ದ ಶೇಪ್ ಆಫ್ ವಾಟರ್ ನಿರ್ದೇಶಕ ಗಿಲ್ಲೆರ್ಮೊ ಡೆಲ್ ಟೊರೊ ಪ್ರಶಸ್ತಿ ಸ್ವೀಕರಿಸಿ ಸಂಭ್ರಮಿಸುತ್ತಿರುವುದು 
ಸಿನಿಮಾ ಸುದ್ದಿ

ಆಸ್ಕರ್ 2018: 'ದ ಶೇಪ್ ಆಫ್ ವಾಟರ್' ಅತ್ಯುತ್ತಮ ಚಿತ್ರ

2018ನೇ ಸಾಲಿನ 90ನೇ ಆಸ್ಕರ್‌ ಪ್ರಶಸ್ತಿ ಪ್ರಕಟಗೊಂಡಿದ್ದು, ದ ಶೇಪ್ ಆಫ್ ವಾಟರ್ ಅತ್ಯುತ್ತಮ ಚಿತ್ರವಾಗಿ ಹೊರಹೊಮ್ಮಿದೆ. ಇದರ ನಿರ್ದೇಶಕರು ಗಿಲ್ಲೆರ್ಮೊ ...

ಲಾಸ್‌ ಏಂಜಲಿಸ್‌ : 2018ನೇ ಸಾಲಿನ 90ನೇ ಆಸ್ಕರ್‌ ಪ್ರಶಸ್ತಿ ಪ್ರಕಟಗೊಂಡಿದ್ದು, ದ ಶೇಪ್ ಆಫ್ ವಾಟರ್ ಅತ್ಯುತ್ತಮ ಚಿತ್ರವಾಗಿ ಹೊರಹೊಮ್ಮಿದೆ. ಇದರ ನಿರ್ದೇಶಕರು ಗಿಲ್ಲೆರ್ಮೊ ಡೆಲ್ ಟೊರೊ ಈ ಸಾಲಿನ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಗಳಿಸಿದ್ದಾರೆ. ಈ ಚಿತ್ರದ ನಿರ್ಮಾಪಕರು ಜೆ. ಮಿಲ್ಸ್ ಡೇಲ್ ಆಗಿದ್ದಾರೆ. ಅತ್ಯುತ್ತಮ ಚಿತ್ರ ಸೇರಿದಂತೆ ನಾಲ್ಕು ವಿಭಾಗಗಳಲ್ಲಿ ಶೇಪ್ ಆಫ್ ವಾಟರ್ ಪ್ರಶಸ್ತಿ ಗಳಿಸಿಕೊಂಡಿದೆ. ಅತ್ಯುತ್ತಮ ನಿರ್ಮಾಣ, ವಿನ್ಯಾಸ, ಉತ್ತಮ ಸ್ಕೋರ್ ಮತ್ತು ಉತ್ತಮ ನಿರ್ದೇಶನ ಪ್ರಶಸ್ತಿ ಶೇಪ್ ಆಫ್ ವಾಟರ್ ಗೆ ದಕ್ಕಿದೆ.

ಶೀತಲ ಯುದ್ಧದ ಫ್ಯಾಂಟಸಿ ಚಿತ್ರವಾಗಿರುವ ದ ಶೇಪ್ ಆಫ್ ವಾಟರ್ ನಲ್ಲಿ ಸ್ಯಾಲ್ಲಿ ಹಾಕಿನ್ಸ್ ಮೂಕ ದ್ವಾರಪಾಲಕಳಾಗಿ ನಟಿಸಿದ್ದು ಈಕೆ ಸರ್ಕಾರಿ ಪ್ರಯೋಗಾಲಯದಿಂದ ವಶಪಡಿಸಿಕೊಂಡ ಜನಚರ ಪ್ರಾಣಿ ಜೊತೆ ಪ್ರೀತಿಯಲ್ಲಿ ಬೀಳುತ್ತಾಳೆ

ತ್ರಿ ಬಿಲ್ ಬೋರ್ಡ್ಸ್ ಔಟ್ ಸೈಡ್ ಎಬ್ಬಿಂಗ್, ಮಿಸ್ಸೌರಿ ಸಿನಿಮಾದ ನಾಯಕಿ ಫ್ರಾನ್ಸೆಸ್ ಮೆಕ್ಡೋರ್ಮಂಡ್ ಈ ವರ್ಷದ ಅತ್ಯುತ್ತಮ ನಟಿಯಾಗಿ ಮತ್ತು ಡಾರ್ಕೆಸ್ಟ್ ಅವರ್ ಚಿತ್ರದ ನಟನೆಗೆ ಗ್ಯಾರಿ ಓಲ್ಡ್ಮನ್ ಅತ್ಯುತ್ತಮ ನಟನಾಗಿ ಹೊರಹೊಮ್ಮಿದ್ದಾರೆ.

