ಧ್ರುವ ಸರ್ಜಾ 
ಸಿನಿಮಾ ಸುದ್ದಿ

ಪೊಗರು ಚಿತ್ರಕ್ಕಾಗಿ ಮಲ್ಲಕಂಬ ತರಬೇತಿಗೆ ಧ್ರುವ ಸರ್ಜಾ ಸಜ್ಜು

ಧ್ರುವ ಸರ್ಜಾ ನಟನೆಯ ಪೊಗರು ಚಿತ್ರ ಬಿಡುಗಡೆಯಾಗಲು ವಿಳಂಬವಾಗುತ್ತಿದೆ. ಆದರೆ ಈ ಬಗ್ಗೆ ನಟ ಧ್ರುವ...

ಧ್ರುವ ಸರ್ಜಾ ನಟನೆಯ ಪೊಗರು ಚಿತ್ರ ಬಿಡುಗಡೆಯಾಗಲು ವಿಳಂಬವಾಗುತ್ತಿದೆ. ಆದರೆ ಈ ಬಗ್ಗೆ ನಟ ಧ್ರುವ ಸರ್ಜಾ ತಲೆಕೆಡಿಸಿಕೊಂಡಿಲ್ಲ. ಚಿತ್ರ ಕರಾರುವಕ್ಕಾಗಿ, ಸರಿಯಾಗಿ ಮೂಡಿಬರಲು ಅವರು ತಮ್ಮ ಪಾತ್ರಕ್ಕೆ ಸಿದ್ಧವಾಗಲು ತಯಾರಿ ನಡೆಸುತ್ತಿದ್ದಾರೆ.

ಚಿತ್ರ ಸರಿಯಾಗಿ ತೆರೆ ಮೇಲೆ ತರುವ ಉದ್ದೇಶದಿಂದ ನಿರ್ದೇಶಕ ನಂದಕಿಶೋರ್ ಮತ್ತು ನಿರ್ಮಾಪಕ ಗಂಗಾಧರ್ ಕೂಡ ತರಾತುರಿ ಮಾಡುವುದಿಲ್ಲವಂತೆ.

ಪೊಗರಿನಲ್ಲಿ ಶಾಲಾ ಬಾಲಕನ ಪಾತ್ರದಲ್ಲಿ ಕಾಣಿಸಿಕೊಳ್ಳುವುದಕ್ಕೆ ಧ್ರುವ ಸರ್ಜಾ ತಮ್ಮ ದೇಹದಲ್ಲಿ ರೂಪಾಂತರ ಮಾಡಿಸಿಕೊಳ್ಳಲು ತಯಾರಾಗಿದ್ದಾರೆ. ಅದಕ್ಕಾಗಿ ತಮ್ಮ ದೇಹವನ್ನು ಹುರಿಗೊಳಿಸುತ್ತಿದ್ದಾರೆ ಮತ್ತು ಡಯಟ್ ನಲ್ಲಿ ಕೂಡ ತೊಡಗಿದ್ದಾರೆ. ಇದೇ 7ರಿಂದ ಶೂಟಿಂಗ್ ಆರಂಭವಾಗಲಿದ್ದು ಅದಕ್ಕೂ ಮುನ್ನ ಧ್ರುವ ಸರ್ಜಾ ನೋಟವನ್ನು ಚಿತ್ರಕ್ಕೆ ಬೇಕಾದಂತೆ ತಯಾರಿಗೊಳಿಸಲಿದ್ದಾರೆ.

ಆರಂಭದಲ್ಲಿ ಹೈದರಾಬಾದ್ ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಇಂದಿನಿಂದ ಶೂಟಿಂಗ್ ನಡೆಸಲು ಯೋಜಿಸಲಾಗಿತ್ತು. ಅದನ್ನೀಗ ಎರಡು ದಿನಗಳ ಕಾಲ ಮುಂದೂಡಲಾಗಿದೆ. ಏಕೆಂದರೆ ಧ್ರುವ ಸರ್ಜಾ ಮಲ್ಲಕಂಬದ ತರಬೇತಿಯಲ್ಲಿ ತೊಡಗಿದ್ದಾರೆ. ಈ ಕ್ರೀಡೆಯಲ್ಲಿ ಪರಿಣತಿ ಹೊಂದಿರುವ ಮಹಾರಾಷ್ಟ್ರದ ತಜ್ಞರು ಇಂದು ಬೆಂಗಳೂರಿನಲ್ಲಿ ಧ್ರುವ ಸರ್ಜಾಗೆ ತರಬೇತಿ ನೀಡಲಿದ್ದಾರೆ.

ಈ ಮಧ್ಯೆ, ಚಿತ್ರದಲ್ಲಿ ಧ್ರುವ ಸರ್ಜಾರ ಶಾಲಾ ಬಾಲಕನ ಪಾತ್ರ ತೆರೆಯ ಮೇಲೆ 15ರಿಂದ 20 ನಿಮಿಷಗಳ ಕಾಲ ಬರಲಿದೆ. ಇದರ ಶೂಟಿಂಗ್ ಇದೇ ಬುಧವಾರದಿಂದ ಆರಂಭವಾಗಲಿದೆ. ಇದರಲ್ಲಿ ಧ್ರುವ ಮತ್ತು ನಟ ರವಿಶಂಕರ್ ಅವರ ಪಾತ್ರವಿರುತ್ತದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನಾವು ಏಕೆ ತಡೆಯಲಿ... ತಾಂತ್ರಿಕ ಸಮಸ್ಯೆ ಹೊರತು ಉದ್ದೇಶಪೂರ್ವಕವಲ್ಲ: ಮಹಿಳಾ ಪತ್ರಕರ್ತರನ್ನು ದೂರವಿಟ್ಟ ಬಗ್ಗೆ ಮುತ್ತಕಿ ಸ್ಪಷ್ಟನೆ

ಪಾಕಿಸ್ತಾನ-ಅಫ್ಘಾನಿಸ್ತಾನ ಯುದ್ಧ: 58 ಪಾಕ್ ಸೈನಿಕರು ಹತ, ತಾಲಿಬಾನ್ ಸರ್ಕಾರದ 'ದೊಡ್ಡ' ಹೇಳಿಕೆ

ಭಾರತ- ಬಾಂಗ್ಲಾದೇಶ ಗಡಿ: ರೂ. 2.82 ಕೋಟಿ ಮೌಲ್ಯದ 'ಚಿನ್ನದ ಬಿಸ್ಕತ್ತು' ಜೊತೆಗೆ ಕಳ್ಳಸಾಗಣೆದಾರನನ್ನು ಬಂಧಿಸಿದ BSF!

ದೇಶದ ಮುಸ್ಲಿಂರನ್ನು ಗುರಿಯಾಗಿಸಿಕೊಳ್ಳುವ ಬಿಜೆಪಿ ಅಫ್ಘಾನಿಸ್ತಾನದ ಜೊತೆ ಸಂಬಂಧ ಬೆಳೆಸುವುದು 'ಬೂಟಾಟಿಕೆ': ಮೆಹಬೂಬಾ ಮುಫ್ತಿ

'ಬ್ಲೂ ಸ್ಟಾರ್ ಆಪರೇಷನ್' ಕಾರ್ಯಾಚರಣೆ ತಪ್ಪಿಗೆ ಇಂದಿರಾ ಗಾಂಧಿ ಪ್ರಾಣ ತೆತ್ತರು: ಪಿ ಚಿದಂಬರಂ

SCROLL FOR NEXT