ಕ್ಯಾನೆ ಚಿತ್ರೋತ್ಸವ 2018: ಲಿಂಗ ಸಮಾನತೆಗೆ 82 ಮಹಿಳೆಯರ ಪ್ರತಿಭಟನೆ
ಚಿತ್ರೋದ್ಯಮದಲ್ಲಿ ಲಿಂಗ ಸಮಾನತೆ ನೀಡಬೇಕೆಂದು ಒತ್ತಾಯಿಸಿ 82 ಮಂದಿ ಮಹಿಳೆಯರು ...
ಕ್ಯಾನ್ಸೆ: ಚಿತ್ರೋದ್ಯಮದಲ್ಲಿ ಲಿಂಗ ಸಮಾನತೆ ನೀಡಬೇಕೆಂದು ಒತ್ತಾಯಿಸಿ 82 ಮಂದಿ ಮಹಿಳೆಯರು ರೆಡ್ ಕಾರ್ಪೆಟ್ ಮೇಲೆ ನಿಂತು ಪ್ರತಿಭಟನೆ ನಡೆಸಿರುವ ಘಟನೆ ಈ ವರ್ಷದ 71ನೇ ಅಂತಾರಾಷ್ಟ್ರೀಯ ಕ್ಯಾನೆ ಚಿತ್ರೋತ್ಸವದಲ್ಲಿ ನಡೆದಿದೆ.
7 ದಶಕಗಳ ಇತಿಹಾಸ ಹೊಂದಿರುವ ಕ್ಯಾನೆ ಚಿತ್ರೋತ್ಸವದಲ್ಲಿ ಚಿತ್ರರಂಗದ ಮಹಿಳಾ ನಿರ್ದೇಶಕಿಯರು, ನಿರ್ಮಾಪಕಿಯರು, ತಾರೆಯರು ಹಾಗೂ ಇನ್ನಿತರ ವೃತ್ತಿಪರರು ಪ್ರತಿಭಟನೆ ನಡೆಸಿದರು.
ಪ್ರತಿವರ್ಷ ನಡೆಯುವ ಕ್ಯಾನೆ ಚಿತ್ರೋತ್ಸವಕ್ಕೆ ವಿಶ್ವದಾದ್ಯಂತದಿಂದ ಚಿತ್ರತಾರೆಯರು, ನಿರ್ಮಾಪಕರು, ನಿರ್ದೇಶಕರು ಹಾಗೂ ಇತರ ವಿಭಾಗಗಳಲ್ಲಿ ಕೆಲಸ ಮಾಡುವವರು ಆಗಮಿಸುತ್ತಾರೆ. ಈ ಬಾರಿ ಮಹಿಳೆಯರು ಚಿತ್ರೋದ್ಯಮ ಕ್ಷೇತ್ರದಲ್ಲಿ ಸಮಾನತೆ ತರಬೇಕೆಂದು ನಟಿಯರಾದ ಸಲ್ಮಾ ಹಯೆಕ್ ಮತ್ತು ಜನೆ ಫೊಂಡ ಸೇರಿದಂತೆ ನಿರ್ದೇಶಕರಾದ ಪೆಟ್ಟಿ ಜೆಂಕಿನ್ಸ್, ಫ್ರಾನ್ಸ್ ನಿರ್ದೇಶಕಿ ಅಗ್ನೆಸ್ ವರ್ದಾ ಮೊದಲಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದರು.
ಅಲ್ಲದೆ ಈ ವರ್ಷದ ಕ್ಯಾನೆ ತೀರ್ಪುಗಾರರಾದಲ್ಲಿ ಐವರು ಮಹಿಳೆಯರಾದ ಕೆಟ್ ಬ್ಲಾಂಚೆಟ್ಟ್, ಕ್ರಿಸ್ಟನ್ ಸ್ಟಿವರ್ಟ್, ಅವ ಡುವರ್ನೈ, ಲೀ ಸಿಡೌಕ್ಸ್ ಮತ್ತು ಬುರುಂಡಿಯನ್ ಹಾಡುಗಾರ್ತಿ ಖಡ್ಜ ನಿನ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಚಿತ್ರೋದ್ಯಮದಲ್ಲಿ ಬದಲಾವಣೆ ಮತ್ತು ಸುಧಾರಣೆ ತರಲು ನಾವೆಲ್ಲರೂ ಇಂದು ಕ್ಯಾನೆ ಚಿತ್ರೋತ್ಸವದ ಈ ವೇದಿಕೆಯ ಮೆಟ್ಟಿಲಿನಲ್ಲಿ ಒಟ್ಟು ಸೇರಿದ್ದೇವೆ ಎನ್ನುತ್ತಾರೆ.
ಚಿತ್ರೋದ್ಯಮದ ಮೆಟ್ಟಿಲುಗಳು ಎಲ್ಲರಿಗೂ ಸಿಗುವಂತಾಗಬೇಕು ಎಂದು ಅವರು ಹೇಳಿದ್ದಾರೆ.