ಸೊನಾಲಿ ಬೇಂದ್ರೆ 
ಸಿನಿಮಾ ಸುದ್ದಿ

ನಟಿ ಸೊನಾಲಿ ಬೇಂದ್ರೆಯಿಂದ ಮಗನಿಗೊಂದು 'ಭಾವಪೂರ್ಣ ಪತ್ರ'

ಬಾಲಿವುಡ್ ನಟಿ ಸೊನಾಲಿ ಬೇಂದ್ರೆ ಕ್ಯಾನ್ಸರ್ ಕಾಯಿಲೆಗೆ ತುತ್ತಾಗಿದ್ದು ಪ್ರಸ್ತುತ ನ್ಯೂಯಾರ್ಕ್ ನಲ್ಲಿ ಅದಕ್ಕೆ ...

ನವದೆಹಲಿ: ಬಾಲಿವುಡ್ ನಟಿ ಸೊನಾಲಿ ಬೇಂದ್ರೆ ಕ್ಯಾನ್ಸರ್ ಗೆ ತುತ್ತಾಗಿದ್ದು ಪ್ರಸ್ತುತ ನ್ಯೂಯಾರ್ಕ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂದರ್ಭದಲ್ಲಿ ತಮ್ಮ ಮಗನಿಗೆ ಭಾವಪೂರ್ಣ ಪತ್ರ ಬರೆದಿರುವ ಅವರು, ತಮ್ಮ ಮಗನ ಮುಗ್ಧ ಪ್ರೀತಿಯಿಂದಾಗಿ ಪ್ರಕಾಶಮಾನವಾದ ಸೂರ್ಯನ ಕಿರಣಗಳು ಬದುಕಿನಲ್ಲಿ ಹೊಳೆಯುವಂತೆ ಕಾಣುತ್ತಿದೆ ಎಂದಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ತಮ್ಮ 12 ವರ್ಷದ ಪುತ್ರ ರಣವೀರ್ ಗೆ ಹೃದಯಪೂರ್ವಕ ಅಕ್ಷರಗಳಿಂದ ಪತ್ರ ಬರೆದಿದ್ದಾರೆ.

''12 ವರ್ಷ 11 ತಿಂಗಳು, 8 ದಿನಗಳ ಹಿಂದೆ, ನನ್ನ ಮಗ ಜನಿಸಿದ ದಿನದಿಂದ ಅವನು ನನ್ನ ಹೃದಯದಲ್ಲಿ ಸ್ಥಾನ ಪಡೆದುಕೊಂಡಿದ್ದಾನೆ. ಅಂದಿನಿಂದ ಅವನ ಸಂತೋಷ ಮತ್ತು ಸುಖವೇ ನನಗೆ ಮತ್ತು ನನ್ನ ಪತಿ ಗೋಲ್ಡಿ ಬೆಲ್ ಗೆ ಮುಖ್ಯವಾಗಿತ್ತು. ಆದರೆ ನನಗೆ ಯಾವಾಗ ಜೀವಕ್ಕೆ ಆಪತ್ತು ಬರುವ ಖಾಯಿಲೆ ಇದೆ ಎಂದು ಗೊತ್ತಾಯಿತೋ ಅದನ್ನು ನಮ್ಮ ಮಗನಿಗೆ ಹೇಗೆ ಹೇಳುವುದು, ಅವನಿಗೆ ಹೇಗೆ ಅರ್ಥ ಮಾಡಿಸುವುದು ಎಂಬ ಗೊಂದಲ, ಸಂಕಟದಲ್ಲಿ ನಾವಿದ್ದೆವು'' ಎಂದು ಸೊನಾಲಿ ತಮ್ಮ ಮನಸ್ಸಿನ ಭಾವನೆಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

ಅವರು ಬರಹವನ್ನು ಮುಂದುವರಿಸುತ್ತಾ, ಇದೀಗ ಸರಿಯಾದ ಸಮಯ ಬಂದಿದೆ, ಈ ಸಮಯವನ್ನು ಮಗ ರಣವೀರ್ ಜೊತೆಗೆ ಕಳೆಯುತ್ತಿದ್ದೇನೆ. ಆತನಿಗೆ ಈಗ ಬೇಸಿಗೆ ರಜೆ. ಆತನ ಮುಗ್ಧ ಮಾತು, ಆಟ, ಹುಚ್ಚುತನ, ವರ್ತನೆ ಪ್ರಕಾಶಮಾನವಾದ ಸೂರ್ಯನ ಕಿರಣಗಳಂತೆ ನನ್ನ ಬಾಳಲ್ಲಿ ಪ್ರಜ್ವಲಿಸಲು ಸಹಾಯ ಮಾಡುತ್ತಿದೆ. ಇಂದು ನಾವಿಬ್ಬರೂ ಒಬ್ಬರಿಗೊಬ್ಬರು ಶಕ್ತಿಯನ್ನು ಹೆಚ್ಚಿಸಿಕೊಳ್ಳುತ್ತಿದ್ದೇವೆ ಎಂದು ಬರೆದು ಸೊನಾಲಿ ಬೇಂದ್ರೆ ತಮ್ಮ ಪತ್ರಕ್ಕೆ ಫುಲ್ ಸ್ಟಾಪ್ ಒತ್ತಿದ್ದಾರೆ.

ಪತ್ರದ ಜೊತೆಗೆ ತಮ್ಮ ಮಗನನ್ನು ಆಲಂಗಿಸಿಕೊಂಡಿರುವ ಫೋಟೋವನ್ನು ಸಹ ಸೊನಾಲಿ ಬೇಂದ್ರೆ ಅಪ್ ಲೋಡ್ ಮಾಡಿದ್ದಾರೆ.

ಈ ತಿಂಗಳ ಆರಂಭದಲ್ಲಿ ತಮಗೆ ಹೈಗ್ರೇಡ್ ಕ್ಯಾನ್ಸರ್ ಇದೆ ಎಂದು ಇನ್ಸ್ಟಾಗ್ರಾಮ್ ಮೂಲಕವೇ ಸೊನಾಲಿ ಬೇಂದ್ರೆ ಬಹಿರಂಗಪಡಿಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT