ನಾತಿಚರಾಮಿ ಚಿತ್ರದ ಒಂದು ದೃಶ್ಯ 
ಸಿನಿಮಾ ಸುದ್ದಿ

ತೆರೆಗೆ ಬರುವ ಮುನ್ನ ವಿದೇಶದಲ್ಲಿ ಸದ್ದು ಮಾಡಲಿರುವ ’ನಾತಿಚರಾಮಿ’

ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಮನ್ಸೂರ್ ತಮ್ಮ ಎರಡನೇ ಚಿತ್ರ ’ನಾತಿಚರಾಮಿ’ ತಯಾರಿಯಲ್ಲಿದ್ದಾರೆ.

ಬೆಂಗಳೂರು: ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಮನ್ಸೂರ್ ತಮ್ಮ ಎರಡನೇ ಚಿತ್ರ ’ನಾತಿಚರಾಮಿ’ ತಯಾರಿಯಲ್ಲಿದ್ದಾರೆ. ಅವರ ಮೊದಲ ಚಿತ್ರ ’ಹರಿವು’ ರಾಷ್ಟ್ರ ಪ್ರಶಸ್ತಿ ಗಳಿಸಿದ ಹಿನ್ನೆಲೆಯಲ್ಲಿ ಈ ಚಿತ್ರದ ಕುರಿತಂತೆ ಆಗಸದೆತ್ತರದ ನಿರೀಕ್ಷೆಗಳಿದೆ.
ಶೃತಿ ಹರಿಹರನ್ ನಾಯಕಿಯಾಗಿರುವ ಈ ಚಿತ್ರದ ಚಿತ್ರೀಕರಣ ಅಂತಿಮ ಘಟ್ಟದಲ್ಲಿದೆ. ಶೃತಿ ಅವರ ಅಭಿನಯದಲ್ಲಿ ಒಂದು ಹಾಡಿನ ಚಿತ್ರೀಕರಣ ಮಾತ್ರವೇ ಬಾಕಿ ಇದ್ದು ಎಡಿಟಿಂಗ್ (ಸಂಕಲನ) ಕೆಲಸಗಳಾದ ಮೇಲೆ ಅದನ್ನು ಕೈಗೆತ್ತಿಕೊಳ್ಳಲಾಗುತ್ತದೆ ಎಂದು ನಿರ್ದೇಶಕರು ಹೇಳಿದ್ದಾರೆ.
ಇನ್ನು ಚಿತ್ರದಲ್ಲಿ ನಾಲ್ಕು ರಾಷ್ಟ್ರ ಪ್ರಶಸ್ತಿಗಳನ್ನು ಗಳಿಸಿದ ನಟ ಸಂಚಾರಿ ವಿಜಯ್ ಸಹ ಅಭಿನಯಿಸುತ್ತಿದ್ದಾರೆ."ಅಲ್ಲದೆ ಚಿತ್ರದಲ್ಲಿ ಬಾಲಾಜಿ ಮನೋಹರ್ ಸಹ ಅಭಿನಯಿಸುತ್ತಿದ್ದು ಕೆಪಿ ಪೂರ್ಣಚಂದ್ರ ತೇಜಸ್ವಿಯವರ ’ಕರ್ವಾಲೋ’ ಕಾದಂಬರಿಯ ಪಾತ್ರಧಾರಿಯನ್ನು ಇವರ ಪಾತ್ರ ಹೋಲಲಿದೆ. ಮನೋಹರ್ ಈ ಚಿತ್ರದಲ್ಲಿ ಮನೋವೈದ್ಯನಾಗಿ ಕಾಣಿಸಿಕೊಳ್ಳಲಿದ್ದಾರೆ. ಶೃತಿ ಕೇಂದ್ರ ಪಾತ್ರಧಾರಿಯಾಗಿದ್ದು ಸಂಚಾರಿ ವಿಜಯ್ ಹಾಗೂ ಬಾಲಾಜಿ ಪಾತ್ರಗಳು ಅವಳ ಪಾತ್ರಕ್ಕೆ ಪೂರಕವಾಗಿರಲಿದೆ" ನಿರ್ದೇಶಕರು ಹೇಳಿದರು.
"ನಾವು ಚಿತ್ರ ಬಿಡುಗಡೆಗೆ ಮುನ್ನ ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ಇದನ್ನು ಪ್ರದರ್ಶಿಸಲು ಬಯಸಿದ್ದೇವೆ. ಇದರಿಂದ ನಮಗೆ ಸಾಕಷ್ಟು ಅನುಕೂಲವಾಗಲಿದೆ" ಮನ್ಸೂರ್ ಹೇಳಿದ್ದಾರೆ.
"ನಾನು ಇದಾಗಲೇ ಮಾಮಿ ಚಿತ್ರೋತ್ಸವದಲ್ಲಿ ನನ್ನ ಚಿತ್ರವನ್ನು ಪ್ರದರ್ಶಿಸಲು ತಯಾರಾಗಿದ್ದೇನೆ. ನಾವು ಈಗೆ ಚಿತ್ರೋತ್ಸವಗಳಲ್ಲಿ ಚಿತ್ರವನ್ನು ಪ್ರದರ್ಶಿಸುವ ಕಾರಣ ಪ್ರೇಕ್ಷಕರ ಗಮನ ಸೆಳೆಯುವುದು ಸುಲಭವಾಗಲಿದೆ" ಅವರು ಹೇಳಿದರು. 
ಮುಖ್ಯ ಪಾತ್ರಗಳ ಜತೆಗೆ ಗೋಪಾಲಕೃಷ್ಣ ದೇಶಪಾಂಡೆ, ಶರಣ್ಯ, [ಪವನ್, ವಲ್ಲಭ, ಶ್ವೇತಾ ಶ್ರೀನಿವಾಸ್, ಗ್ರೀಶ್ಮಾ ಶ್ರೀಧರ್ ಮತ್ತಿತರರು ಅಭಿನಯಿಸಿದ್ದಾರೆ.ಜಗನ್ ಮೋಹನ್ ರೆಡ್ಡಿ ನಿರ್ಮಾಣದ ಈ ಚಿತ್ರಕ್ಕೆ ಬಿಂದು ಮಲಾನಿಯವರ ಸಂಗೀತವಿದೆ. ಗುರುಪ್ರಸಾದ್ ಅವರ ಛಾಯಾಗ್ರಹಣ ಈ ಚಿತ್ರದಲ್ಲಿ ಕಾಣುತ್ತೇವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT