ಸಿನಿಮಾ ಸುದ್ದಿ

ರಾಜರಥದ ಪ್ರಯಾಣ ಸುಂದರ ಮತ್ತು ಭಾವನಾತ್ಮಕ: ಅವಂತಿಕಾ ಶೆಟ್ಟಿ

Vishwanath S
ಅವಂತಿಕಾ ಶೆಟ್ಟಿ ರಂಗಿತರಂಗ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದು ಅವರು ಅಭಿನಯದ ಮತ್ತೊಂದು ಚಿತ್ರ ರಾಜರಥ ಇದೇ ವಾರ ಬಿಡುಗಡೆಯಾಗಲಿದೆ. 
ಕನ್ನಡ ಮತ್ತು ತೆಲುಗಿನಲ್ಲಿ ರಾಜರಥ ಚಿತ್ರದ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ. ಈ ಚಿತ್ರದ ಮೂಲಕ ಅವಂತಿಕಾ ಶೆಟ್ಟಿ ತೆಲುಗಿಗೂ ಪಾದಾರ್ಪಣೆ ಮಾಡುತ್ತಿದ್ದಾರೆ. ಚಿತ್ರತಂಡದಿಂದ ರಾಜರಥ ಚಿತ್ರಕ್ಕಾಗಿ ಬಹಳಷ್ಟು ಪರಿಶ್ರಮ ಮತ್ತು ತ್ಯಾಗವು ನಡೆದಿದೆ. ಉತ್ತಮ ಮೂಡಿಬಹುವುದಕ್ಕಾಗಿ ಪ್ರತಿಯೊಬ್ಬರು ಉತ್ತಮ ಉದ್ದೇಶವನ್ನು ಇಟ್ಟುಕೊಂಡಿದ್ದರು ಎಂದು ಅವಂತಿಕಾ ಶೆಟ್ಟಿ ಹೇಳಿದ್ದಾರೆ. 
ಕನ್ನಡದ ಸೂಪರ್ ಹಿಟ್ ರಂಗಿತರಂಗ ಚಿತ್ರತಂಡ ರಾಜರಥ ಚಿತ್ರವನ್ನು ನಿರ್ಮಾಣ ಮಾಡಿರುವುದರಿಂದ ಚಿತ್ರದ ಕುರಿತು ನಿರೀಕ್ಷೆಗಳು ಹೆಚ್ಚಾಗಿದೆ. ರಾಜರಥ ಚಿತ್ರ ನನ್ನ ನಾಲ್ಕನೇ ಚಿತ್ರ. ಚಿತ್ರದಲ್ಲಿ ನಾನು ಮೇಘಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಈ ಪಾತ್ರ ನನಗೆ ಹೊಸ ಅನುಭವ ನೀಡಿದೆ. ಚಿತ್ರವು ನನ್ನ ಮತ್ತು ಅಭಿ(ನಿರೂಪ್ ಭಂಡಾರಿ) ಮೇಘಾ ನಡುವಿನ ಪ್ರೇಮ ಪ್ರಯಾಣವಾಗಲಿದೆ. ನಾನು ಇತರ ಪಾತ್ರಗಳಿಗಿಂತ ಸ್ವಲ್ಪ ಹೆಚ್ಚು ಪರದೆ ಮೇಲೆ ಕಾಣಿಸಿಕೊಂಡಿದ್ದೇನೆ ಎಂದರು. 
ರಂಗಿತರಂಗ ಚಿತ್ರವನ್ನು ನಿರ್ದೇಶಿಸಿದ್ದ ಅನೂಪ್ ಭಂಡಾರಿ ರಾಜರಥ ಚಿತ್ರವನ್ನು ನಿರ್ದೇಶಿಸಿದ್ದು ನಿರೂಪ್ ಭಂಡಾರಿ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ಒಂದು ಒಳ್ಳೆಯ ತಂಡದೊಂದಿಗೆ ಕೆಲಸ ಮಾಡುವುದು ತುಂಬಾ ಮುಖ್ಯ. ಅದರಲ್ಲಿ ರಾಜರಥ ತಂಡ ಒಂದು ಒಳ್ಳೆಯ ಉದಾಹರಣೆ. ಲೈಟ್ ಬಾಯ್ ಯಿಂದ ಹಿಡಿದು ತಂತ್ರಜ್ಞರವರಗೆ ಯಾರು ಅನೂಪ್ ಭಂಡಾರಿ ಚಿತ್ರದಲ್ಲಿ ಕೆಲಸ ಮಾಡುತ್ತಿರುವುದಾಗಿ ಹೇಳಿಲ್ಲ. ಬದಲಿಗೆ ಇದು ನಮ್ಮ ಚಿತ್ರ ಎಂದು ಕೆಲಸ ಮಾಡಿದ್ದಾಗಿ ಹೇಳಿದ್ದಾರೆ ಎಂದು ಅವಂತಿಕಾ ಶೆಟ್ಟಿ ಹೇಳಿದ್ದಾರೆ. 
SCROLL FOR NEXT