ಬೆಂಗಳೂರು: ಪ್ರಶಾಂತ್ ರಾಜ್ ನಿರ್ದೇಶನದ ಆರೇಂಜ್ ಸಿನಿಮಾ ಶೂಟಿಂಗ್ ನಲ್ಲಿ ನಿರತರಾಗಿರುವ ಗೋಲ್ಡನ್ ಸ್ಟಾರ್ ಗಣೇಶ್ ಮುಂದಿನ ಚಿತ್ರವನ್ನು ನಾಗಣ್ಣ ನಿರ್ದೇಶಿಸಲಿದ್ದಾರೆ. ಕುರುಕ್ಷೇತ್ರ ಸಿನಿಮಾ ಮುಗಿದ ಬೆನ್ನಲ್ಲೇ ನಾಗಣ್ಣ ತಮ್ಮ ಮುಂದಿನ ಸಿನಿಮಾಗಾಗಿ ತಯಾರಿ ನಡೆಸುತ್ತಿದ್ದಾರೆ.
ನಾಗಣ್ಣ ನಿರ್ದೇಶನದ ಗಣೇಶ್ ಅಭಿನಯದ ಹಾರರ್ ಕಾಮಿಡಿ ಸಿನಿಮಾಗೆ ಗಿಮಿಕ್ ಎಂದು ಟೈಟಲ್ ಇಡಲಾಗಿದೆ.ಇದೇ ಮೊದಲ ಬಾರಿಗೆ ಗಣೇಶ್ ಸಿನಿಮಾಗೆ ನಾಗಣ್ಣ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಶ್ರೀಲಂಕಾದ ಹಲವು ಸ್ಥಳಗಳಲ್ಲಿ ಶೂಟಿಂಗ್ ನಡೆಸಲು ಚಿತ್ರತಂಡ ಸಿದ್ಧತೆ ನಡೆಸಿದೆ. ಕೆಲ ಪ್ರಮುಖ ದೃಶ್ಯಗಳ ಚಿತ್ರೀಕರಣಕ್ಕಾಗಿ ಒಂದು ಅತ್ಯುತ್ತಮ ಮನೆ ಹುಡುಕಾಡುತ್ತಿದ್ದೇವೆ, ಈ ಹಂತದಲ್ಲಿ ಎಲ್ಲವೂ ಪ್ಲಾನಿಂಗ್ ಆಗಿದೆ ಎಂದು ನಾಗಣ್ಣ ತಿಳಿಸಿದ್ದಾರೆ.
ಪಂಜಾಬಿ ನಟಿ ರೋನಿಕಾ ಸಿಂಗ್ ನಾಯಕಿಯಾಗಿದ್ದು, ಅರ್ಜುನ್ ಜನ್ಯ ಸಿನಿಮಾಗೆ ಸಂಗೀತ ನೀಡಿದ್ದಾರೆ. ಸಾಧುಕೋಕಿಲಾ ಮುಂತಾದವರು ನಟಿಸಿದ್ದಾರೆ.