ಅತ್ಯುತ್ತಮ ಒರಿಜಿನಲ್ ಸ್ಕೋರ್ ಕೂಡ ಶೇಪ್ ಆಫ್ ವಾಟರ್ ಗೆ ಹೋಗಿದ್ದು ಬ್ಲೇಡ್ ರನ್ನರ್ 2049 ಚಿತ್ರದ ಛಾಯಾಗ್ರಹಣಕ್ಕೆ ರೋಜರ್ ಡೀಕಿನ್ಸ್ ಅವರಿಗೆ ಅತ್ಯುತ್ತಮ ಛಾಯಾಗ್ರಹಕ ಪ್ರಶಸ್ತಿ ಲಭಿಸಿದೆ.

ಜೋರ್ದನ್ ಪೀಲ್ಸ್ ಅವರ ಗೆಟ್ ಔಟ್ ಅತ್ಯುತ್ತಮ ಚಿತ್ರಕಥೆ, ಜೇಮ್ಸ್ ಐವರಿಯವರ ಕಾಲ್ ಮಿ ಬೈ ಯುವರ್ ನೇಮ್ ಚಿತ್ರ ಅತ್ಯುತ್ತಮ ಅಳವಡಿಸಿದ ಚಿತ್ರಕಥೆ ಪ್ರಶಸ್ತಿ ಗಳಿಸಿಕೊಂಡಿದೆ.
ಅತ್ಯುತ್ತಮ ವಿಷುವಲ್ ಎಫೆಕ್ಟ್ ಚಿತ್ರ ಬ್ಲೇಡ್ ರನ್ನರ್ 2049, ಅತ್ಯುತ್ತಮ ಸಿನಿಮಾ ಸಂಕಲನ ಡಂಕಿರ್ಕ್, ಅತ್ಯುತ್ತಮ ಆನಿಮೇಷನ್ ಚಿತ್ರ ಡಿಯರ್ ಬಾಸ್ಕೆಟ್ ಬಾಲ್, ಅತ್ಯುತ್ತಮ ಆನಿಮೇಷನ್ ಫ್ಯೂಚರ್ ಚಿತ್ರ ಡಿಸ್ನಿ-ಪಿಕ್ಸರ್ ಅವರ ಕೊಕೊ ಚಿತ್ರಕ್ಕೆ ಲಭಿಸಿದೆ.

ಅತ್ಯುತ್ತಮ ವಿದೇಶಿ ಚಿತ್ರ ಪ್ರಶಸ್ತಿ ಎ ಫೆಂಟಾಸ್ಟಿಕ್ ವುಮನ್ ಗೆ ಲಭಿಸಿದೆ. ಚಿಲಿ ದೇಶದ ಚಿತ್ರವು ಮಂಗಳಮುಖಿ ಗಾಯಕನ ಹೋರಾಟದ ಬಗ್ಗೆ ಕೇಂದ್ರೀಕರಿಸುತ್ತದೆ. ಅತ್ಯುತ್ತಮ ಧ್ವನಿ ಮಿಶ್ರಣ ಮತ್ತು ಅತ್ಯುತ್ತಮ ಸಂಕಲನ ಡಂಕಿರ್ಕ್ ಚಿತ್ರಕ್ಕೆ ಸಂದಿದೆ.

ಪ್ರಶಸ್ತಿ ಪ್ರದಾನ ಸಮಾರಂಭ ಕಳೆದ ರಾತ್ರಿ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದ ಲಾಸ್ ಏಂಜಲೀಸ್ ನ ಡೊಲ್ಬಿ ಥಿಯೇಟರ್ ನಲ್ಲಿ ನಡೆಯಿತು.



ದ ಶೇಪ್ ಆಫ್ ವಾಟರ್ ಚಿತ್ರದ ದೃಶ್ಯ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನೀವು ಇಲ್ಲಿ ಹುಟ್ಟೋದು ಬೇಡ ನಿಮ್ಮ ಕ್ಷೇತ್ರದ ಶೇ. 75 ರಷ್ಟಾದರೂ ಇಲ್ಲಿ ಅಭಿವೃದ್ಧಿ ಮಾಡಿ: ಡಿಕೆಶಿಗೆ ಖರ್ಗೆ ಟಾಂಗ್

ಲೂಟಿಕೋರನ ಭಯವೇ? ಖರ್ಗೆಯವರೇ, ಭಿಕ್ಷೆ ಬೇಡುವ 'ದಯನೀಯ ಸ್ಥಿತಿ' ಬರಬಾರದಿತ್ತು! ಜೆಡಿಎಸ್ ಟಾಂಗ್

ಕುರ್ಚಿ ಕದನ: ಡಿಕೆಶಿ ಸಿಎಂ ಆಗುವುದು ಯಾವಾಗ?; ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ

Vijay Hazare Trophy: ಸೆಮಿಫೈನಲ್‌ಗೆ ಲಗ್ಗೆ ಇಟ್ಟ ಕರ್ನಾಟಕ

AI- ಚಾಲಿತ ಡಿಜಿಟಲೀಕರಣ, SIR ಕುರಿತು CECಗೆ ಐದನೇ ಪತ್ರ ಬರೆದ ಮಮತಾ ಬ್ಯಾನರ್ಜಿ

SCROLL FOR NEXT