ಐ ಲವ್ ಯೂ ಚಿತ್ರದಲ್ಲಿ ಉಪೇಂದ್ರಗೆ ರಚಿತಾ ರಾಮ್ ಜೋಡಿ?
ಆರ್ ಚಂದ್ರು ನಿರ್ದೇಶನದ ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಐ ಲವ್ ಯೂ ಚಿತ್ರದಲ್ಲಿ ರಚಿತಾ ರಾಮ್ ನಾಯಕಿಯಾಗಿ ಅಭಿನಯಿಸಲಿದ್ದಾರೆ ಎಂದು ಹೇಳಲಾಗುತ್ತಿದೆ...
ಆರ್ ಚಂದ್ರು ನಿರ್ದೇಶನದ ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಐ ಲವ್ ಯೂ ಚಿತ್ರದಲ್ಲಿ ರಚಿತಾ ರಾಮ್ ನಾಯಕಿಯಾಗಿ ಅಭಿನಯಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
ಐ ಲವ್ ಯೂ ಚಿತ್ರದಲ್ಲಿ ಉಪೇಂದ್ರರಿಗೆ ಯಾರು ನಾಯಕಿಯಾಗುತ್ತಾರೆ ಎಂಬ ಕುತೂಹಲ ಮೂಡಿಸಿತ್ತು. ಇದೀಗ ಆ ಊಹಾಪೋಹಗಳಿಗೆ ತೆರೆ ಏಳೆಯಲಾಗಿದ್ದು ಉಪೇಂದ್ರರಿಗೆ ಜೋಡಿಯಾಗಿ ರಚಿತಾ ರಾಮ್ ನಟಿಸಲಿದ್ದಾರೆ. ಜೂನ್ 5ರಿಂದ ಚಿತ್ರದ ಚಿತ್ರೀಕರಣ ಪ್ರಾರಂಭವಾಗಲಿದೆ.
ಚಿತ್ರದ ನಾಯಕಿ ಆಯ್ಕೆಗಾಗಿ ನಿರ್ದೇಶಕರು ಹೆಚ್ಚು ತಲೆಕೆಡಿಸಿಕೊಂಡಿದ್ದು ಇದೀಗ ಆ ಪಾತ್ರಕ್ಕೆ ರಚಿತಾ ರಾಮ್ ಸೂಕ್ತ ಎಂದು ಭಾವಿಸಿದ್ದಾರೆ. ಇನ್ನು ಚಿತ್ರದ ಕುರಿತಂತೆ ರಚಿತಾ ರಾಮ್ ಜತೆ ಚರ್ಚೆ ಮತ್ತು ವೇಳಾಪಟ್ಟಿ ಕುರಿತಂತೆ ಮಾತುಕತೆ ನಡೆಯಬೇಕಿದೆ ಎಂಬುದು ಮೂಲಗಳಿಂದ ತಿಳಿದುಬಂದಿದೆ.
ಈ ಹಿಂದೆ ಉಪ್ಪಿ ರುಪ್ಪಿ ಚಿತ್ರದಲ್ಲಿ ರಚಿತಾ ರಾಮ್ ನಟಿಸುತ್ತಾರೆ ಎಂದು ಹೇಳಲಾಗಿತ್ತು. ಚಿತ್ರ ಯೋಜನೆ ಸಿದ್ಧಗೊಂಡಿದ್ದು ಆದರೆ ಬಳಿಕ ಯೋಜನೆ ನಿಂತುಹೋಗಿತ್ತು.
ಇನ್ನು ರಚಿತಾ ರಾಮ್ ಪ್ರಸ್ತುತ ನಿಖಿಲ್ ಕುಮಾರ್ ಅಭಿನಯದ ಸೀತಾರಾಮ ಕಲ್ಯಾಣ ಮತ್ತು ಪುನೀತ್ ರಾಜಕುಮಾರ್ ಅಭಿಯದ ನಟಸಾರ್ವಭೌಮ ಚಿತ್ರದಲ್ಲಿ ನಟಿಸುತ್ತಿದ್ದಾರೆ.