ಸಿನಿಮಾ ಸುದ್ದಿ

ರಾಜರಥ ಮೂಲಕ ಕಾಲೇಜು ದಿನಗಳಿಗೆ ಹೋಗಿದ್ದು ಖುಷಿಯಾಗಿದೆ: ನಿರೂಪ್ ಭಂಡಾರಿ

Sumana Upadhyaya

ಸಿನಿಮಾ ನಟರಲ್ಲಿ ಎಷ್ಟು ಮಂದಿಗೆ ತಮ್ಮ ಕಾಲೇಜು ದಿನಗಳು ಮತ್ತೆ ಮರುಕಳಿಸುತ್ತವೆ? ನಿರೂಪ್ ಭಂಡಾರಿಗೆ ತಮ್ಮ ಎರಡನೇ ಚಿತ್ರ ರಾಜರಥದಲ್ಲಿ ಆ ಅನುಭವ ಉಂಟಾಗಿದೆಯಂತೆ. ಈ ಬಗ್ಗೆ ಸಿಟಿ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ಅವರು, ಚಿತ್ರದಲ್ಲಿ ತಮ್ಮ ಪಾತ್ರ ಮತ್ತು ತೆಲುಗಿಗೆ ಪಾದಾರ್ಪಣೆ ಮಾಡಿರುವ ಬಗ್ಗೆ ಮಾತನಾಡಿದ್ದಾರೆ.

ರಾಜರಥ ಸಿನಿಮಾ ಮೂಲಕ ನನ್ನ ಎಂಜಿನಿಯರಿಂಗ್ ದಿನಗಳತ್ತ ಹೊರಳಿದ್ದೆ. ಕಾಲೇಜಿನಲ್ಲಿ ನನ್ನ ಉತ್ತಮ ಸ್ನೇಹಿತ ಹರ್ಷ ಮತ್ತು ನನ್ನ ಸೋದರ ಅನೂಪ್ ಭಂಡಾರಿ ಅದೇ ಹೆಸರುಗಳನ್ನು ಚಿತ್ರದಲ್ಲಿನ ಪಾತ್ರಗಳಿಗೂ ಇಟ್ಟಿದ್ದಾರೆ. ಎಂಜಿನಿಯರಿಂಗ್ ಓದುತ್ತಿದ್ದಾಗ ನಾವು 8 ಜನ ಇದ್ದೆವು. ಅಂದಿನ ನೆನಪುಗಳು ಯಾವುದನ್ನೂ ಮರೆತಿಲ್ಲ. ಅವೆಲ್ಲವನ್ನೂ ಚಿತ್ರದಲ್ಲಿ ತೆರೆಯ ಮೇಲೆ ತರಲು ಪ್ರಯತ್ನಿಸಿದ್ದೇವೆ ಎನ್ನುತ್ತಾರೆ.

ಗಂಭೀರ ಸ್ವಭಾವದ ಪಾತ್ರದಲ್ಲಿ ನಿರೂಪ್ ರಂಗಿತರಂಗದಲ್ಲಿ ಕಾಣಿಸಿಕೊಂಡರೂ ಸಹ ಅದರಲ್ಲಿ ತಮ್ಮನ್ನು ಭಿನ್ನವಾಗಿ ತೋರಿಸಲಾಗಿದೆ ಎನ್ನುತ್ತಾರೆ. ಈ ಪಾತ್ರದಲ್ಲಿ ತಮಾಷೆ, ರೋಮಾಂಚನ ಮತ್ತು ಪೂರ್ಣ ಶಕ್ತಿಯಿದೆ. ಕಾಲೇಜು ವಿದ್ಯಾರ್ಥಿ ಹೇಗೆ ಕಾಣಬೇಕು ಮತ್ತು ಆತನ ದೈಹಿಕ ಭಾಷೆ ಹೇಗಿರಬೇಕು ಎಂಬುದರ ಕುರಿತು ನಾನಿಲ್ಲಿ ಯೋಚಿಸಿದ್ದೇನೆ. ಚಿತ್ರದ ಟ್ರೈಲರ್ ಮತ್ತು ಹಾಡುಗಳಿಗೆ ಇದುವರೆಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಜನರು ಚಿತ್ರವನ್ನು ಕೂಡ ಇಷ್ಟಪಡುತ್ತಾರೆ ಎಂದು ಭಾವಿಸುತ್ತೇನೆ. ರಾಜರಥ ಸಿನಿಮಾ ಮೂಲಕ ಟಾಲಿವುಡ್ ಗೆ ಕೂಡ ಪಾದಾರ್ಪಣೆ ಮಾಡುತ್ತಿರುವುದರಿಂದ ನಿರೂಪ್ ಗೆ ಇದು ದೊಡ್ಡ ಪ್ರಾಜೆಕ್ಟ್ ಆಗಿದೆ.
 
ಹಾಗಾದರೆ ನಿರೀಕ್ಷೆ ಬೆಟ್ಟದಷ್ಟಿದೆಯೇ ಎಂದು ಕೇಳಿದರೆ, ಭಾಷೆಯ ಸಂಖ್ಯೆಯಿಂದ ಏನೂ ಬದಲಾವಣೆಯೆನಿಸುವುದಿಲ್ಲ. ಜನರು ನಮ್ಮ ಬಗ್ಗೆ ನಿರೀಕ್ಷೆಗಳನ್ನಿಟ್ಟುಕೊಂಡಿರುತ್ತಾರೆ. ಆ ನಿರೀಕ್ಷೆಗಳನ್ನು ನಾವು ಹುಸಿಗೊಳಿಸಬಾರದು. ಅದೇ ಸಮಯದಲ್ಲಿ ರಂಗಿತರಂಗದ ಯಶಸ್ಸನ್ನು ಕೂಡ ನಾವು ಹೊತ್ತು ಸಾಗಬಾರದು. ಪ್ರತಿ ಸಿನಿಮಾವನ್ನು ಕೂಡ ನಿಮ್ಮ ಮೊದಲ ಸಿನಿಮಾವೆಂದು ಕಾಣಿ ಎಂದು ತಂದೆ ಹೇಳುತ್ತಿದ್ದರು. ಆಗ ಮಾತ್ರವೇ ನಿಮಗೆ ಅತ್ಯುತ್ತಮವಾದದ್ದನ್ನು ನೀಡಲು ಸಾಧ್ಯ ಎನ್ನುತ್ತಾರೆ, ನಾನು ಮತ್ತು ನನ್ನಣ್ಣ ಅದನ್ನೇ ಪಾಲಿಸಿಕೊಂಡು ಬರುತ್ತಿದ್ದೇವೆ ಎಂದರು.

SCROLL FOR NEXT