'ಗುಲ್ಟು' ಬಳಿಕ ಮೂರನೇ ಚಿತ್ರಕ್ಕೆ ಸಹಿ ಮಾಡಿದ ನಟ ನವೀನ್ ಶಂಕರ್ 
ಸಿನಿಮಾ ಸುದ್ದಿ

'ಗುಲ್ಟು' ಬಳಿಕ ಮೂರನೇ ಚಿತ್ರಕ್ಕೆ ಸಹಿ ಮಾಡಿದ ನಟ ನವೀನ್ ಶಂಕರ್

ಚೊಚ್ಚಲ ಚಿತ್ರ ಗುಲ್ಡಟು ಮೂಲಕ ಭಾರೀ ಸುದ್ದಿಯಾಗಿದ್ದ ನಟ ನವೀನ್ ಶಂಕರ್ ಅವರು ಇದೀಗ ಮೂರನೇ ಚಿತ್ರಕ್ಕೆ ಸಹಿ ಹಾಕಿದ್ದಾರೆ...

ಚೊಚ್ಚಲ ಚಿತ್ರ ಗುಲ್ಡಟು ಮೂಲಕ ಭಾರೀ ಸುದ್ದಿಯಾಗಿದ್ದ ನಟ ನವೀನ್ ಶಂಕರ್ ಅವರು ಇದೀಗ ಮೂರನೇ ಚಿತ್ರಕ್ಕೆ ಸಹಿ ಹಾಕಿದ್ದಾರೆ. 
ಒಂದು ಪ್ರೀತಿಯ ಕಥೆ, ಚಿತ್ರಮಂದಿರದಲ್ಲಿ, ಸಡಗರ, ಮರಳಿ ಮನೆಗೆ ಮತ್ತು ಮಾರ್ಗರೇಟ್ ಚಿತ್ರಗಳಲ್ಲಿ ನಟಿಸಿರುವ ನಟ ಶಂಕರ್ ಬಹದ್ದೂರ್ ಅವರು ಇದೀಗ ನಿರ್ದೇಶನಕ್ಕೆ ಇಳಿದಿದ್ದು, ಚಿತ್ರದಲ್ಲಿ ನವೀನ್ ಶಂಕರ್ ಅವರು ನಟಿಸುತ್ತಿದ್ದಾರೆ. 
ಪೊಲಿಟಿಕರ್-ಕ್ರೈಮ್ ತ್ರಿಲ್ಲರ್ ಚಿತ್ರ ಇದಾಗಿದ್ದು, ಚಿತ್ರದಲ್ಲಿ ನವೀನ್ ಅವರು ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. 
ನವೀನ್ ಅವರು ಈಗಾಗಲೇ ತಮ್ಮ ಎರಡನೇ ಚಿತ್ರಕ್ಕೆ ಸಹಿ ಹಾಕಿದ್ದು, ಈ ಚಿತ್ರದ ಚಿತ್ರೀಕರಣ ಜುಲೈ ಅಂತ್ಯದಲ್ಲಿ ಆರಂಭಗೊಳ್ಳಲಿದೆ. 
ನವೀನ್ ಅವರು ನನಗೆ ಆಪ್ತ ಗೆಳೆಯರಾಗಿದ್ದಾರೆ. ರಂಗಭೂಮಿಯಲ್ಲಿ ನಟಿಸುತ್ತಿದ್ದ ಸಂದರ್ಭದಿಂದಲೂ ನಾವಿಬ್ಬರೂ ಸ್ನೇಹಿತರಾಗಿದ್ದೇವೆ. ಸಾಕಷ್ಟು ಹಿಂದೆಯೇ ಚಿತ್ರ ಕುರಿತಂತೆ ಮಾತುಕತೆ ನಡೆಸಿದ್ದೆವು. ಗುಲ್ಟೂ ಚಿತ್ರ ಬಿಡುಗಡೆಯಾಗುವುದಕ್ಕೆ ಮೂರುಗಳ ಹಿಂದೆಯೇ ನವೀನ್ ನನಗೆ ಚಿತ್ರದ ಕಥೆಯನ್ನು ಹೇಳಿದ್ದರು. ಇಬ್ಬರು ಒಂದೇ ಹಂತದಲ್ಲಿದ್ದು, ಮುಂದಕ್ಕೆ ಸಾಗುತ್ತಿದ್ದೇವೆಂದು ಶಂಕರ್ ಅವರು ಹೇಳಿದ್ದಾರೆ. 
ಲೌಡ್ ಸ್ಪೀಕರ್ ಚಿತ್ರದಲ್ಲಿ ನಟರಾಗಿ ಅಭಿನಯಿಸಿರುವ ಸುಮಂತ್ ಭಟ್ ಅವರೊಂದಿಗೆ ನವೀನ್ ಅವರು ಪರದೆ ಹಂಚಿಕೊಳ್ಳಲಿದ್ದಾರೆ. 
ರಾಜಕೀಯ ಹಿನ್ನಲೆಯುಳ್ಳು ಇಬ್ಬರು ವ್ಯಕ್ತಿಗಳು ಅಪರಾಧ ಎಸಗುತ್ತಾರೆ, ತದನಂತರ ಆಗುವ ಬೆಳವಣಿಗೆಗಳು ಚಿತ್ರದ ಕಥಾಹಂದರವಾಗಿದೆ. ಈ ಹೀಂದೆ ರಾಜಕೀಯ ನಾಯಕರುಗಳು ಒಂದು ನಿರ್ದಿಷ್ಟ ಪ್ರದೇಶಗಳಿಗಷ್ಟೇ ಸೀಮಿತವಾಗಿದ್ದವು. ಆದರೆ, ಇಂದು ಪ್ರತಿ ಬೀದಿಯಲ್ಲಿಯೂ ನಡೆಯುತ್ತದೆ. ಹೀಗಾಗಿ ಚಿತ್ರದ ಕಥೆ ಪ್ರಸ್ತುತವೆನಿಸುತ್ತದೆ ಎಂದು ಶಂಕರ್ ಅವರು ಹೇಳಿದ್ದಾರೆ.
ಚಿತ್ರಕ್ಕೆ ಗುರುಕಿರಣ್ ಅವರು ಸಂಗೀತ ನೀಡುತ್ತಿದ್ದಾರೆ. ಚಿತ್ರದಲ್ಲಿ ನವೀನ್ ಅವರು ಉತ್ತರ ಕರ್ನಾಟದ ಹಿನ್ನಲೆಯನ್ನು ಹೊಂದಿರುವ ವ್ಯಕ್ತಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಸುಮಂತ್ ಭಟ್ ಅವರು ಕರಾವಳಿಯ ವ್ಯಕ್ತಿಯಾಗಿ ಕಾಣಿಸಿಕೊಳ್ಳುತ್ತಾರೆ. ನವಾಜುದ್ದೀನ್ ಸಿದ್ಧಿಕಿಯವರು ನಟಿಸಿರುವ ಠಾಕ್ರೆ ಚಿತ್ರದಲ್ಲಿ ತಮ್ಮ ಕೈಚಳಕವನ್ನು ತೋರಿಸಿರುವ ಅಭಿಲಾಷ್ ಕಲಾತಿಯವರು ಚಿತ್ರದಲ್ಲಿ ಛಾಯಾಗ್ರಹಕರಾಗಿ ಕಾರ್ಯನಿರ್ವಹಿಸಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

SCROLL FOR NEXT