಲ್ಲಿ ಚಿತ್ರದ ಕುರಿತಾಗಿ ಅಧಿಕೃತ ಘೋಷಣೆಗಳು ಹೊರಬೀಳಲಿದಿದ್ದು ಅಲ್ಲಿಯವರೆಗೂ ಅಭಿಮಾನಿಗಳು ಕಾಯಬೇಕಿದೆ.