ಲಾಸ್ ಏಂಜಲೀಸ್: 2018ನೇ ಸಾಲಿನ ಆಸ್ಕರ್ ಪ್ರಶಸ್ತಿ ಪ್ರಕಟವಾಗುತ್ತಿದ್ದು, ತ್ರಿ ಬಿಲ್ ಬೋರ್ಡ್ ಸಿನಿಮಾದ ನಟನೆಗೆ ಸ್ಯಾಮ್ ರಾಕ್ವೆಲ್ ಅವರಿಗೆ ಅತ್ಯುತ್ತಮ ಪೋಷಕ ನಟ ಹಾಗೂ ಐ ಟೊನ್ಯಾ ಚಿತ್ರದ ನಟನೆಗೆ ಆಲಿಸನ್ ಜನ್ನಿ ಅವರಿಗೆ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಲಭಿಸಿದೆ.
ಈ ವರ್ಷ ಆಸ್ಕರ್ ಪ್ರಶಸ್ತಿಗೆ 13 ಸಿನಿಮಾಗಳು ನಾಮಾಂಕಿತಗೊಂಡಿವೆ. ಡಾರ್ಕ್ ಕಾಮಿಡಿ ಚಿತ್ರವಾಗಿರುವ ತ್ರಿ ಬಿಲ್ ಬೋರ್ಡ್ 2018ನೇ ಸಾಲಿನ ಅತ್ಯುತ್ತಮ ಚಿತ್ರಗಳ ಸ್ಪರ್ಧೆಯಲ್ಲಿದೆ.
ಹಾಸ್ಯನಟ ಜಿಮ್ಮಿ ಕಿಮ್ಮೆಲ್ ಕಾರ್ಯಕ್ರಮದ ನಿರೂಪಣೆ ಮಾಡುತ್ತಿದ್ದು. ಹಿರಿಯ ನಟಿ ಮೆರಿಲ್ ಸ್ಟ್ರೀ ಪ್ ಕೂಡ ಆಸ್ಕರ್ ನ ರೆಡ್ ಕಾರ್ಪೆಟ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಈ ವರ್ಷದ ಆಸ್ಕರ್ ಗೆಲ್ಲುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ನಿರ್ದೇಶಕ ಸ್ಟಿವನ್ ಸ್ಪಿಲ್ ಬರ್ಗ್ ನಿರ್ದೇಶನದ ದ ಪೋಸ್ಟ್ ಚಿತ್ರದಲ್ಲಿ ಅವರು ನಟಿಸಿದ್ದಾರೆ. ಇವರು ಆಸ್ಕರ್ ಗೆದ್ದರೆ ಆಡ್ರೆ ಹೆಪ್ಬರ್ನ್ಸ್ ಅವರು ಗೆದ್ದಿರುವ ನಾಲ್ಕು ಅಕಾಡೆಮಿ ಪ್ರಶಸ್ತಿಗಳಿಗೆ ಸಮಾನವಾಗಲಿದೆ.
ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದ ಲಾಸ್ ಏಂಜಲೀಸ್ ನ ಡೊಲ್ಬಿ ಥಿಯೇಟರ್ ನಲ್ಲಿ 90ನೇ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯುತ್ತಿದೆ. ವಿಶ್ವದ ಹಲವು ಸೆಲೆಬ್ರಿಟಿಗಳು ಭಾಗಿಯಾಗಿದ್ದಾರೆ.
ಆಸ್ಕರ್ ಪ್ರಶಸ್ತಿಯಲ್ಲಿ ಹಾಲಿವುಡ್ ಚಿತ್ರಗಳಾದ ಶೇಪ್ ಆಫ್ ವಾಟರ್, ಡಂಕಿರ್ಕ್ ಚಿತ್ರಗಳು ಮುಂಚೂಣಿಯಲ್ಲಿವೆ.