ಬೆಂಗಳೂರು: ಸೂರಿ ನಿರ್ದೇಶನದ ಟಗರು ಸಿನಿಮಾ ರಿಲೀಸ್ ಆಗಿ ಎಲ್ಲೆಡೆ ಯಶಸ್ವಿ ಪ್ರದರ್ಶನ ಕಾಣುತ್ತಿದೆ, ಇದೇ ವೇಳೆ ಈ ಸಿನಿಮಾದಲ್ಲಿರುವ ಜಾಮೂನ್ ರವಿ ಎಂಬ ಪಾತ್ರ ಎಲ್ಲರ ಗಮನ ಸೆಳೆಯುತ್ತಿದೆ.
ಸಿನಿಮಾದಲ್ಲಿ ಸಣ್ಣ ಪಾತ್ರವಾಗಿದ್ದರೂ ಎಲ್ಲರ ಮನದಲ್ಲಿ ಉಳಿದಿದೆ, ಪೂರ್ಣಚಂದ್ರ ಎಂಬುವರು ಜಾಮೂನ್ ರವಿ ಪಾತ್ರ ನಿರ್ವಹಿಸಿದ್ದಾರೆ, ಈ ಪಾತ್ರದ ನಂತರ ನನ್ನ ಜವಾಬ್ದಾರಿ ಹೆಚ್ಚಿದೆ. ಇದು ಸಣ್ಣ ಪಾತ್ರ, ಆದರೆ ಸ್ಮರಣೆಯಲ್ಲಿ ಉಳಿಯುವಂತದ್ದಾಗಿದೆ, ಈ ಪಾತ್ರ ಕೊಟ್ಟಿದ್ದಕ್ಕಾಗಿ ನಾನು ಸೂರಿ ಅವರಿಗೆ ಕೃತಜ್ಞನಾಗಿದ್ದೇನೆ ಎಂದು ಹೇಳಿದ್ದಾರೆ. ಜನ ನನ್ನನ್ನು ಅದೇ ಹೆಸರಲ್ಲಿ ಗುರುತಿಸುತ್ತಾರೆ.
ಬಡತನದಲ್ಲೇ ಹುಟ್ಟಿ ಬೆಳೆದ ಪೂರ್ಣಚಂದ್ರ ಆರ್ಕೆಸ್ಟ್ರಾ ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಮೈಸೂರಿನ ಆರ್ಕೆಸ್ಟ್ರಾ ಸಂಸ್ಕೃತಿಯ ಕಥೆಯದ್ದಾಗಿದೆ. ಮೈಸೂರು ಸುತ್ತಮುತ್ತಾ ಸಿನಿಮಾ ಶೂಟಿಂಗ್ ನಡೆಯುತ್ತಿದೆ.
ಟಗರು ಸಿನಿಮಾ ಎಲ್ಲಾಕ್ಕಿಂತ ವಿಭಿನ್ನವಾಗಿದೆ, ಅಂಥ ದೊಡ್ಡ ಸಿನಿಮಾದಲ್ಲಿ ಇಂಥ ಸಣ್ಣ ಪಾತ್ರ ಮಾಡುವುದು ಅತ್ಯದ್ಬುತವಾಗಿದೆ. ಮೈಸೂರು ಮೂಲದ ಪೂರ್ಣಚಂದ್ರ ಸ್ಯಾಂಡಲ್ ವುಡ್ ನಲ್ಲಿ ದೊಡ್ಡ ಬ್ರೇಕ್ ಗಾಗಿ ಕಾಯುತ್ತಿದ್ದಾರೆ. ಸುಮಾರು 30ಕ್ಕೂ ಹೆಚ್ಚು ಶಾರ್ಟ್ ಮೂವಿಗಳಲ್ಲಿ ನಟಿಸಿದ್ದಾರೆ, ಬಿಬಿ5 ಎಂಬ ಇನ್ನೊಂದು ಸಿನಿಮಾದಲ್ಲಿ ಅಭಿನಯಿಸಿದ್ದಾರೆ.