ರಾಜರಥ ಸಿನಿಮಾ ಸ್ಟಿಲ್ 
ಸಿನಿಮಾ ಸುದ್ದಿ

'ರಾಜರಥ ಸಿನಿಮಾವನ್ನು 5 ಸಾವಿರ ಬಾರಿ ನೋಡಿದ್ದೇನೆ, ಒಮ್ಮೆಯೂ ಬೋರ್ ಆಗಿಲ್ಲ'

ಅನೂಪ್ ಭಂಡಾರಿ ನಿರ್ದೇಶನದ ರಂಗಿತರಂಗ ಸಿನಿಮಾ ಬಗ್ಗೆ ಇನ್ನೂ ಗಾಂಧಿನಗರದಲ್ಲಿ ಚರ್ಚೆ ನಡೆಯುತ್ತಿದೆ,...

ಬೆಂಗಳೂರು: ಅನೂಪ್ ಭಂಡಾರಿ ನಿರ್ದೇಶನದ ರಂಗಿತರಂಗ ಸಿನಿಮಾ ಬಗ್ಗೆ ಇನ್ನೂ  ಗಾಂಧಿನಗರದಲ್ಲಿ ಚರ್ಚೆ ನಡೆಯುತ್ತಿದೆ, ಇದರ ಬೆನ್ನಲ್ಲೇ ತಮ್ಮ 2ನೇ ಸಿನಿಮಾ ರಾಜರಥದ ಚಿತ್ರದ ಬಿಡುಗಡೆಗೆ ತಯಾರಿ ನಡೆಸಿದ್ದು ನಾಳೆ ರಾಜ್ಯಾದ್ಯಂತ ತೆರೆ ಕಾಣಲಿದೆ.
ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಚಿತ್ರ ನಿರ್ಮಾಣವಾಗುತ್ತಿದೆ, ನಿರೂಪ್ ಭಂಡಾರಿ, ಆವಂತಿಕಾ ಶೆಟ್ಟಿ, ರವಿಶಂಕರ್, ಪುನೀತ್ ರಾಜ್ ಕುಮಾರ್, ರಾಣಾ ದಗ್ಗುಬಾಟಿ, ಮತ್ತು ಆರ್ಯ ಈ ಸಿನಿಮಾದಲ್ಲಿ ನಟಿಸಿದ್ದಾರೆ.  ರಾಜರಥ ಸಿನಿಮಾಗೆ ರಂಗಿತರಂಗ ಕ್ಕಿಂತ ಹೆಚ್ಚಿನ ಪರಿಶ್ರಮ ಹಾಕಿದ್ದೇನೆ ಎಂದು ಅನೂಪ್ ಒಪ್ಪಿಕೊಂಡಿದ್ದಾರೆ. 
ರಂಗಿತರಂಗ ಸಿನಿಮಾಗೆ ಬಜೆಟ್ ನಿರ್ಬಂಧ ಇತ್ತು, ಹೀಗಾಗಿ 40 ದಿನಗಳಲ್ಲಿ ಸಿನಿಮಾ ಮುಗಿದಿತ್ತು. ಆದರೆ ರಾಜರಥದಲ್ಲಿ ಹಾಗಾಗಿಲ್ಲ, 80 ದಿನಗಳಲ್ಲಿ ಶೂಟಿಂಗ್ ಮುಗಿಯಬೇಕಿತ್ತು ಆದರೆ ಇದಕ್ಕೇ ಬರೋಬ್ಬರಿ 120 ದಿನ ಚಿತ್ರೀಕರಣ ನಡೆಸಿದ್ದೇವೆ, ಎರಡು ಭಾಷೆಗಳಲ್ಲಿ ಚಿತ್ರ ತಯಾರಾಗುತ್ತಿರುವುದಿರಂದ ಹೆಚ್ಚಿನ ಸಮಯಾವಾಕಾಶ ಬೇಕಾಯಿತು ಎಂದಿದ್ದಾರೆ. ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದ್ದು ನಿದ್ರೆ ಮಾಯಾ ವಾಗಿದೆ. 
ಈ ಸಿನಿಮಾ ಕೆಲಸದ ನಿಮಿತ್ತ ನಾನು ಪದೇ ಪದೇ ಹೈದರಾಬಾದ್ ಗೆ ತೆರಳಬೇಕಾಗಿತ್ತು. 20 ದಿನಗಳ ಅವಧಿಯಲ್ಲಿ ಈ ಎಲ್ಲಾ ಕೆಲಸ ಮುಗಿಸಿದ್ದೇನೆ, ಕಳೆದ ವಾರ 4 ದಿನ  ರಾತ್ರಿ ಕೇವಲ ಅರ್ಧ ಗಂಟೆ ಮಾತ್ರ ನಿದ್ದೆ ಮಾಡಿದ್ದೇನೆ. ಅದೂ ಕೂಡ ಚೆನ್ನೈ ಗೆ ವಿಮಾನದಲ್ಲಿ ತೆರಳುವಾಗ ಅರ್ಧ ಗಂಟೆ ನಿದ್ರಿಸಿದ್ದೆ ಎಂದು ತಿಳಿಸಿದ್ದಾರೆ,
ರಾಜರಥ ಸಿನಿಮಾ ತಯಾರಿಸಲು ಬರೋಬ್ಬರೀ 2 ವರ್ಷ ಸಮಯ ಬೇಕಾಯಿತು, ಅದಕ್ಕೆ ಹಲವು ಕಾರಣಗಳಿಗವೆ, ನನ್ನ ಸಂಸಾರವನ್ನು ವಿದೇಶದಿಂದ ಭಾರತಕ್ಕೆ ವಾಪಸ್ ಕರೆತರುವುದಕ್ಕೆ ಹೆಚ್ಚಿನ ಸಮಯ ಹಿಡಿಯಿತು. ಜೊತೆಗೆ ಕಲಾವಿದರ ಡೇಟ್ಸ್ ಹೊಂದಿಸುವುದಕ್ಕು ಕೂಡ ಸಮಯ ಹಿಡಿಯಿತು, ನಮ್ಮ ಖಾತೆಯಲ್ಲಿ ಹಣವಿದ್ದರೂ ಅದನ್ನು ಪಾವತಿಸಲು ಸಾಧ್ಯವಾಗಲಿಲ್ಲ, ಜೊತೆಗೆ ವಾತಾವರಣ ಕೂಡ ಕೆಲಕಾಲ ನಮಗೆ ತೊಂದರೆ ಉಂಟುಮಾಡಿದೆ ಎಂದು ಹೇಳಿದ್ದಾರೆ,
ರಾಜರಥ ಸಿನಿಮಾ ಬಿಡುಗಡೆಗೆ ನಾನು ಕಾತುರದಿಂದ ಕಾಯುತ್ತಿದ್ದೇನೆ, ಕನ್ನಡ ಮತ್ತು ಹಿಂದಿ ಸಿನಿಮಾಗಳನ್ನು ನಾನು ನೋಡುತ್ತಾ ಬೆಳೆದೆ. ನಾನು ನೋಡಿದ ಸಿನಿಮಾಗಳಿಂದ ಉತ್ತೇಜನಗೊಂಡು ನನ್ನ ಸಿನಿಮಾ ಮಾಡಿದ್ದೇನೆ, ಅವರ ಕ್ಯಾಮೆರಾ ಮೂಮೆಂಟ್ ಹಾಗೂ ಎಡಿಟಿಂಗ್ ವಿಧಾನವನ್ನು ಅನುಸರಿಸುತ್ತೇನೆ, ಅದು ಕ್ಲೀನ್ ಮತ್ತು ನೀಟ್ ಆಗಿ ಕಾಣುತ್ತದೆ. ಎಂದು ತಿಳಿಸಿದ್ದಾರೆ,
ನಾನು ಇದುವರೆಗೂ ರಾಜರಥವನ್ನು 5 ಸಾವಿರ ಬಾರಿ ನೋಡಿದ್ದೇನೆ , ಆದರೆ ಒಮ್ಮೆಯೂ ನನಗೆ ಬೇಸರವಾಗಲಿಲ್ಲ, ಪ್ರತಿ ವಿಭಾಗದಲ್ಲೂ ಮತ್ತಷ್ಟು ಬಾರಿ ಎಡಿಟಿಂಗ್ ಮಾಡುತ್ತೇನೆ, ಪ್ರತಿ ತಂತ್ರಜ್ಞರ ಜೊತೆ ಕುಳಿತು ಕೆಲಸ ಮಾಡಿದ್ದೇನೆ, ನನಗೆ ಸಿನಿಮಾ ತುಂಬಾ ಇಷ್ಟವಾಗಿ, ಪ್ರೇಕ್ಷಕರಿಗೂ ಕೂ ಜ್ಈ ಸಿನಿಮಾ ಮೆಚ್ಚುಗೆಯಾಗಲಿದೆ ಎಂದು ಹೇಳಿದ್ದಾರೆ,

