ಬೆಂಗಳೂರು: ಸಂಗೀತಾ ಭಟ್ ಹಾಗೂ ಬಾಲು ನಾಂಗೇಂದ್ರ ಅವರ ಮುಂಬರುವ ಚಿತ್ರಕ್ಕೆ ಕುತೂಹಲಕಾರಿ ಶೀರ್ಷಿಕೆ ಸಿಕ್ಕಿದೆ. ಸದಸ್ಯರೆಲ್ಲರೊಡನೆ ಚರ್ಚಿಸಿದ ಬಳಿಕ ಚಿತ್ರಕ್ಕೆ ’ಕಪಟ ನಾಟಕ ಸೂತ್ರಧಾರಿ’ ಎಂದು ಹೆಸರಿಡಲು ಚಿತ್ರತಂಡವು ತೀರ್ಮಾನಿಸಿದೆ.
ಕೆ.ವೇಣುಗೋಪಾಲ್ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಪ್ರಥಮ ಚಿತ್ರ ಇದಾಗಿದ್ದು ಮಹಿಳಾ ಕೇಂದ್ರಿತವಾಗಿರುವ ಈ ಚಿತ್ರದ ಕಥೆ ಕೇಳಿದ ನಾಯಕಿ ಸಂಗೀತಾಗೆ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ.
ಗಮನಿಸಬೇಕಾಂದ ಅಂಶವೆಂದರೆ ಕೇವಲ ವಾರಾಂತ್ಯಗಳಲ್ಲಷ್ಟೇ ಚಿತ್ರೀಕರಣ ನಡೆಸಲಾಗಿದೆ.
ಸಂಗೀತಾ ಇಲ್ಲಿ ಮದ್ಯಮವರ್ಗದ ಹುಡುಗಿಯಾಗಿ ಅಭಿನಯಿಸಿಉತ್ತಿದ್ದಾರೆ. ಗಾರ್ಮೆಂಟ್ ಉದ್ಯೋಗಿಯಾಗಿ ಕಾಣಿಸಿಕೊಳ್ಳುತ್ತಿರುವ ಇವರು ಆಟೋ ಚಾಲಕನಾಗಿ ಕಾಣಿಸಿಕೊಳ್ಳುತ್ತಿರುವ ಬಾಲು ನಾಗೇಂದ್ರಗೆ ಸಾಥ್ ನೀಡಲಿದ್ದಾರೆ.
ಇದಾಗಲೇ ’ಅನುಕ್ತ’, ’ಆಯ್ದು ಉಳಿದವರು’ ಚಿತ್ರದ ಚಿತ್ರೀಕರಣ ಪೂರ್ಣಗೊಳಿಸಿರುವ ಸಂಗೀತಾಕೆ.ಎಂ. ಚೈತನ್ಯ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಚಿತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಸಧ್ಯ ನಾವು ’ಕಪಟ ನಾಟಕ ಸೂತ್ರಧಾರಿ’ ಚಿತ್ರ ಎಂದು ಬಿಡುಗಡೆಯಾಗಲಿದೆ, ಹೇಗೆ ಸದ್ದು ಮಾಡಲಿದೆ ಎಂದು ಕಾದು ನೋಡಬೇಕಿದೆ.