ನಿರ್ದೇಶಕ ಜಯತೀರ್ಥ ಆ್ಯಕ್ಷನ್ ಕಟ್ ಹೇಳುತ್ತಿರುವ ಬೆಲ್ ಬಾಟಮ್ ಚಿತ್ರ 80ರ ದಶಕದ ಪತ್ತೇದಾರಿ ಕಥೆಯನ್ನಾಧರಿಸಿದ್ದು ಚಿತ್ರದ ನಾಯಕ ರಿಷಬ್ ಶೆಟ್ಟಿ ಮತ್ತು ಹರಿಪ್ರಿಯಾ ರೆಟ್ರೋ ವೇಷದಲ್ಲಿ ಮಿಂಚಿದ್ದಾರೆ.
ಚಿತ್ರದಲ್ಲಿ ಹರಿಪ್ರಿಯಾರ ಫಸ್ಟ್ ಲುಕ್ ಅನ್ನು ಈ ಹಿಂದೆ ಬಹಿರಂಗವಾಗಿತ್ತು. ಅದೇ ರೀತಿ ನಾಯಕನ ಗೆಟಪ್ ಬಗ್ಗೆಯೂ ವಿಶೇಷ ಕಾಳಜಿ ವಹಿಸಲಾಗಿದ್ದು ಈ ಕಾಲದ ಪತ್ತೇದಾರಿಯ ಪಾತ್ರದಲ್ಲಿ ರಿಷಬ್ ಕಾಣಿಸಿಕೊಳ್ಳುತ್ತಿದ್ದಾರೆ. ರಿಷಬ್ ಲುಕ್ ಹೇಗಿರಲಿದೆ ಎಂಬುದನ್ನು ತಿಳಿಸಲು ಕೆಲವು ಪೋಟೋಗಳನ್ನು ಚಿತ್ರತಂಡ ಹರಿಬಿಟ್ಟಿದೆ.
ರಿಷಭ್ 80ರ ದಶಕದ ಸಿನಿಮಾ ನಾಯಕರಂತೆಯೇ ಕೇಶವಿನ್ಯಾಸ ಮಾಡಿಸಿಕೊಂಡು ಚಿತ್ರೀಕರಣದಲ್ಲಿ ಬಿಜಿಯಾಗಿದ್ದಾರೆ. ಇನ್ನು ಅಣ್ಣಾವ್ರು ಮಾಡಿದ ಪತ್ತೇದಾರಿ ಸಿನಿಮಾಗಳ ಪ್ರಭಾವ ನನ್ನ ಮೇಲೆ ಸಾಕಷ್ಟಿದೆ. ನಾನು ರಾಜ್ ಕುಮಾರ್, ಅನಂತ್ ನಾಗ್, ಶಂಕರ್ ನಾಗ್ ಮುಂತಾದವರ ಚಿತ್ರಗಳಿಂದ ಪ್ರಭಾವಿತನಾಗಿ ಕಾಲೇಜು ದಿನಗಳಲ್ಲೇ ನಾನು ಇಂಥ ಕಾಸ್ಟ್ಯೂಮ್ ಗಳನ್ನು ಧರಿಸುತ್ತಿದ್ದೆ ಎಂದು ಹೇಳಿದ್ದಾರೆ.
ಮೊದಲ ಹಂತವಾಗಿ ಜೋಗದಲ್ಲಿ 20 ದಿನಗಳ ಶೂಟಿಂಗ್ ಮಾಡಲಾಗಿದೆ. ಚಿಕ್ಕ ಪಾತ್ರಗಳಿಗಾಗಿ ಆಡಿಷನ್ ನಡೆಸಿ ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ನೀಡಿದ್ದಾರೆ ನಿರ್ದೇಶಕರು. ಇನ್ನು ಅರವಿಂದ್ ಕಶ್ಯಪ್ ಛಾಯಾಗ್ರಹಣ ಚಿತ್ರಕ್ಕಿದೆ. ಸಂತೋಷ್ ಕುಮಾರ್ ಎಂಬುವರು ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.