ಸಂಗ್ರಹ ಚಿತ್ರ 
ಸಿನಿಮಾ ಸುದ್ದಿ

ಅಪಹರಣ ಪ್ರಕರಣ: ಬಿಗ್ ಬಾಸ್ ಖ್ಯಾತಿಯ ನಟ ಸುನಾಮಿ ಕಿಟ್ಟಿ ಬಂಧನ

ಅಪಹರಣ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಬಿಗ್ ಬಾಸ್ ಖ್ಯಾತಿಯ ನಟ ಸುನಾಮಿ ಕಿಟ್ಟಿ ಸೇರಿದಂತೆ ಮೂವರನ್ನು ಶನಿವಾರ ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

ಬೆಂಗಳೂರು: ಅಪಹರಣ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಬಿಗ್ ಬಾಸ್ ಖ್ಯಾತಿಯ ನಟ ಸುನಾಮಿ ಕಿಟ್ಟಿ ಸೇರಿದಂತೆ ಮೂವರನ್ನು ಶನಿವಾರ ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
ಮಾಧ್ಯಮವೊಂದು ವರದಿ ಮಾಡಿರುವಂತೆ ರೆಸ್ಟೋರೆಂಟ್‌ವೊಂದರಲ್ಲಿ ನಟ ಕಿಟ್ಟಿ ಮತ್ತಿತರರು, ಸಪ್ಲೈಯರ್ ಗಿರೀಶ್ ಎಂಬುವವರಿಗೆ ಗನ್ ತೋರಿಸಿ, ಬೆದರಿಸಿರುವುದಾಗಿ ಪ್ರಕರಣವೊಂದು ದಾಖಲಾಗಿತ್ತು. ಇದೀಗ ಅದೇ ಗಿರೀಶ್ ಎಂಬಾತನನ್ನು ಕಿಟ್ಟಿ ಮತ್ತು ತಂಡ ಅಪಹರಣ ಮಾಡಿದ್ದಾರೆ ಎಂದು ಆರೋಪಿಸಿ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. 
ಈ ಸಂಬಂಧ ಇಂದು ಕಾರ್ಯಾಚರಣೆ ನಡೆಸಿದ ಜ್ಞಾನಭಾರತಿ ಪೊಲೀಸರು ಸುನಾಮಿ ಕಿಟ್ಟಿ. ಅರ್ಜುನ್ ಮತ್ತು ಯೋಗೇಂದ್ರ ಎಂಬುವವರನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ. ಪ್ರಕರಣದ ಮತ್ತೋರ್ವ ಪ್ರಮುಖ ಆರೋಪಿ ಗಿರೀಶ್ ನಾಪತ್ತೆಯಾಗಿದ್ದು, ಆತನ ಬಂಧನಕ್ಕಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸುತ್ತಿದ್ದಾರೆ. ಇನ್ನು ಅಪಹರಣ ಹಾಗೂ ಹಲ್ಲೆಗೊಳಗಾದ ಕುಟೀರ ಪಾರ್ಕ್​ ಲ್ಯಾಂಡ್​ ಬಾರ್​ನ ಸಪ್ಲೈಯರ್​ ಗಿರೀಶ್​, ಜ್ಞಾನಭಾರತಿ ಠಾಣೆಯಲ್ಲಿ ಸುನಾಮಿ ಕಿಟ್ಟಿ ಹಾಗೂ ತಂಡದ ವಿರುದ್ಧ ಐಪಿಸಿ ಸೆಕ್ಷನ್​ 363,307, 397 506, 149ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು.
ಏನಿದು ಪ್ರಕರಣ?
ಸುನಿಲ್ ಎಂಬುವರ ಪತ್ನಿ ತೌಸಿತ್​ ಎಂಬುವವರೊಡನೆ ಮಾಳಗಾಳದ ಕುಟೀರ್​ ಪಾರ್ಕ್​ ರೆಸ್ಟೊರೆಂಟ್​ ಗೆ ಊಟಕ್ಕೆ ಆಗಾಗ್ಗೆ ಹೋಗುತ್ತಿದ್ದರು. ಈ ಕುರಿತು ತೌಸಿತ್​ ಯಾರು ಎಂಬುದನ್ನು ತಿಳಿದುಕೊಳ್ಳಲು ಫೆಬ್ರವರಿ 28ರಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಸುನಾಮಿ ಕಿಟ್ಟಿ ಹಾಗೂ ತಂಡ ಕುಟೀರ ಪಾರ್ಕ್​ ಲ್ಯಾಂಡ್​ ಬಾರ್​ ಗೆ ತೆರಳಿ ಅಲ್ಲಿನ ಬಾರ್​ ಸಪ್ಲೈಯರ್​ ಗಿರೀಶ್​ ನನ್ನು ಅಪಹರಿಸಿ ಚಾಕುವಿನಿಂದ ಹಲ್ಲೆ ನಡೆಸಿ ತೌಸಿತ್​ ನನ್ನು ತೋರಿಸುವಂತೆ ಒತ್ತಾಯ ಮಾಡಿದ್ದಾರೆ. ತೌಸಿತ್​ ಗೆ ಕರೆ ಮಾಡಿ ಕರೆಸಿಕೊಳ್ಳುವಂತೆ ನನ್ನನ್ನು ಒತ್ತಾಯಿಸಿದರು. ತೌಸಿತ್​ ​ ಬಂದಮೇಲೆ ಇಬ್ಬರನ್ನೂ ಹೊರಮಾವು ಬಳಿಯಿರುವ ತೋಟದ ಮನೆಗೆ ಕರೆದೊಯ್ದು ಹಲ್ಲೆ ನಡೆಸಿ, ವಿಷಯವನ್ನು ಪೊಲೀಸರಿಗೆ ತಿಳಿಸದಂತೆ ಜೀವ ಬೆದರಿಕೆ ಹಾಕಿ ನನ್ನನ್ನು ಬಿಟ್ಟರು ಎಂದು ದೂರುದಾರ ಗಿರೀಶ್​ ಎಫ್​ಐಆರ್​ ಪ್ರತಿಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧ 100 ಎಫ್‌ಐಆರ್‌ ದಾಖಲಿಸಿ ಹೆದರಲ್ಲ, ಪ್ರತಿಯೊಂದೂ ನನಗೆ ಪದಕ': ರಾಹುಲ್ ಗಾಂಧಿ

