ದರ್ಶನ್-ಸೂರಜ್ ಕುಮಾರ್ 
ಸಿನಿಮಾ ಸುದ್ದಿ

ಮನರಂಜನೆ ನೀಡಲು ಸಜ್ಜಾಗಿರುವ ದರ್ಶನ್ ಶಿಷ್ಯ ಸೂರಜ್ ಕುಮಾರ್

ಸ್ಯಾಂಡಲ್ ವುಡ್ ನಲ್ಲಿ ಇತ್ತೀಚೆಗೆ ಹೊಸ ನಟ, ನಟಿಯರ ಪ್ರವೇಶವಾಗುತ್ತಿದೆ. ಅನೇಕ ಹೊಸಬರು ನಿರ್ದೇಶಕ..

ಸ್ಯಾಂಡಲ್ ವುಡ್ ನಲ್ಲಿ ಇತ್ತೀಚೆಗೆ ಹೊಸ ನಟ, ನಟಿಯರ ಪ್ರವೇಶವಾಗುತ್ತಿದೆ. ಅನೇಕ ಹೊಸಬರು ನಿರ್ದೇಶಕ ಮತ್ತು ನಟರಾಗಿ ಎಂಟ್ರಿ ಕೊಡುತ್ತಿದ್ದಾರೆ. ಹಲವರು ಸಿನಿಮಾ ಹಿನ್ನೆಲೆಯುಳ್ಳವರಾಗಿದ್ದಾರೆ. ಶ್ರೇಯಸ್ ಮಂಜು, ಅಭಿಷೇಕ್ ಗೌಡ, ಧೀರೇನ್ ಕುಮಾರ್ ಇತ್ಯಾದಿ ನಾಯಕರು ಸ್ಯಾಂಡಲ್ ವುಡ್ ಪ್ರವೇಶಿಸುತ್ತಿದ್ದರೆ ಅವರ ಜೊತೆ ಮತ್ತೊಬ್ಬ ನಾಯಕನ ಪ್ರವೇಶವಾಗುತ್ತಿದೆ. ಅದು ನಿರ್ಮಾಪಕ ಎಸ್.ಎ.ಶ್ರೀನಿವಾಸ್ ಅವರ ಮಗ ಸೂರಜ್ ಕುಮಾರ್.

ರಾಜಕುಮಾರ್, ಅಂಬರೀಷ್, ಜಗ್ಗೇಶ್ ಮೊದಲಾದವರ ಚಿತ್ರಗಳನ್ನು ನಿರ್ಮಿಸಿದ್ದ ಶ್ರೀನಿವಾಸ್ ರಾಜ್ ಕುಮಾರ್ ಕುಟುಂಬಕ್ಕೆ ಸಂಬಂಧಿಕರು. ಇವರು ಪಾರ್ವತಮ್ಮ ರಾಜ್ ಕುಮಾರ್ ಅವರ ಸೋದರ. ಇವರ ಮಗನೇ ಸೂರಜ್.

ನಟನೆ ನನ್ನ ರಕ್ತದಲ್ಲಿ ಇದೆ ಎಂದು ಹೇಳಿದರೂ ಕೂಡ ನನಗೆ ಮಾತ್ರ ಪ್ರತಿಭೆ ಮತ್ತು ಕಠಿಣ ಶ್ರಮದಲ್ಲಿ ಮಾತ್ರ ನಂಬಿಕೆಯಿದೆಯಷ್ಟೆ. ನಾನು ಯಾವಾಗಲೂ ನಟನಾಗಬೇಕೆಂದು ಹಂಬಲವಿಟ್ಟುಕೊಂಡವನು. ಚಿಕ್ಕವನಿಂದಲೇ ಆ ಆಸೆ ಇದ್ದಿತು, ಅದೀಗ ಹೆಚ್ಚಾಗಿದೆ. ನಟನೆಯ ಆಸಕ್ತಿಯಿಂದ ಶಾಲಾ ದಿನಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದೆ. ಆದರೆ ಈ ಉದ್ಯಮಕ್ಕೆ ಬರುವ ಮೊದಲು ಇಲ್ಲಿನ ಆಳ-ಅಗಲಗಳನ್ನು ಅರ್ಥ ಮಾಡಿಕೊಳ್ಳಬೇಕು ಎನ್ನುತ್ತಾರೆ ಸೂರಜ್.

