ಧ್ರುವ ಸರ್ಜಾ 
ಸಿನಿಮಾ ಸುದ್ದಿ

'ಪೊಗರು' ಚಿತ್ರ ಏಕೆ ನಿಲ್ಲುತ್ತದೆ: ಧ್ರುವ ಸರ್ಜಾ ಪ್ರಶ್ನೆ?

ನಂದ ಕಿಶೋರ್ ನಿರ್ದೇಶಿಸಿ ಧ್ರುವ ಸರ್ಜಾ ಅಭಿನಯದ ಪೊಗರು ಚಿತ್ರ ಆರಂಭದಿಂದ ಹಲವು ವಿಷಯಗಳಿಗೆ ಸುದ್ದಿ ಮಾಡುತ್ತಲೇ ಬಂದಿದೆ....

ಬೆಂಗಳೂರು: ನಂದ ಕಿಶೋರ್ ನಿರ್ದೇಶಿಸಿ ಧ್ರುವ ಸರ್ಜಾ ಅಭಿನಯದ ಪೊಗರು ಚಿತ್ರ ಆರಂಭದಿಂದ ಹಲವು ವಿಷಯಗಳಿಗೆ ಸುದ್ದಿ ಮಾಡುತ್ತಲೇ ಬಂದಿದೆ.
ಮೊದಲಿಗೆ ನಟ ಧ್ರುವ ಸರ್ಜಾ ಏಪ್ರಿಲ್ ತಿಂಗಳಲ್ಲಿ  ಸುಮಾರು 30 ಕೆಜಿ ತೂಕ ಕಳೆದುಕೊಂಡಿದ್ದಾರೆ, ಸಿನಿಮಾದಲ್ಲಿ 12 ವರ್ಷದ ಬಾಲಕನ ಪಾತ್ರಕ್ಕಾಗಿ ಧ್ರುವ ಸುಮಾರು 30 ಕೆಜಿ  ತೂಕ ಕಳೆದುಕೊಂಡಿಗದ್ದರು. ಮತ್ತೆ ಅಷ್ಟು ತೂಕ ವಾಪಸ್ ಪಡೆದುಕೊಂಡು ಸಹಜ ಸ್ಥಿತಿಗೆ ಬರಲು ಧ್ರುವ ಸರ್ಜಾ ಸ್ವಲ್ಪ ಸಮಯ ತೆಗೆದುಕೊಂಡಿದ್ದಾರೆ, 
ಹೀಗಾಗಿ ಸಿನಿಮಾ ಧೀರ್ಘ ಸಮಯ ಹಿಡಿದಿದೆ. ಈಗ ಇಷ್ಟು ಸುದೀರ್ಘ ವಿಳಂಬದ ನಂತರ ಪೊಗರು ಸಿನಿಮಾ ಚಿತ್ರೀಕರಣ ಸ್ಥಗಿತಗೊಂಡಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ,  ಇದಕ್ಕೆ ಪ್ರತಿಕ್ರಿಯಿಸಿರುವ  ಧ್ರುವ, ಪೊಗರು ಸಿನಿಮಾ ಏಕೆ ನಿಲ್ಲುತ್ತದೆ, ಪೊಗರು ಏಕೆ ಸ್ಥಗಿತಗೊಳ್ಳುತ್ತದೆ, ಏಕೆ ಇಂಥ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತೀರಾ?  ಇದರಿಂದ ಚಿತ್ರ ತಂಡ ಯಾವ ರೀತಿಯ ಪರಿಸ್ಥಿತಿಗಳನ್ನು ಎದುರಿಸಬೇಕಾಗುತ್ತದೆ ಎಂಬ ಬಗ್ಗೆ ನಿಮಗೆ ಅರಿವಿಲ್ಲವೇ? ಚಿತ್ರ ನಿಲ್ಲುತ್ತದೆ ಎಂದಾದರೇ ಏಕೆ 30 ಕೆಜಿ ನಾನು ತೂಕ ಕಳೆದುಕೊಳ್ಳಬೇಕಿತ್ತು. ನಾನು ಮೌನವಾಗಿರುವುದೇ ಈ ಎಲ್ಲಾ  ಮಾತುಗಳಿಗೆ ಕಾರಣವಾಗಿದೆ ಎಂದು ಹೇಳಿದ್ದಾರೆ.
ಸಮಯ ವಿಳಂಭವಾಗಿದ್ದರ ಅರಿವು ನಮಗೂ ಇದೆ, ಆದರೆ ಅದರ ಹಿಂದಿನ ಕಾರಣ ತಿಳಿದುಕೊಳ್ಳಬೇಕು, ಕಳೆದು ಕೊಂಡಿದ್ದ 30 ಕೆಜಿ ತೂಕವನ್ನು ವಾಪಸ್ ಪಡೆಯಲು ನಾನು ಪ್ರಯತ್ನ ನಡೆಸುತ್ತಿದ್ದೇನೆ. ಅದು ಒಂದೋ ಎರಡೋ ಕೆಜಿಯಲ್ಲ, ಬದಲಿಗೆ 30 ಕೆಜಿ, ಹೀಗಾಗಿ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ, ಈ ಸಮಯದಲ್ಲಿ ಸಿನಿಮಾ ತಂಡ ಸ್ಕ್ರಿಪ್ಟ್ ಅನ್ನು ಮತ್ತಷ್ಟು ಉತ್ತಮಗೊಳಿಸಬಹುದು. ಪ್ರತಿಯೊಬ್ಬರು ಇಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಶ್ರಮ ಹಾಕುತ್ತಿದ್ದಾರೆ, ಆದರೆ ಎಲ್ಲಾ ಮಾಹಿತಿಗಳನ್ನು ನಾವು ಮುಕ್ತವಾಗಿ ಹೊರಗೆ ಚರ್ಚಿಸುತ್ತಿಲ್ಲ, ಅದರ ಅರ್ಥ ಸಿನಿಮಾ ನಿಂತಿದೆ ಎಂದಲ್ಲ ಎಂದು ವಿವರಣೆ ನೀಡಿದ್ದಾರೆ,
ನನ್ನ ಪ್ರತಿಯೊಂದು ಸಿನಿಮಾ ಶೂಟಿಂಗ್ ವೇಳೆ ಇದೇ ರೀತಿಯ ಸುಳ್ಳು ಸುದ್ದಿಗಳು ಕೇಳಿ ಬರುತ್ತಿವೆ.ನನ್ನ ಮೊದಲ ಚಿತ್ರ ಅದ್ದೂರಿ ಶೂಟಿಂಗ್ ವೇಳೆಯೂ ಇದೇ ಮಾತು ಕೇಳಿ ಬಂದಿತ್ತು., ನಂತರ ಬಹದ್ದೂರ್,  ಇಂಥ ಸುಳ್ಳು ಸುದ್ದಿಗಳು ನನ್ನ ಪಾಲಿಗೆ ವರವಾಗುತ್ತಿರುವುದು ನನ್ನ ಅದೃಷ್ಟ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಷ್ಯಾ ಕರಾವಳಿಯಲ್ಲಿ ಡ್ರೋನ್ ದಾಳಿ: ಹೊತ್ತಿ ಉರಿದ ತೈಲ ಟ್ಯಾಂಕರ್‌, 23 ಭಾರತೀಯ ಸಿಬ್ಬಂದಿ ಪಾರು..!

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video

‘ದಯವಿಟ್ಟು ಮಲಗಬೇಡಿ, ನಮಗೆ ನೀವು ಬೇಕು’: ಸಾವಿನ ದವಡೆಯಲ್ಲಿದ್ದ ಸ್ಮಿತ್ ಮಚ್ಚರ್'ಗೆ ಧೈರ್ಯ ತುಂಬಿದ ದಂತ ವೈದ್ಯ, Flydubai ವಿಮಾನದಲ್ಲಿ ಆ 45 ನಿಮಿಷಗಳಲ್ಲಿ ನಡೆದಿದ್ದೇನು..?

‘ಮತ ಕಳ್ಳತನ’ದ ಆರೋಪದಲ್ಲಿ ಹುರುಳಿಲ್ಲ, ಸುಖಾಸುಮ್ಮನೆ ರಾಹುಲ್ ಗಾಂಧಿಯಿಂದ ಗೊಂದಲ ಸೃಷ್ಟಿ: ಹೆಚ್‌.ಡಿ. ಕುಮಾರಸ್ವಾಮಿ ಆರೋಪ

SIR ಗೊಂದಲ: ಅಕ್ರಮ ಬಯಲಾಗುವ ಭೀತಿಯಿಂದಲೇ ರಾಜಪಾಲರ ಬಳಿ ಓಡಿದ್ದಾರೆ: NDA ನಾಯಕರ ವಿರುದ್ಧ ಡಿಕೆ.ಶಿವಕುಮಾರ್ ವಾಗ್ದಾಳಿ