ನಿಖಿಲ್ ಕುಮಾರ್ 
ಸಿನಿಮಾ ಸುದ್ದಿ

ಸೀತಾರಾಮ ಕಲ್ಯಾಣದಲ್ಲಿ 007 ಏಜೆಂಟ್ ಆಗಿ ನಿಖಿಲ್ ಕುಮಾರ್!

ಹರ್ಷ ನಿರ್ದೇಶನದ ನಿಖಿಲ್ ಕುಮಾರ್ ನಟನೆಯ ಸೀತಾರಾಮ ಕಲ್ಯಾಣ ಸಿನಿಮಾ ಶೂಟಿಂಗ್ ಆರಂಭವಾಗಿದ್ದು, ನಿಖಿಲ್ ಹೊಸ ಅವತಾರದ ಫೋಟೊಗಳು ...

ಬೆಂಗಳೂರು:  ಹರ್ಷ ನಿರ್ದೇಶನದ ನಿಖಿಲ್ ಕುಮಾರ್ ನಟನೆಯ ಸೀತಾರಾಮ ಕಲ್ಯಾಣ ಸಿನಿಮಾ ಶೂಟಿಂಗ್ ಆರಂಭವಾಗಿದ್ದು, ನಿಖಿಲ್ ಹೊಸ ಅವತಾರದ ಫೋಟೊಗಳು ಎಲ್ಲರ ಗಮನ ಸೆಳೆಯುತ್ತಿದೆ.
ಸಿನಿಮಾಗೆ ರಾಮ ಲಕ್ಷ್ಮಣ್ ಸಹೋದರರು ಸಾಹಸ ನಿರ್ದೇಶನ ಮಾಡಿದ್ದಾರೆ, ಸಿನಿಮಾದಲ್ಲಿ ಆರು ಪೈಟಿಂಗ್ ಸನ್ನಿವೇಶಗಳಿವೆ, ಬಾಂಡ್ ಸ್ಟೈಲ್ ನಲ್ಲಿ ಮೊದಲ ಬಾರಿಗೆ ಫೈಟಿಂಗ್ ಸನ್ನಿವೇಶ ಚಿತ್ರೀಕರಣ ಮಾಡಲಾಗುತ್ತಿದೆ. 
ಬ್ರಿಟಿಷ್ ಗೂಡಾಚಾರಿ ರೀತಿ ನಿಖಿಲ್ ಕುಮಾರ್ ಡ್ರೆಸ್ ಧರಿಸಿ ಫೈಟಿಂಗ್ ನಲ್ಲಿ ಕಾಣಿಸಿಕೊಂಡಿದ್ದಾರೆ, ಈ ಚಿತ್ರೀಕರಣಕ್ಕಾಗಿ ಮಿನರ್ವ ಮಿಲ್ ನಲ್ಲಿ  2 ಕೋಟಿ ರು. ವೆಚ್ಚದಲ್ಲಿ  ಬಹು ದೊಡ್ಡ ಸೆಟ್ ನಿರ್ಮಾಣ ಮಾಡಲಾಗಿದೆ.
ಈ ಫೈಟಿಂಗ್ ಸನ್ನಿವೇಶಕ್ಕಾಗಿ  ಮುಂಬೈ ನಿಂದ ಶಾಂಗ್ಲಿಯಾರ್ಸ್ ಲೈಟ್ ತರಲಾಗಿದೆ, ಫ್ಯಾಂಟೋಮ್ ಮತ್ತು ಹೈ ಸ್ಪೀಡ್ ಕ್ಯಾಮೆರಾ ಕೂಡ ತರಲಾಗಿದ್ದು, 8 ದಿನಗಳಿಂದ ಚಿತ್ರೀಕರಣ ನಡೆಸಲಾಗುತ್ತಿದೆ ಎಂದು ಕಾರ್ಯಕಾರಿ ನಿರ್ಮಾಪಕ ಸುನೀಲ್ ಗೌಡ ಹೇಳಿದ್ದಾರೆ. 
ಇನ್ನೂ ಸಿನಿಮಾದಲ್ಲಿ ಡೇನ್ ಡಾಗ್ ಕೂಡ ಸಿನಿಮಾದಲ್ಲಿ ಭಾಗವಹಿಸಿದೆ. ಈ ಡೇನ್ ಡಾಗ್ ಗೆ4 ದಿನಗಳ ಕಾಲ ತರಬೇತಿ ನೀಡಲಾಗಿದೆ, ಈ ನಾಯಿ ಅಂತರಾಷ್ಟ್ರೀಯ ಮಟ್ಟದ ಹಲವು ಪ್ರಶಸ್ತಿಗಳನ್ನು ಗಳಿಸಿದೆ, 136 ದಿನಗಳ ಕಾಲ ಶೂಟಿಂಗ್ ಶೆಡ್ಯೂಲ್ ಹಾಕಿಕೊಂಡಿದ್ದು, 26 ದಿನ ಮುಗಿದಿದೆ, ಚನ್ನಂಬಿಕಾ ಪ್ರೊಡಕ್ಷನ್  ಅಡಿಯಲ್ಲಿ ಸಿನಿಮಾ ನಿರ್ಮಾಣವಾಗುತ್ತಿದ್ದು, ರಚಿತಾ ರಾಮ್ ನಾಯಕಿಯಾಗಿ ನಟಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಹಲವು ಕುಟುಂಬಗಳ ಹೆಣ್ಮಕ್ಕಳ ಮರ್ಯಾದೆ ಕಳೆದ ಪುಣ್ಯಾತ್ಮ ಡಿಕೆಶಿ; ಪ್ರಜ್ವಲ್​​ ಕೇಸ್​ ಹಿಂದಿದ್ದವರಿಂದ ಮಾಜಿ ಸಿಎಂ ಸ್ಟಿಂಗ್​​ ಆಪರೇಷನ್: HDK ಹೊಸ ಬಾಂಬ್

ಸಿದ್ದರಾಮಯ್ಯ ವಿರುದ್ಧ ಸ್ಟಿಂಗ್ ಆಪರೇಶನ್: ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ಪೆನ್ ಡ್ರೈವ್ ಸಲ್ಲಿಕೆ; ನ್ಯಾಯಾಂಗ ತನಿಖೆಗೆ ಆಗ್ರಹ!

ಎಲ್ಲಾ ಪ್ರತಿಭಟನೆಗಳೂ ಒಂದೇ: 'ಚಾಯ್ ಪೆ ಚರ್ಚೆ' ಗೂ ಮುನ್ನ ರಾಹುಲ್ ಹೇಳಿಕೆ!

ಬೆಂಗಳೂರಿನಲ್ಲಿ SIR ಪ್ರತಿಭಟನೆ ವೇಳೆ ಪೊಲೀಸ್ ಕ್ರಮ: ಮರು ಪರಿಶೀಲನೆಗೆ ಪ್ರಿಯಾಂಕ್ ಖರ್ಗೆ ಆದೇಶ!

ಪುಣೆ ಟೆಕ್ಕಿ ಆತ್ಮಹತ್ಯೆ: ಡೆತ್‌ನೋಟ್‌ ಪತ್ತೆ; ಸಂಬಳ, ತವರು ಮನೆಯ ಫ್ಲಾಟ್ ವರ್ಗಾಯಿಸುವಂತೆ ಅತ್ತೆ-ಮಾವ ಒತ್ತಡ!