ನಟನಾಗಬೇಕೆಂದು ಕುಟುಂಬದವರಲ್ಲಿ ಹೇಳಿದಾಗ ಮೊದಲು ತಯಾರಿ ನಡೆಸು ಎಂದು ಹೇಳಿದರಂತೆ. ಅದಕ್ಕಾಗಿ ಚೆನ್ನೈ ಮತ್ತು ಬೆಂಗಳೂರಿನಲ್ಲಿ ರಂಗ ತರಬೇತಿ ಪಡೆದಿದ್ದಾರೆ. ಆದರೆ ಎರಡು ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ ಮೇಲೆ ಸಿನಿಮಾದ ಪ್ರಾಯೋಗಿಕ ಅನುಭವವಾಯಿತಂತೆ.

ಗಾಂಧಿನಗರ ಪ್ರವೇಶಿಸಿರುವ ಸೂರಜ್ ಗೆ ಒಬ್ಬ ಸ್ಟಾರ್ ನಟ ಗುರುಗಳಾಗಿ ಸಿಕ್ಕಿದ್ದಾರಂತೆ. ಅದು ದರ್ಶನ್. ದರ್ಶನ್ ಅವರನ್ನು ಬಾಲ್ಯದಿಂದಲೂ ಬಲ್ಲೆ. ನಾನು ಮತ್ತು ದರ್ಶನ್ ಅವರು ಮೈಸೂರಿನವರು. ಅವರು ನಮ್ಮ ಕುಟುಂಬ ಸದಸ್ಯರಂತೆ ನನಗೆ ಹಿರಿಯಣ್ಣನಂತೆ. ಸಿನಿಮಾದಲ್ಲಿ ನಟಿಸಬೇಕೆಂದು ಅವರಲ್ಲಿ ಆಸೆ ವ್ಯಕ್ತಪಡಿಸಿದಾಗ ನೀನಾಸಂನಲ್ಲಿ ತರಬೇತಿ ಪಡೆಯುವಂತೆ ಸೂಚಿಸಿದರು. ಅವರ ತಾರಕ್ ಮತ್ತು ಐರಾವತ ಚಿತ್ರಗಳಲ್ಲಿ ಸಹ ನಿರ್ದೇಶಕನಾಗಿ ಕೆಲಸ ಮಾಡಿದ್ದೇನೆ. ದರ್ಶನ್ ಅವರ ಸಲಹೆಗಳನ್ನು ಪ್ರತಿ ಹಂತದಲ್ಲಿ ಪಡೆಯಲು ಬಯಸುತ್ತೇನೆ ಎನ್ನುತ್ತಾರೆ ಸೂರಜ್.


ಮಾಸ್ ಅಥವಾ ಕ್ಲಾಸ್ ಹೀರೋ ಎಂದು ಕರೆಸಿಕೊಳ್ಳುವ ಬದಲು ಉತ್ತಮ ಮನರಂಜನೆ ನೀಡುವ ಕಲಾವಿದನಾಗಬೇಕೆಂಬುದು ಸೂರಜ್ ಆಸೆ. ಸದ್ಯ 5-6 ಕಥೆಗಳನ್ನು ಕೇಳಿರುವ ಸೂರಜ್ ತಾವು ನಟಿಸಲಿರುವ ಚಿತ್ರವನ್ನು ಸದ್ಯದಲ್ಲಿಯೇ ಘೋಷಿಸಲಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT