ಚಿತ್ರರಂಗಕ್ಕೆ ರಿಯಲ್ ಸ್ಟಾರ್ ರೀ ಎಂಟ್ರಿ, ಉಪೇಂದ್ರ ಈಗ ’ಹೋಮ್ ಮಿನಿಸ್ಟರ್'
ಬೆಂಗಳೂರು: ಸುಮಾರು ಆರು ತಿಂಗಳ ಬಳಿಕ ರಿಯಲ್ ಸ್ಟಾರ್ ಉಪೇಂದ್ರ ಕ್ಯಾಮರಾ ಮುಂದೆ ನಿಂತಿದ್ದಾರೆ. ರಾಜಕೀಯಕ್ಕೆ ಪ್ರವೇಶಿಸುವ ನಿಟ್ಟಿನಲಿ ಚಿತ್ರರಂಗದಿಂದ ಬ್ರೇಕ್ ಪಡೆದಿದ್ದ ನಟ ಇದೀಗ ’ಹೋಮ್ ಮಿನಿಸ್ಟರ್’ ಮೂಲಕ ಮತ್ತೆ ಚಿತ್ರ ಜಗತ್ತಿಗೆ ಮರಳಿದ್ದಾರೆ.
ತೆಲುಗು ಹಾಗೂ ಕನ್ನಡ ಎರಡೂ ಭಾಷೆಗಳಲ್ಲಿ ತಯಾರಾಗುತ್ತಿರುವ ಈ ಚಿತ್ರದ ಚಿತ್ರೀಕರಣ ಮಲೇಷಿಯಾದಲ್ಲಿ ನಡೆಯುತ್ತಿದೆ.ವೇದಿಕಾ ಕುಮಾರಂದ, ಲಾಸ್ಯಾ ನಾಗರಾಜ್ ಸೇರಿ ಬಹುತಾರಾಂಗಣವಿರುವ ಈ ಚಿತ್ರದ ಮೂರು ಹಾಡುಗಳು ಹಾಗೂ ಕೆಲವೇ ದೃಶ್ಯಗಳನ್ನು ಪೂರ್ಣಗೊಳಿಸಬೇಕಾಗಿದೆ ಎಂದು ಉಪೇಂದ್ರ ಹೇಳಿದ್ದಾರೆ.
ಸುಜಯ್ ಕೆ. ಶ್ರೀಹರಿ ನಿರ್ದೇಶನದ ಈ ಚಿತ್ರದ ಚಿತ್ರೀಕರಣ ಮಲೇಷಿಯಾದ ಶಾಪಿಂಗ್ ಮಾಲ್, ಅದ್ದೂರಿ ಬಹುಮಹಡಿ ಕಟ್ಟಡಗಳ ಮುಂದೆ ನಡೆಯುತ್ತಿದ್ದು ಮಲೇಷಿಯಾದ ಸುಂದರ ತಾಣಗಳನ್ನು ಚಿತ್ರದಲ್ಲಿಯೂ ಅಷ್ಟೇ ಚೆನ್ನಾಗಿ ಸೆರೆಹಿಡಿಯಲಾಗುತ್ತಿದೆ.
"ಚಿತ್ರಕಥೆಗೆ ಭಾರತದ ಹೊರಗೆ ಚಿತ್ರೀಕರಣ ಅಗತ್ಯವಾಗಿತ್ತು. ನಾವು ಮಲೇಷಿಯಾವನ್ನು ಆಯ್ಕೆ ಮಾಡಿಕೊಂಡೆವು. ಕಳೆದೊಂದು ವಾರದಿಂಡ ಚಿತ್ರೀಕರಣ ನಡೆಯುತ್ತಿದ್ದು ಮೇ 5ಕ್ಕೆ ಮುಕ್ತಾಯವಾಗುವ ನಿರೀಕ್ಷೆ ಇದೆ" ಚಿತ್ರ ನಿರ್ಮಾಪಕರಾದ ಪೂರ್ಣ ನಾಯ್ಡು ಹೇಳಿದ್ದಾರೆ.
ನಿರ್ಮಾಪಕರು ಹೇಳುವಂತೆ ಸದ್ಯವೇ ಚಿತ್ರೀಕರಣ ಸಂಪೂರ್ಣಗೊಂಡು ಚಿತ್ರವು ಪೋಸ್ಟ್ ಪ್ರೊಡಕ್ಷನ್ ಗೆ ಹೋಗಲಿದೆ. "ಚಿತ್ರ ಚೆನ್ನಾಗಿ ಮೂಡಿಬರಲಿದೆ. ಪ್ರೇಕ್ಷಕರ ನಿರೀಕ್ಷೆಯ ಮಟ್ಟಕ್ಕೆ ತಲುಪಲಿದೆ ಎಂದು ನಾನು ಭಾವಿಸುತ್ತೇನೆ" ಪೂರ್ಣ ಹೇಳಿದ್ದಾರೆ. ಚಿತ್ರ ಬಿಡುಗಡೆಗೆ ಮುನ್ನ ಅವರು ಚಿತ್ರದ ಆಡಿಯೋ ಬಿಡುಗಡೆ ಸಮಾರಂಬವನ್ನು ಅದ್ದೂರಿಯಾಗಿ ಏರ್ಪಡಿಸಲು ಯೋಜನೆ ಹಾಕಿಕೊಂಡಿದ್ದಾರೆ.
’ಹೋಮ್ ಮಿನಿಸ್ಟರ್’ ಚಿತ್ರದಲ್ಲಿ ತಾನ್ಯ ಹೋಪ್ ಸಹ ನಟಿಸುತ್ತಿದ್ದು ಚಿತ್ರಕ್ಕೆ ಗಿಬ್ರಾನ್ ಸಂಗೀತವಿದೆ. ಕುಂಜುನ್ನಿ ಕುಮಾರ್ ಚಿತ್ರದ ಛಾಯಾಗ್ರಾಹಕರಾಗಿದ್ದು ಭಾನು ಹಾಗೂ ಜಾನಿ ನೃತ್ಯ ಸಂಯೋಜನೆ ನೆರವೇರಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos