ಯಶ್ 
ಸಿನಿಮಾ ಸುದ್ದಿ

'ರಾಕಿಂಗ್ ಸ್ಟಾರ್' ಯಶ್ ಗಾಗಿ ನಿರ್ದೇಶಕ ಅನಿಲ್ ಕುಮಾರ್ ಕಥೆ

ಪ್ರಶಾಂತ್ ನೀಲ್ ನಿರ್ದೇಶನದ ಯಶ್ ಅಭಿನಯದ ಕೆ. ಜಿ. ಎಫ್ ಚಿತ್ರ ಶೂಟಿಂಗ್ ವೇಳೆಯಲ್ಲಿಯೇ ಸಾಕಷ್ಟು ಸುದ್ದಿ ಮಾಡಿದ್ದು, ಈ ವರ್ಷದ ಬಹು ನಿರೀಕ್ಷಿತ ಚಿತ್ರ ಬಿಡುಗಡೆಗೆ ಪ್ರೇಕ್ಷಕರು ತುದಿಗಾಲಲ್ಲಿ ನಿಂತಿದ್ದಾರೆ.

ಪ್ರಶಾಂತ್ ನೀಲ್ ನಿರ್ದೇಶನದ ಯಶ್ ಅಭಿನಯದ ಕೆ. ಜಿ. ಎಫ್ ಚಿತ್ರ ಶೂಟಿಂಗ್ ವೇಳೆಯಲ್ಲಿಯೇ ಸಾಕಷ್ಟು ಸುದ್ದಿ ಮಾಡಿದ್ದು,  ಈ ವರ್ಷದ  ಬಹು ನಿರೀಕ್ಷಿತ ಚಿತ್ರ ಬಿಡುಗಡೆಗೆ ಪ್ರೇಕ್ಷಕರು ತುದಿಗಾಲಲ್ಲಿ ನಿಂತಿದ್ದಾರೆ.
ಈ ಮಧ್ಯೆ  ಯಶ್ ಅವರ ಮುಂದಿನ  ಚಿತ್ರದ ಬಗ್ಗೆ ಅವರ ಅಭಿಮಾನಿಗಳಲ್ಲಿ  ಮತ್ತಷ್ಟು ಕುತೂಹಲ ಮನೆಮಾಡಿದೆ. ಹರ್ಷ ನಿರ್ದೇಶನದ ರಾಣಾ ಹಾಗೂ  ಮುಪ್ತಿ  ಖ್ಯಾತಿಯ ಅನಿಲ್ ಕುಮಾರ್  ನಿರ್ದೇಶನದ ಚಿತ್ರಕ್ಕೆ ಯಶ್ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎಂಬಂತಹ ಮಾತುಗಳು ಗಾಂಧಿನಗರದಲ್ಲಿ ಕೇಳಿಬರುತ್ತಿದೆ.
ಅನಿಲ್ ಕುಮಾರ್ ಹಲವು ವರ್ಷಗಳಿಂದ ಯಶ್  ತಂಡದಲ್ಲಿ ಸಕ್ರೀಯರಾಗಿದ್ದು, ಸಂತು ಸ್ಟ್ರೈಟ್ ಪಾರ್ವಡ್  ಚಿತ್ರದಲ್ಲೂ ಸಂಭಾಷಣೆ ಬರೆದಿದ್ದಾರೆ.  ಯಶ್ ಅವರೊಂದಿಗೆ ಚಿತ್ರ ಮಾಡಬೇಕೆಂದು ಹಲವು  ವರ್ಷಗಳಿಂದ ಯೋಜನೆ ಹಾಕಿಕೊಂಡಿದ್ದರು ಎಂಬುದು  ಯಶ್ ಆಪ್ತ ವಲಯದಿಂದ ತಿಳಿದುಬಂದಿದೆ.
ಕೆಜಿಎಫ್ ಚಿತ್ರಕ್ಕಾಗಿ ಯಶ್ ಸಾಕಷ್ಟು ಸಮಯ ನೀಡಿದ್ದರಿಂದ ಅನಿಲ್ ಕುಮಾರ್  ರ‍್ಯಾಂಬೋ-2  ನಿರ್ದೇಶನ ಮಾಡಲು ನಿರ್ಧರಿಸಿದ್ದರು. ಕಳೆದ ತಿಂಗಳು ಬಿಡುಗಡೆಯಾದ ಈ ಚಿತ್ರ  ಹಿಟ್ ಆಗಿದೆ.  ಹರ್ಷ ಪ್ರಸ್ತುತ ನಿಖಿಲ್ ಕುಮಾರ್ ಅವರ  ಸೀತಾ ರಾಮ ಕಲ್ಯಾಣ ಚಿತ್ರ ಒಪ್ಪಿಕೊಂಡಿದ್ದು, ಏಕಕಾಲದಲ್ಲಿ ರಾಣ ಕಥೆ ಸಿದ್ಧಪಡಿಸುತ್ತಿದ್ದಾರೆ.
ಅಲ್ಲದೇ ನಿರ್ದೇಶಕ ನರ್ತನ್ ಕೂಡಾ ಯಶ್ ಗಾಗಿ  ಕಥೆ ಸಿದ್ದಪಡಿಸುತ್ತಿದ್ದಾರೆ. ಕೆಜಿಎಫ್ ಚಿತ್ರದ ಶೂಟಿಂಗ್ ಮುಕ್ತಾಯಗೊಂಡಿದ್ದು, ಯಶ್ ಗೆ ಸಮಯ ಸಿಗದಂತಾಗಿದೆ. ಬ್ಯಾಕ್ ಟು ಬ್ಯಾಕ್ ಯೋಜನೆಗಳು ಯಶ್ ಗಾಗಿ ಹುಡುಕಿಕೊಂಡು  ಬರುತ್ತಿದ್ದು,  ಕಥೆ ಕೇಳುತ್ತಿದ್ದಾರೆ. ಆದರೆ. ಯಾವ ಚಿತ್ರವನ್ನು ಮೊದಲು ಯಶ್ ಆಯ್ಕೆ ಮಾಡಿಕೊಳ್ಳಲಿದ್ದಾರೆ ಎಂಬುದು ಕೆಲವೇ ದಿನಗಳಲ್ಲಿ ಗೊತ್ತಾಗಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ ಇನ್ನಿಲ್ಲ

"ಜೀವಕ್ಕೆ ಕುತ್ತು ತರುವ ಹಾದಿ": ರಷ್ಯಾ ಸೇನಾ ನೇಮಕಾತಿ ಆಮಿಷಗಳಿಗೆ ಬಲಿಯಾಗದಂತೆ ನಾಗರಿಕರಿಗೆ ಭಾರತ ಕಟ್ಟುನಿಟ್ಟಿನ ಸೂಚನೆ, 69 ಭಾರತೀಯರ ಬಿಡುಗಡೆಗೆ ಪಟ್ಟು..!

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್