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನಗರ ನಕ್ಸಲರ ಟಾರ್ಗೆಟ್‌ ಚಾಮುಂಡಿ ಬೆಟ್ಟ- ಬಿಎಲ್ ಸಂತೋಷ್: ಸತ್ಯ ಹೇಳಿದರೆ ಕೆಲವರು ಸಹಿಸಲ್ಲ, ಮಾತನಾಡದಿರುವುದೇ ಲೇಸು-dks

ಉಳಿಕೆ ಮತ್ತು ಹೂಡಿಕೆ ನಡುವೆ ಸಮತೋಲನವಿರಲಿ! (ಹಣಕ್ಲಾಸು)

ಚಾಮುಂಡೇಶ್ವರಿ ದೇವಿ ಸುತ್ತ ನಡೆಯುತ್ತಿರುವ ರಾಜಕೀಯ ತೀವ್ರ ಬೇಸರ ತರಿಸಿದೆ: ಪ್ರಮೋದಾದೇವಿ ಒಡೆಯರ್

ಉಕ್ರೇನ್ ವಿರುದ್ಧ ರಷ್ಯಾದ ದೀರ್ಘ ಸಂಘರ್ಷಕ್ಕೆ ಭಾರತವೇ ಕಾರಣ, ಇದು 'ಮೋದಿ ಯುದ್ಧ': White House ವ್ಯಾಪಾರ ಸಲಹೆಗಾರ ಪೀಟರ್ ನವರೊ

Minneapolis Shooter: 'Trump ಸಾವು.. ಭಾರತ ಸರ್ವನಾಶ': ಅಮೆರಿಕ ದಾಳಿಕೋರನ ಬಂದೂಕಿನ ಮೇಲೆ ಶಾಕಿಂಗ್ ಬರಹ!

SCROLL FOR NEXT