ವಿನಯ್ ರಾಜಕುಮಾರ್ 
ಸಿನಿಮಾ ಸುದ್ದಿ

ಕೋರ್ಟ್ ಕಟಕಟೆಯಲ್ಲಿ ಅನಂತು ವರ್ಸಸ್ ನುಸ್ರತ್

ವಿನಯ್ ರಾಜಕುಮಾರ್ ಮತ್ತು ಲತಾ ಹೆಗ್ಡೆ ಅಭಿನಯದ ಅನಂತು ವರ್ಸಸ್ ನುಸ್ರತ್ ಚಿತ್ರದ ಚಿತ್ರೀಕರಣ ಕೋರ್ಟ್ ಕಟಕಟೆಯಲ್ಲಿ ಭರದಿಂದ ಸಾಗಿದೆ...

ವಿನಯ್ ರಾಜಕುಮಾರ್ ಮತ್ತು ಲತಾ ಹೆಗ್ಡೆ ಅಭಿನಯದ ಅನಂತು ವರ್ಸಸ್ ನುಸ್ರತ್ ಚಿತ್ರದ ಚಿತ್ರೀಕರಣ ಕೋರ್ಟ್ ಕಟಕಟೆಯಲ್ಲಿ ಭರದಿಂದ ಸಾಗಿದೆ. 
ನಗರದ ಕಂಠೀರವ ಸ್ಟುಡಿಯೋದಲ್ಲಿ ಹಾಕಲಾಗಿರುವ ಸೆಟ್ ನಲ್ಲಿ ಕೆಲ ದಿನಗಳಿಂದ ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ಇನ್ನು ಚಿತ್ರದ ಕುರಿತಂತೆ ಸಿಟಿ ಎಕ್ಸ್ ಪ್ರೆಸ್ ಜತೆ ಮಾತನಾಡಿದ ನಿರ್ದೇಶಕ ಸುಧೀರ್ ಶಾನಭಾಗ್ ಅವರು ಬಹುತೇಕ ಚಲನಚಿತ್ರಗಳಲ್ಲಿ ಹಾಕಿರುವಂತೆ ನಿಯಮಿತವಾದ ನ್ಯಾಯಾಲಯದ ವಿನ್ಯಾಸದ ಸೆಟ್ ಅನ್ನು ಹಾಕಲಾಗಿದೆ. ಇನ್ನು ಕಣ್ಣು ಮುಚ್ಚಿದ ಲೇಡಿ ಜಸ್ಟೀಸ್, ರೌಡ್ ಟೇಬಲ್ ಮತ್ತು ಅದರ ಬದಿಯಲ್ಲಿ ಪೊಲೀಸರು ನಿಂತಿರುತ್ತಾರೆ ಎಂದರು. 
ಗೊಂದಲ ಸೃಷ್ಟಿಸುವಂತಾ ಕೋರ್ಟ್ ಹಾಲ್ ನನಗೆ ಬೇಕಿತ್ತು. ಸಾಮಾನ್ಯವಾಗಿ ಕೋರ್ಟ್ ನ ಟೇಬಲ್ ಮೇಲೆ ಸಾಕಷ್ಟು ಫೈಲ್ ಗಳು ಮತ್ತು ಪೇಪರ್ಸ್ ಗಳು ತುಂಬಿರುತ್ತದೆ. ಆದರೆ ಇದನ್ನು ಬದಲಿಸುಬೇಕು ಮತ್ತು ವಾಸ್ತವಿಕ ಚಿತ್ರಣ ನೀಡಬೇಕು ಎಂದು ಅಂದುಕೊಂಡಿದ್ದೆ ಅದೇ ರೀತಿ ಸೆಟ್ ನಿರ್ಮಾಣ ಮಾಡಲಾಗಿದೆ ಎಂದರು. 
ಏಪ್ರಿಲ್ 5ರೊಳಗೆ ಮಾತುಕತೆ ಭಾಗದ ಚಿತ್ರೀಕರಣ ಮುಗಸಬೇಕು ಎಂದು ನಿರ್ಮಾಪಕರು ನಿರ್ಧರಿಸಿದ್ದು ನಂತರ ಹಾಡುಗಳ ಚಿತ್ರೀಕರಣ ಮಾಡುವ ಯೋಜನೆಯನ್ನು ಹಾಕಿಕೊಳ್ಳಲಾಗಿದೆ. ಚಿತ್ರದಲ್ಲಿ ವಿಜಯ್ ರಾಜಕುಮಾರ್ ವಕೀಲನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರಕ್ಕೆ ಸುನಧ್ ಗೌತಮ್ ಸಂಗೀತ ಸಂಯೋಜಿಸುತ್ತಿದ್ದು ಅಭಿಶೇಖ್ ಕಾಸರಗೋಡ್ ಛಾಯಾಗ್ರಹಣವಿದೆ.  

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜನಪ್ರಿಯ ಪ್ಯಾಲೆಸ್ತೀನ್ ನಾಯಕ ಮರ್ವಾನ್ ಬರ್ಘೌಟಿ ಬಿಡುಗಡೆಗೆ ಇಸ್ರೇಲ್ ನಕಾರ: 250 ಕೈದಿಗಳ ಪಟ್ಟಿ ಸಿದ್ಧ

'ನಮ್ಮ ಪಾತ್ರವಿಲ್ಲ': ಆಫ್ಘನ್ ಸಚಿವರ ಸುದ್ದಿಗೋಷ್ಠಿ ವೇಳೆ ಮಹಿಳಾ ಪತ್ರಕರ್ತೆಯರಿಗೆ ನಿರ್ಬಂಧ ಕುರಿತು 'ಕೇಂದ್ರ' ಸ್ಪಷ್ಟನೆ

ಬೆಂಗಳೂರು: ರಾತ್ರಿಯಿಡೀ ಸುರಿದ ಮಳೆಯಿಂದ ಹಲವೆಡೆ ಜಲಾವೃತ, ಸಂಚಾರ ದಟ್ಟಣೆ, ಇಂದಿನ IMD ವರದಿ!

'ನಂಗೇ ಕೊಡಿ ಎಂದು ನಾನೇನು ಕೇಳಿಲ್ಲ..': ನೊಬೆಲ್ ಶಾಂತಿ ಪ್ರಶಸ್ತಿ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತು!

ಬೆಳಗಾವಿ: ಬೀದಿ ನಾಯಿಗಳ ಅಟ್ಟಹಾಸ, 2 ವರ್ಷದ ಬಾಲಕಿ ಮೇಲೆ ಭೀಕರ ದಾಳಿ

SCROLL FOR NEXT