CM ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್; ಈಗ ಸಚಿವರ ವಿರುದ್ಧವೂ ಅದೇ ತಂತ್ರ: ಕುಮಾರಸ್ವಾಮಿ ಗಂಭೀರ ಆರೋಪ

ಹೆನ್ರಿ ಕಗನ್, ಕೆನ್ಸೊ ಸೊವೈಗೆ 2026ರ ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿ

'ನಾನು ಕ್ಯಾಬ್‌ನಲ್ಲಿ ಓಡಾಡೋ ಹುಡುಗಿ ಕಣ್ರೋ.. ಹೋಗ್ಲಿ ಪಾಪ ಅಂತಾ ಬಸ್`ನಲ್ಲಿ ಬಂದೆ': MTC ಬಸ್‌ನಲ್ಲಿ ಕುಡಿದ ಮತ್ತಿನಲ್ಲಿ ಯುವತಿ ರಂಪಾಟ, Video ವೈರಲ್

ಅಮೆರಿಕ ಸೇನೆಯ ಮಾಜಿ ಮೇಜರ್‌ಗೆ ಶೂಟ್ ಮಾಡುವ ಮೂಲಕ ಮರಣದಂಡನೆ ಶಿಕ್ಷೆ: 65 ವರ್ಷಗಳಲ್ಲಿ ಇದೇ ಮೊದಲು!