ಪುಣೆ ಟೆಕ್ಕಿ ಆತ್ಮಹತ್ಯೆ: ಡೆತ್‌ನೋಟ್‌ ಪತ್ತೆ; ಸಂಬಳ, ತವರು ಮನೆಯ ಫ್ಲಾಟ್ ವರ್ಗಾಯಿಸುವಂತೆ ಅತ್ತೆ-ಮಾವ ಒತ್ತಡ!

ಈ ಸಂಬಂಧ ಪೊಲೀಸರು ಆಕೆಯ ಪತಿ, ಆತನ ಕುಟುಂಬದ ಸದಸ್ಯರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Techie Dies By Suicide, Alleges In-Laws Wanted Her Salary, Flats In Note
ತ್ರಿಷ್ಣಾ
Updated on: 

ಪುಣೆ: ಮಹಾರಾಷ್ಟ್ರದ ಪುಣೆಯಲ್ಲಿ ವರದಕ್ಷಿಣೆಗಾಗಿ ಅತ್ತೆ-ಮಾವಂದಿರು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ 33 ವರ್ಷದ ಐಟಿ(IT) ಎಂಜಿನಿಯರ್ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಸಂಬಂಧ ಪೊಲೀಸರು ಆಕೆಯ ಪತಿ, ಆತನ ಕುಟುಂಬದ ಸದಸ್ಯರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮೃತ ಮಹಿಳೆಯನ್ನು ತ್ರಿಷ್ಣಾ ರಾಹುಲ್ ಸಕ್ಪಾಲ್ ಎಂದು ಗುರುತಿಸಲಾಗಿದೆ. ಆಕೆಯ ತಂದೆ ಬಾಲಕೃಷ್ಣ ನಿಕಮ್ ಅವರು ನೀಡಿದ ದೂರಿನ ಪ್ರಕಾರ, ತ್ರಿಷ್ಣಾ ಅವರು 2018ರಲ್ಲಿ ರಾಹುಲ್ ಸಕ್ಪಾಲ್ ಅವರನ್ನು ವಿವಾಹವಾಗಿದ್ದರು.

Techie Dies By Suicide, Alleges In-Laws Wanted Her Salary, Flats In Note
ನೋಯ್ಡಾದ 'ಸೂಪರ್ನೋವಾ' ಕಟ್ಟಡದ 43ನೇ ಮಹಡಿಯಿಂದ ಜಿಗಿದು ವ್ಯಕ್ತಿ ಆತ್ಮಹತ್ಯೆ; ದೇಹ ಛಿದ್ರ ಛಿದ್ರ! ಭಯಾನಕ Video

ವಿವಾಹದ ನಂತರ, ತಮ್ಮ ಸಂಪೂರ್ಣ ವೇತನ ನೀಡುವಂತೆ ಮತ್ತು ತವರು ಮನೆಯ ಕೋಟ್ಯಾಂತರ ರೂ. ಬೆಲೆ ಬಾಳುವ ಫ್ಲಾಟ್ ಅನ್ನು ಅತ್ತೆಯ ಹೆಸರಿಗೆ ವರ್ಗಾಯಿಸುವಂತೆ ಹಾಗೂ ಮಾವನಿಗಾಗಿ 1 ಕೋಟಿ ರೂ. ಮೌಲ್ಯದ ಫ್ಲಾಟ್ ಅನ್ನು ಖರೀದಿಸುವಂತೆ ಆಕೆಯ ಮೇಲೆ ಒತ್ತಡ ಹೇರಲಾಗುತ್ತಿತ್ತು ಎಂದು ನಿಕಮ್ ಆರೋಪಿಸಿದ್ದಾರೆ.

ದೈಹಿಕ ಹಾಗೂ ಮಾನಸಿಕ ಕಿರುಕುಳದಿಂದ ನೊಂದ ತ್ರಿಷ್ಣಾ ಅವರು 2021ರಲ್ಲಿ ತಮ್ಮ ತವರು ಮನೆಗೆ ಮರಳಿದ್ದರು. ನಂತರ ಆಕೆಯ ಪತಿ ಮರುಮದುವೆಯಾಗುವ ಉದ್ದೇಶದಿಂದ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದರು; ಆದರೆ ಈ ಪ್ರಕರಣವು ಪ್ರಸ್ತುತ ನ್ಯಾಯಾಲಯದಲ್ಲಿ ಬಾಕಿ ಇದೆ.

ನಂತರ, ಕಳೆದ ಸೆಪ್ಟೆಂಬರ್ 29 ರಂದು ಅವರು ತಮ್ಮ ಮನೆಯಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪೊಲೀಸರಿಗೆ ದೊರೆತ ಆತ್ಮಹತ್ಯೆ ಪತ್ರದಲ್ಲಿ, ತಮ್ಮ ಸಾವಿಗೆ ಪತಿ, ಅತ್ತೆ ವೈಶಾಲಿ, ಮಾವ ಸಂಜಯ್, ನಾದಿನಿ ಶೈಲಿ ಮತ್ತು ಅಜ್ಜಿ ಶಕುಂತಲಾ ಸಾಳುಂಕೆ ಕಾರಣರೆಂದು ಅವರು ಉಲ್ಲೇಖಿಸಿದ್ದರು.

ಮಹಿಳೆ ತಂದೆ ನೀಡಿದ ದೂರಿನ ಆಧಾರದ ಮೇಲೆ ಐವರು ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com